ಕುಟುಂಬಗಳ ಸಮ್ಮಿಲನಕ್ಕೆ ಕ್ರೀಡೆ ಮುಖ್ಯ ವೇದಿಕೆ: ಟಿ.ಪಿ ರಮೇಶ್ ನಾಯ್ಡು ಸಮಾಜದ ಕ್ರಿಕೆಟ್ ಪಂದ್ಯಾಟಕ್ಕೆ ತೆರೆ

May 13, 2025 - 17:55
May 13, 2025 - 17:59
 0  89
ಕುಟುಂಬಗಳ ಸಮ್ಮಿಲನಕ್ಕೆ ಕ್ರೀಡೆ ಮುಖ್ಯ ವೇದಿಕೆ: ಟಿ.ಪಿ ರಮೇಶ್  ನಾಯ್ಡು ಸಮಾಜದ ಕ್ರಿಕೆಟ್ ಪಂದ್ಯಾಟಕ್ಕೆ ತೆರೆ

ವಿರಾಜಪೇಟೆ: ಜಿಲ್ಲೆಯಲ್ಲಿ ನೆಲೆಸಿರುವ ವಿವಿಧ ಜನಾಂಗ ಬಾಂಧವರು ಕ್ರೀಡಾಕೂಟಗಳನ್ನು ಆಯೋಜಿಸುತ್ತಿವೆ. ಕುಟುಂಬಗಳನ್ನು ಒಂದೂಗೂಡಿಸುವ ಸಲುವಾಗಿ ಬಲಿಜ ನಾಯ್ಡು ಸಮಾಜವು ಕ್ರಿಕೆಟ್ ಪಂದ್ಯಾಟ ಆಯೋಜಿಸಿದೆ ಎಂದು ಸಮಾಜದ ಪ್ರಮುಖರಾದ ಟಿ.ಪಿ. ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಬಲಿಜ ನಾಯ್ಡು ಸಮಾಜದ ಅಂಗ ಸಂಸ್ಥೆಯಾದ ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ವತಿಯಿಂದ ಮೂರ್ನಾಡು ಕಾಲೇಜು ಮೈದಾನದಲ್ಲಿ 2ನೇ ವರ್ಷದ ಬಲಿಜ ಸಮಾಜದ ಕುಟುಂಬಗಳ ಕ್ರಿಕೇಟ್ ಪಂದ್ಯಾಟದ ಸಮಾರೋಪ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಟಿ.ಪಿ. ರಮೇಶ್ ಅವರು, ಕ್ರಿಡೆಯನ್ನು ಉತ್ತೇಜನ ಮಾಡುವ ಹಿನ್ನಲೆಯಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಸಂಘಟಕರು ಆಯೋಜಿಸಿದ್ದಾರೆ. ಸೋಲು- ಗೆಲುವು ಜೀವನದ ಅಂಶ ಸೋತವರು ಗೆಲ್ಲಬೇಕು. ಗೆದ್ದವರು ಸೋಲಬೇಕು.ಆಟದಲ್ಲಿ ಆಸಕ್ತಿಯನ್ನಿಟ್ಟು ಎಲ್ಲಾರು ಒಂದಾಗಿ ಕ್ರೀಡಾಕೂಟ ನಡೆದಿದೆ. ಇನ್ನು ಮಂದೆಯು ಕ್ರಿಡಾಕೂಟಗಳು ನಡೆಯಬೇಕು ಮತ್ತು ಸಮಾಜದ ಎಲ್ಲಾ ಕುಟುಂಬಗಳು ಸಕ್ರೀಯವಾಗಿ ಭಾಗವಹಿಸುವಂತಾಗಬೇಕು. ಅದ್ಧೂರಿಯಾಗಿ ಕ್ರೀಡಾಕೂಟವನ್ನು ಆಯೋಜಿಸಿದ ಸಂಘಟಕರಿಗೆ ಅಭಿನಂದನೆ ಸಲ್ಲಿಸಿದರು.

