ಕೊಡವ ಮುಸ್ಲಿಂ ಕಪ್ ಕ್ರಿಕೆಟ್: ಕಾರ್ಯಕ್ರಮಕ್ಕೆ ಗೈರಾದ ಮಡಿಕೇರಿ ಶಾಸಕರು& ಸಚಿವರು!!! ಯಾರು ಏನೆಂದರು!..

ಕೊಡವ ಮುಸ್ಲಿಂ ಕಪ್ ಕ್ರಿಕೆಟ್: ಕಾರ್ಯಕ್ರಮಕ್ಕೆ ಗೈರಾದ ಮಡಿಕೇರಿ ಶಾಸಕರು& ಸಚಿವರು!!!  ಯಾರು  ಏನೆಂದರು!..

ಮಡಿಕೇರಿ: ಮಾಪಿಳತೋಡುವಿನಲ್ಲಿ ನಡೆದ ಕೊಡವ ಮುಸ್ಲಿಂ ಕುಟುಂಬಗಳ ನಡುವಿನ ಆಲೀರ ಕ್ರಿಕೆಟ್ ಕಪ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆಲೀರ ಕುಟುಂಬದ ಸೇವಾ ಸಂಘದ ಅಧ್ಯಕ್ಷರು ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ ಎರ್ಮು ಹಾಜಿ ಮಾತನಾಡಿ, ಶಾಸಕರಾದ ಎ. ಎಸ್. ಪೊನ್ನಣ್ಣ ನವರ ಸಹಕಾರದಿಂದ ಕ್ರೀಡಾಕೂಟ ಯಶಸ್ವಿಯಾಗಿದೆ. ಸಚಿವರು, ಮಡಿಕೇರಿ ಶಾಸಕರರನ್ನು ಕ್ರೀಡಾ ಕೂಟಕ್ಕೆ ಆಹ್ವಾನಿಸಿದ್ದೆವು ಆದರೆ ಅವರು ಗೈರು ಹಾಜರಾಗಿರುವುದು ಬೇಸರ ತಂದಿದೆ ಎಂದರು. ಪಂದ್ಯಾವಳಿ ಯಶಸ್ಸಿಗೆ ಆಲೀರ ಕುಟುಂಬದ ಸದಸ್ಯರು ಹಗಲು ರಾತ್ರಿ ಎನ್ನದೆ ಶ್ರಮಿಸಿ ಮಳೆಯ ಅಡಚಣೆ ನಡುವೆಯೂ ಅಚ್ಚುಕಟ್ಟಾಗಿ ಕ್ರೀಡಾಕೂಟವನ್ನು ನಡೆಸಿ ರುವುದು ಸಂತಸ ತಂದಿದೆ ಎಂದರು.