ಮೊಗೇರ ಕಪ್:ಹಗ್ಗಜಗ್ಗಾಟ ಸ್ಟ್ರೈಕರ್ಸ್ ಚೆಯ್ಯಂಡಾಣೆ ಹಾಗೂ ಥ್ರೋ ಬಾಲ್ ನಲ್ಲಿ, ಸ್ವಾಮಿ ಕೊರಗಜ್ಜ ಚಾಂಪಿಯನ್
ಮಡಿಕೇರಿ:ಅಮೃತ ಯುವ ಮೊಗೇರ ವತಿಯಿಂದ ಮಹಿಳೆಯರಿಗೆ ಥ್ರೋಬಾಲ್ ಹಾಗೂ ಹಗ್ಗ ಜಗ್ಗಾಟ ಪಂದ್ಯ ಏರ್ಪಡಿಸಲಾಗಿತ್ತು. ಕ್ರೀಡಾಕೂಟದಲ್ಲಿ ಮಹಿಳೆಯರಿಗೆ ನಡೆಸಿದ ಥ್ರೋ ಬಾಲ್ ಪಂದ್ಯಾಟದಲ್ಲಿ ಸ್ವಾಮಿ ಕೊರಗಜ್ಜ ಮುಪ್ಪೆರಿಯ ಚಾಂಪಿಯನ್, ಆಗಿ ಹೊರ ಹೊಮ್ಮಿದರೆ ಅನುಷಾ ನಾಯಕತ್ವದ ಟೀಮ್ ಕಾರ್ಣಿಕ ಕೊಡಗು ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.ಮಹಿಳೆಯರ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಲೈಟಿಂಗ್ ಸ್ಟ್ರೈಕರ್ಸ್ ಚೆಯ್ಯಂಡಾಣೆ ಚಾಂಪಿಯನ್ ಆದರೆ ಅಮೃತ ಮೊಗೇರ ಸಿದ್ದಾಪುರ ರನ್ನರ್ಸ್ ಸ್ಥಾನ ಪಡೆದು ಕೊಂಡರು.ಪುರುಷರ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಹರಿಕಾ ಫ್ರೆಂಡ್ಸ್ ಚೆಯ್ಯಂಡಾಣೆ ವಿನ್ನರ್ಸ್ ಸ್ಥಾನ ಪಡೆದರೆ ಕಾಟೆರಮ್ಮ ಕ್ರಿಕೆಟರ್ಸ್ ಸೋಮವಾರ ಪೇಟೆ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು.
What's Your Reaction?






