ಕೊಡವರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಅಪಾರ ಕೊಡುಗೆ ನೀಡಿದೆ,ಅದನ್ನ ಎಂದಿಗೂ ಮರೆಯಬಾರದು: ಎ.ಎಸ್ ಪೊನ್ನಣ್ಣ

ಬೆಂಗಳೂರು:ಬೆಂಗಳೂರಿನ ಕೊಡವ ಸಮಾಜದ ವತಿಯಿಂದ ರಾಜ್ಯ ಸರ್ಕಾರಕ್ಕೆ ಅಭಿನಂದನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟಿರ ಎಸ್ ಪೊನ್ನಣ್ಣ ಕೊಡವರ ಸಂಖ್ಯೆ ಕಡಿಮೆ ಅವರ ಕೊಡುಗೆ ದೇಶಕ್ಕೆ ಅಪಾರವಾಗಿದೆ. ಕೊಡವರಲ್ಲಿ ಅನೇಕ ಬಡವರಿದ್ದಾರೆ ಸಂವಿಧಾನ ಆಶಯದಂತೆ ಅವರನ್ನು ಆರ್ಥಿಕವಾಗಿ ಸದೃಢಗೊಳಿಸಬೇಕಾಗಿದೆ. ನಮ್ಮ ಸರ್ಕಾರ ಕೊಡವರ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದೆ. ಜಾಗ ಮಂಜೂರಾಗಿರಬಹುದು ಕೊಡವ ಎಂದು ಮರುನಾಮಕರಣ ಮಾಡಲು ಕೇಂದ್ರ ಸರ್ಕಾರದ ಅಧೀನಕ್ಕೆ ಬರುತಿದೆ ಅಭಿಪ್ರಾಯವಿತ್ತು. ಆದರೆ ನಮ್ಮ ಸರ್ಕಾರ ಸಚಿವ ಸಂಪುಟ ಅನುಮೋದನೆ ನೀಡಿ ಆದೇಶ ಮಾಡಿಸಲಾಯಿತು . ಕೆಜೆ ಜಾರ್ಜ್ ಇಚ್ಛಾ ಶಕ್ತಿಯಿಂದ ಭಾಗಮಂಡಲ ಸೇತುವೆ, ಹಾಗೂ ವಿದ್ಯುತ್ ಬಲವರ್ಧನೆ ಮತ್ತು ಉನ್ನತಿಕರಣಕ್ಕೆ 240 ಕೋಟಿ ರೂ. ಅನುದಾನ ನೀಡಿದ್ದಾರೆ. ಉಪಮುಖ್ಯಮಂತ್ರಿಗಳಾದ ಡಿಕೆ ಶಿವಕುಮಾರ್ ಅವರ ಸಹಕಾರ ಭಾಗಮಂಡಲ ಅಭಿವೃದ್ಧಿ ಗೊಂಡಿದೆ. 40 ಕೋಟಿ ಬೆಲೆಬಾಳುವ 7 ಎಕರೆ ಜಾಗವನ್ನು ಅಸಾಧ್ಯವಾದರೂ ನಮ್ಮ ಸರ್ಕಾರ ಕೇವಲ ಒಂದು ಕೋಟಿ ಹತ್ತು ಲಕ್ಷಕ್ಕೆ ಮಂಜೂರು ಮಾಡಿದೆ.ಅಲ್ಲದೆ ಸಮುದಾಯದ ಅಭಿವೃದ್ಧಿಗೆ 10 ಕೋಟಿ ಅನುದಾನ ಮಂಜೂರು ಮಾಡಿದೆ ಹೀಗೆ ಪಟ್ಟಿ ಮಾಡಿದರೆ ಸಾಕಷ್ಟಿದೆ ಕೊಡವರ ಅಭಿವೃದ್ಧಿಗೆ ಅಪಾರವಾದ ಕೊಡುಗೆ ನೀಡಿದೆ ನಮ್ಮ ಕಾಂಗ್ರೆಸ್ ಸರ್ಕಾರ ಅದನ್ನ ಎಂದೂ ಮರೆಯಲಿಕ್ಕೆ ಸಾಧ್ಯವಿಲ್ಲ ಪ್ರಜಾಪ್ರಭುತ್ವವನ್ನು ಬದಲಿಸಲು ಸಾಧ್ಯವಿಲ್ಲ ಪ್ರಾಮಾಣಿಕ, ನಿಷ್ಠೆ, ಶಿಸ್ತುಗೆ ಹೆಸರುವಾಸಿ ಯಾದವರು ಕೊಡವರು . ನಾನು ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ನಿಷ್ಠೆಯಿಂದ ಜನರ ಸೇವೆಯನ್ನು ಮಾಡುತ್ತಿದ್ದಾನೆ ಎಲ್ಲಾ ಸಮಾಜದ ಸಮುದಾಯಗಳ ಅಭಿವೃದ್ಧಿಗೆ ಕೆಲಸ ಮಾಡುತ್ತಿದ್ದೇನೆ. ಇತಿಹಾಸವನ್ನು ಮರೆಯಬಾರದು ಕಾಂಗ್ರೆಸ್ ಸರ್ಕಾರ ಕೊಡವರಿಗೆ ಅಪಾರವಾದ ಕೊಡುಗೆಯನ್ನು ನೀಡಿದೆ ಇದನ್ನ ನಾವೆಂದೂ ಮರೆಯಬಾರದು ಎಂದು ಹೇಳಿದರು.