ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾಟ: ಶುಭಕೋರಿದ ಶಾಸಕ ಡಾ ಮಂತರ್ ಗೌಡ

ಸುಂಟ್ಟಿಕೊಪ್ಪ:ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಕೊಡಗು ಹಾಗೂ ಸಂತ ಅಂತೋಣಿ ದೇವಾಲಯ ಸುಂಟಿಕೊಪ್ಪ ಇವರ ಸಂಯುಕ್ತಾಶ್ರಯದಲ್ಲಿ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವು ಸುಂಟಿಕೊಪ್ಪದ ಜಿ.ಎಂ.ಪಿ ಶಾಲಾ ಮೈದಾನದಲ್ಲಿ ನಡೆಯುತ್ತಿದ್ದು ,ಈ ಪಂದ್ಯಾಟಕ್ಕೆ ಅತಿಥಿಗಳಾಗಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ ಮಂತರ್ ಗೌಡರ ಆಗಮಿಸಿ ಶುಭಕೋರಿದರು.ಈ ಸಂದರ್ಭ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ, ಸುಂಟಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷ ರಫೀಕ್ ಖಾನ್,ಕ್ರೈಸ್ತ ಧಾರ್ಮಿಕ ಗುರುಗಳು ಮುಖಂಡರು ಹಾಜರಿದ್ದರು.