ನಾಳೆ ವಿದ್ಯುತ್ ವ್ಯತ್ಯಯ! ಇಲ್ಲಿದೆ ಮಾಹಿತಿ 👇🏻

ಸಿದ್ದಾಪುರ :-ವಿರಾಜಪೇಟೆ 33/11ಕೆ.ವಿ ವಿದ್ಯುತ್ ಉಪ ಕೇಂದ್ರದಲ್ಲಿ ಹೆಚ್ಚುವರಿ ಶಕ್ತಿ ಪರಿವರ್ತಕವನ್ನು ಅಲವಡಿಸುವ ಕಾಮಗಾರಿ ಕೈಗೊಂಡಿರುವುದರಿಂದ ಈ ಕೇಂದ್ರದಿಂದ ಹೊರಹೊಮ್ಮುವ ಎಲ್ಲಾ ಮಾರ್ಗದಲ್ಲಿ ಮೇ, 09 ರಂದು ಬೆಳಗ್ಗೆ 8 ರಿಂದ ಸಂಜೆ 5 ಗಂಟೆಯವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು. ಆದ್ದರಿಂದ ಸಿದ್ದಾಪುರ ಶಾಲಾ ವ್ಯಾಪ್ತಿಯ ಸಿದ್ದಾಪುರ, ಕರಡಿಗೋಡು, ಕೂಡುಗದ್ದೆ, ಗುಹ್ಯ, ಮೇಕೂರು, ಮಾಲ್ದಾರೆ, ಇಂಜಿಲಗೆರೆ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಚಾವಿಸನಿನಿ ಕಾರ್ಯ ಮತ್ತು ಪಾಲನೆ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಅವರು ಕೋರಿದ್ದಾರೆ.