ಉದ್ಯಮಿಗಳಾದ ರೋಹಿತ್ ಆನಂದ್ ಅವರು ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಎಲ್ಲಾ ಜನಾಂಗಗಳು ಕ್ರೀಡೆಗಳನ್ನು ಆಯೋಸುತ್ತಿದ್ದು ನಮ್ಮ ಜನಾಂಗವು ಕ್ರೀಡಾಕೂಟವನ್ನು ಅಯೋಜಿಸುತಿಲ್ಲಾ ಎನ್ನುವ ಕೊರಗು ಕಾಡುತಿತ್ತು. ಆದರೇ ಇದೀಗ ಆ ಕೊರಗು ಇಲ್ಲಾದಾಗಿದೆ. ಮೂರನೇ ಅವೃತ್ತಿಯನ್ನು ಇನ್ನೂ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಲು ತೀರ್ಮಾನಿಸಲಾಗಿದೆ ಎಂದರು.ಕಾರ್ಯಕ್ರಮ ಉದ್ದೇಶಿಸಿ ದಯಾನಂದ್ ಮೈಸೂರು ಮತ್ತು ಮಂಜುನಾಥ್ ಸಿದ್ದಾಪುರ ಅವರುಗಳು ಮಾತನಾಡಿದರು.

ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ನ ಅಧ್ಯಕ್ಷರಾದ ಶ್ರೀನಿವಾಸ್ ಲೋಕನಾಥ್ ಅವರು ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಮಾತನಾಡಿ ಜನಾಂಗದ ಸರ್ವರು ಒಂದಾಗಬೇಕು, ಮತ್ತು ಕುಟುಂಬಗಳ ಮಧ್ಯೆ ಸಾಮರಸ್ಯ ಬೆಳೆಯಬೇಕು ಎನ್ನುವ ಸದುದ್ದೇಶದಿಂದ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಿಕೊಂಡು ಬರುತ್ತಿದ್ದೇವೆ. ಇದು ಎರಡನೇ ಆವೃತ್ತಿಯಾಗಿದ್ದು ಮುಂದಿನ ವರ್ಷವು ವಿವಿಧ ಕ್ರೀಡೆಗಳನ್ನು ಒಳಗೊಂಡಂತೆ ಪಂದ್ಯಾಟಗಳನ್ನು ಆಯೋಜಿಸಲಾಗುತ್ತದೆ. ಈ ಹಿಂದೆ ಸಮಾಜದ ಬಾಂಧವರು ನೀಡಿರುವ ಸಹಕಾರದಿಂದ ಕ್ರೀಡಾಕೂಟವು ಉತ್ತಮವಗಿ ಮೂಡಿಬಂದಿದೆ. ಮುಂದೆಯು ಜನಾಂಗ ಬಾಂಧವರ ಹೆಚ್ಚಿನ ಸಹಕಾರವನ್ನು ನೀಡುವಂತೆ ಮನವಿ ಮಾಡಿದರು.

 ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ಉಪದ್ಯಕ್ಷರಾದ ಟಿ.ಜಿ. ಹರ್ಷ, ಜಲಿಜ ಸಮಾಜದ ಪ್ರಮುಖರಾದ ಗಣೇಶ್ ಎಲ್.ಐ.ಸಿ. ಶ್ರೀನಿವಾಸ್ ನಾಪೋಕ್ಲು, ವಿಜಯ ಕುಮಾರ್ ಸಿದ್ದಾಪುರ, ದೇವಯ್ಯ, ಕಾವೇರಪ್ಪ ಪೆರುಂಬಾಡಿ ನವನೀತ್ ಕುಶಾಲನಗರ ಉಪಸ್ಥಿತರಿದ್ದರು.ನಾಯ್ಡುಸ್ ಸ್ಪೋರ್ಟ್ಸ ಕ್ಲಬ್ ಕೊಡಗು ಉಪದ್ಯಕ್ಷರಾದ ಟಿ.ಜಿ. ಹರ್ಷ ಅವರು ಸರ್ವರನ್ನು ಸ್ವಾಗತಿಸಿ ವಂದಿಸಿದರು.

ವರದಿ:ಕಿಶೋರ್ ಕುಮಾರ್ ಶೆಟ್ಟಿ

What's Your Reaction?

Like Like 1
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0