ಭಾರತೀಯ ಸೈನಿಕರ ಶ್ರೇಯಸ್ಸಿಗಾಗಿ ಸಿದ್ದಾಪುರ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ

ಸಿದ್ದಾಪುರ: ಪೆಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿ ದೇಶ ರಕ್ಷಣೆಯಲ್ಲಿ ತೊಡಗಿರುವ ಭಾರತೀಯ ಸೈನಿಕರ ಪರವಾಗಿ ಸಿದ್ದಾಪುರ ಜುಮಾ ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.ಸಿದ್ದಾಪುರ ಮಸೀದಿಯ ಖತೀಬರಾದ ನೌಫಲ್ ಹುದವಿ ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭ ಪ್ರಮುಖರಾದ ರಹೂಫ್ ಹಾಜಿ, ಉಮ್ಮರ್ ಫೈಜಿ, ಇಸ್ಮಾಯಿಲ್, ಬಶೀರ್, ಅಸ್ಕರ್, ಮುಸ್ತಫ, ಅಫ್ಸಲ್, ಹುಸೈನ್ ಸೇರಿದಂತೆ ಮತ್ತಿತರರು ಇದ್ದರು.