ಸೋಮವಾರಪೇಟೆ: ಯುವ ನಿಧಿ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್ ಖರೀದಿಸಿದ ವಿದ್ಯಾರ್ಥಿನಿ

ಸೋಮವಾರಪೇಟೆ: ಯುವ ನಿಧಿ ಗ್ಯಾರಂಟಿ ಹಣದಿಂದ ಲ್ಯಾಪ್‌ಟಾಪ್ ಖರೀದಿಸಿದ ವಿದ್ಯಾರ್ಥಿನಿ

ಸೋಮವಾರಪೇಟೆ: ಕರ್ನಾಟಕ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಯುವನಿಧಿ ಗ್ಯಾರಂಟಿ ಯೋಜನೆಯಿಂದ ತನ್ನ ಖಾತೆಗೆ ಪ್ರತಿ ತಿಂಗಳು ಜಮೆಯಾಗುತ್ತಿರುವ 3000 ರೂ. ಗಳನ್ನು ಕ್ರೂಢೀಕರಿಸಿ ತನ್ನ ಮುಂದಿನ ಭವಿಷ್ಯಕ್ಕಾಗಿ ಲ್ಯಾಪ್‌ಟಾಪ್ ಖರೀದಿಸಿದ ಸೋಮವಾರಪೇಟೆ ನಿವಾಸಿ ಇಶಾ ಆಸಿಫ್ (ಪದವೀಧರೆ) ಇವರನ್ನು ಸೋಮವಾರಪೇಟೆ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿಯ ಸಭೆಯಲ್ಲಿ ಅಭಿನಂದಿಸಿದರು.

 ಸೋಮವಾರಪೇಟೆ ತಾಲ್ಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರಾದ ಜಿ.ಎಂ ಕಾಂತರಾಜ್ ತಾಲ್ಲೂಕು ಪಂಚಾಯಿತಿ ಸಿ.ಇ.ಒ ಪರಮೇಶ್ ಕುಮಾರ್ ಹಾಗು ಸರ್ವ ಸದಸ್ಯರು ಮತ್ತು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.