ಮಳೆರಾಯನ ಮುನಿಸಿ, ಮಳೆಯನ್ನೇ ಎದುರಿಸಿ ನಿಂತ ಆಲ್ ಸ್ಟಾರ್ ತಂಡ!

ಮಳೆರಾಯನ ಮುನಿಸಿ, ಮಳೆಯನ್ನೇ ಎದುರಿಸಿ ನಿಂತ ಆಲ್ ಸ್ಟಾರ್ ತಂಡ!
ಮಳೆರಾಯನ ಮುನಿಸಿ, ಮಳೆಯನ್ನೇ ಎದುರಿಸಿ ನಿಂತ ಆಲ್ ಸ್ಟಾರ್ ತಂಡ!

ಕೊಡಗು ವರ್ಲ್ಡ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಎರಡನೇ ದಿನ ಶುಕ್ರವಾರ ದಿನ ಸಂಜೆ ಮಳೆ ಸುರಿದ ಕಾರಣ ಮೈದಾನ ಒದ್ದೆಯಾಗಿ ಆಡಲು ಸಾಧ್ಯವಾಗದೆ ಶುಕ್ರವಾರ "ಡಿ" ಪೂಲ್ ಪಂದ್ಯಗಳನ್ನು ಶನಿವಾರಕ್ಕೆ ಮುಂದೂಡಲಾಗಿತ್ತು.ಆದರೆ ಭಾನುವಾರ ದಿನ ಕ್ವಾಟರ್ ಫೈನಲ್, ಸೆಮಿಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಬೇಕಿತ್ತು.ಸಂಜೆ ನಾಲ್ಕು ಗಂಟೆಗೆ ಪಂದ್ಯವನ್ನು ಆರಂಭಿಸುವ ಸಿದ್ಧತೆಯಲ್ಲಿದ್ದ ಆಲ್ ಸ್ಟಾರ್ ತಂಡಕ್ಕೆ ಭಾನುವಾರ ಮಧ್ಯಾಹ್ನ ಎರಡು ಗಂಟೆಗೆ ಸುರಿದ ಗಾಳಿ,ಮಳೆಗೆ ಇಡೀ ಮೈದಾನದಲ್ಲಿ ಸಂಪೂರ್ಣ ನೀರು ನಿಂತು ಕೆಸರು ಮಯವಾಗಿತ್ತು.ಮೈದಾನವೂ ಸಂಪೂರ್ಣವಾಗಿ ಕೆಸರಿನಿಂದ ತುಂಬಿ,ಗದ್ದೆಯಾಗಿ ಪರಿವರ್ತನೆಗೊಂಡಿತು.ಮಳೆರಾಯನ ಆರ್ಭಟ ನಿಂತ ನಂತರ ಪಂದ್ಯಾಟವನ್ನು ಮುಂದುರಿಸಲು ಕಷ್ಟ ಸಾಧ್ಯ ಎಂಬ ಪರಿಸ್ಥಿತಿ ಮೈದಾನದಲ್ಲಿ ನಿರ್ಮಾಣವಾಗಿತ್ತು.ಆದರೆ ಮಳೆರಾಯನು ತಲೆಬಾಗುವಂತೆ ಆಲ್ ಸ್ಟಾರ್ ತಂಡವು ಮೈದಾನದಲ್ಲಿ ನಿಂತಿದ್ದ ನೀರು,ಕೆಸರನ್ನು ಸಂಪೂರ್ಣವಾಗಿ ತೆರವುಗೊಳಿಸಿ ಮತ್ತೆ ಮೈದಾನವನ್ನು ಸಜ್ಜುಗೊಳಿಸಿ ಆಟಕ್ಕೆ ಅನುವುಮಾಡಿಕೊಟ್ಟರು.

ಆಲ್ ಸ್ಟಾರ್ ಯುವಕರೊಂದಿಗೆ ಮಳೆಯ ಸಂದರ್ಭದಲ್ಲಿ ಮೈದಾನ ಸಜ್ಜುಗೊಳಿಸಲು ಜಿಪಿಎಲ್ ಗೋಣಿಕೊಪ್ಪ ತಂಡ ಹಾಗೂ ಇಲ್ಲಿನ ಕ್ರಿಕೆಟ್ ತಂಡವೊಂದು ಕೂಡ ಕೈಜೋಡಿಸಿದ್ದರು.