ಪೆರಾಜೆ: ತಡೆಗೋಡೆ ಕುಸಿತ,ಗುತ್ತಿಗೆದಾರರಿಗೆ ನೋಟೀಸ್ ಜಾರಿ, ಗುತ್ತಿಗೆದಾರನಿಂದಲೇ ಮರು ಕಾಮಗಾರಿ!

ಮಡಿಕೇರಿ: ತಾಲ್ಲೂಕಿನ ಪೆರಾಜೆ ಗ್ರಾಮದ ಅಮೆಚೂರು ಕೋಟೆ ಪೆರಾಜೆ ಕುಂಬಳಚೇರಿ ಕೂಡು ರಸ್ತೆಯ ತಡೆಗೋಡೆ ಕುಸಿದಿರುವ ಬಗ್ಗೆ ವಿವರಣೆ, ಮಡಿಕೇರಿ ತಾಲ್ಲೂಕಿನ ಕೆ. ಪರಾಜೆ-ಆಲಟ್ಟಿ-ಕಾಪುಮಲೆ ರಸ್ತೆಯಲ್ಲಿ ಅಡ್ಡಮೋರಿಗಳಿಗೆ ರಕ್ಷಣಾ ಕಾಮಗಾರಿಯ ಕೆಲಸವನ್ನು ಪ್ರಾರಂಭಿಸಲಾಗಿರುತ್ತದೆ. ಸದರಿ ರಸ್ತೆಯ ಸರಪಳಿ: 7.90 ರಲ್ಲಿ ಅಡ್ಡಮೋರಿಯ ರಕ್ಷಣಾಗೋಡೆಯು ಕುಸಿದಿದ್ದು, ರಸ್ತೆಯ ಬಲಭಾಗದಲ್ಲಿ ಚಿಕ್ಕದಾದ ಕೆರೆ ಇದ್ದು, ಈ ಕೆರೆಯಿಂದ ತೋಟಕ್ಕೆ ನೀರು ಹಾಯಿಸುವ ಸಲುವಾಗಿ ರಸ್ತೆಯ ಕೆಳಭಾಗದಲ್ಲಿ ತೋಟದ ಮಾಲೀಕರು ಪೈಪ್ ಅಳವಡಿಸಿರುತ್ತಾರೆ. 30/05/2025 ರಂದು ಸುರಿದ ಭಾರೀ ಮಳೆಯಿಂದ ಬಲಭಾಗದಲ್ಲಿರುವ ಕೆರಯು ತುಂಬಿ ಮತ್ತು ಬೆಟ್ಟದ ಮೇಲಿಂದ ಬರುವ ಭಾರೀ ನೀರಿಗೆ ರಸ್ತೆಯ ಕೆಳಭಾಗದಲ್ಲಿ ಅಳವಡಿಸಿದ್ದ ಪೈಪ್ ಹೊಡೆದು ಭೂಮಿಯ ಒಳಭಾಗದಿಂದ ನೀರು ಹರಿದು ರಕ್ಷಣಾ ಗೋಡೆಯು ಮತ್ತು ರಸ್ತೆಯ ತೋಳಿನಲ್ಲಿದ್ದ ಮಣ್ಣು ಸಹ ಜರಿದಿರುತ್ತದೆ ಮತ್ತು ಸದರಿ ರಸ್ತೆಯಲ್ಲಿ ಇದೇ ರೀತಿ 05 ಕಡೆಗಳಲ್ಲಿ ಮಣ್ಣಿನ ಬರೆಯು ಜರಿದಿರುತ್ತದೆ. ಸದರಿ ತಡೆಗೋಡೆಯನ್ನು ನಿರ್ಮಿಸುವ ಕಾಮಗಾರಿಗೆ ಯಾವುದೇ ರೀತಿಯ ಬಿಲ್ ಪಾವತಿಯಾಗಿರುವುದಿಲ್ಲ. ಗುತ್ತಿಗೆದಾರರಿಂದಲೇ ತಡೆಗೋಡೆಯನ್ನು ಮರು ನಿರ್ಮಿಸಲಾಗುವುದು ಹಾಗೂ ರಸ್ತೆಯು ಕುಸಿಯದಂತೆ ತಾತ್ಕಲಿಕವಾಗಿ ಮರಳು ಮೂಟೆಗಳಿಂದ ರಕ್ಷಣಾ ಕಾಮಗಾರಿಯನ್ನು ಕೈಗೊಳ್ಳಲಾಗುವುದೆಂದು,ಕಾರ್ಯಪಾಲಕ ಇಂಜಿನಿಯರ್ ಲೋಕೋಪಯೋಗಿ ಇಲಾಖೆ ಕೊಡಗು,ಮಡಿಕೇರಿ ವಿಭಾಗ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.