ಹಾತೂರೂ: ‘ಒಕ್ಕಲಿಗರ ಪರ್ವ’ ಕ್ರೀಡಾಕೂಟ : ಕ್ರಿಕೆಟ್ ನಲ್ಲಿ ಮೈತಾಡಿ ಚಾಂಪಿಯನ್: ಹಗ್ಗಜಗ್ಗಾಟದಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ
ವರದಿ: ಚೆಪ್ಪುಡಿರ ರೋಷನ್, ಪೊನ್ನಂಪೇಟೆ.
ಗೋಣಿಕೊಪ್ಪ :-ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ವತಿಯಿಂದ ಹಾತೂರು ಶಾಲೆಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆದ ‘ಒಕ್ಕಲಿಗರ ಪರ್ವ’ ಒಕ್ಕಲಿಗರ ಕ್ರೀಡಾಕೂಟದಲ್ಲಿ ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನ ಒಕ್ಕಲಿಗ ಬಾಂಧವರು ವಿವಿಧ ಕ್ರೀಡೆಗಳಲ್ಲಿ ಪಾಲ್ಗೊಂಡು ಸಂಭ್ರಮಿಸುವ ಮೂಲಕ ಕ್ರೀಡಾ ಕೂಟಕ್ಕೆ ವರ್ಣರಂಜಿತ ತೆರೆ ಎಳೆಯಲಾಯಿತು.ಮೈತಾಡಿ ಮತ್ತು ಕೈಕೇರಿ ತಂಡಗಳ ನಡುವೆ ನಡೆದ ಕ್ರಿಕೆಟ್ ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೈಕೇರಿ ತಂಡ ನಿಗದಿತ 4 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 43 ರನ್ ಕಲೆಹಾಕಿತು. ಗೆಲ್ಲಲು 44 ರನ್ ಗಳ ಗುರಿ ಬೆನ್ನಟ್ಟಿದ ಮೈತಾಡಿ ತಂಡ, ನಾಯಕ ಸಾಗರ್ ಹಾಗೂ ಅಲೋಕ್ ಅವರ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ 3. 2 ಓವರ್ ಗಳಲ್ಲಿ ಗುರಿ ಮುಟ್ಟುವ ಮೂಲಕ ಮೈತಾಡಿ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕೈಕೇರಿ ತಂಡ ರನ್ನರ್ಸ್ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿತು. ಕೋಟೆಕೊಪ್ಪ ಎ ತಂಡ ಮೂರನೇ ಸ್ಥಾನ ಪಡೆದು ಕೊಂಡಿತು. ಹಗ್ಗ ಜಗ್ಗಾಟ, ಪುರುಷರ ವಿಭಾಗದಲ್ಲಿ ಕೋತೂರು ಮಾರಮ್ಮ ತಂಡ ಪ್ರಥಮ, ಕೋಟೆಕೊಪ್ಪ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ, ಪಿಯುಸಿ ಹಾಗೂ ಪದವಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಒಕ್ಕಲಿಗ ಜನಾಂಗದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ದೊಡ್ಡಮನೆ ವಿ. ಜೆ. ದಿನೇಶ್ ಹಾಗೂ ದೀಪು ದಿನೇಶ್ ಅವರ ವತಿಯಿಂದ ಪ್ರಾರಂಭದಿಂದ ಇದುವರೆಗೂ ಒಕ್ಕಲಿಗ ಯುವ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕೊಡಗು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ವಿ. ಪಿ. ಡಾಲು ಅವರು ಮಾತನಾಡಿ, ಮೂರು ದಿನಗಳ ಕಾಲ ನಡೆದ ‘ಒಕ್ಕಲಿಗರ ಪರ್ವ’ ಕ್ರೀಡಾಕೂಟ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಹಾರಂಗಿ ನೀರಾವರಿ ಸಲಹಾ ಸಮಿತಿ ಸದಸ್ಯರಾದ ಕೆ. ಎಸ್. ಗೋಪಾಲ ಕೃಷ್ಣ ಅವರು ಮಾತನಾಡಿದರು.ಒಕ್ಕಲಿಗ ಯುವ ವೇದಿಕೆ ಮಾಜಿ ಅಧ್ಯಕ್ಷ ವಿ. ಎನ್. ಮಹೇಶ್, ದಾನಿಗಳಾದ ವಿ. ಡಿ. ಗಣೇಶ್, ಬೋಜಮ್ಮ, ವಿ. ಡಿ. ದೀಪು ದಿನೇಶ್, ಜ್ಯೋತಿ ಪ್ರಸನ್ನ, ವಿ. ವಸಂತ, ವಿ. ರಘು, ವಿ. ಬಿ. ವಿಠಲ, ವಿ. ಜೆ. ರಾಮಯ್ಯ, ವಿ. ಸಿ. ಕಿರಣ್, ವಿ. ಎನ್. ದಿನೇಶ್, ರಮೇಶ್. ವಿ. ಇ, ಕೀರ್ತಿ. ಡಿ. ಎಸ್, ಹೆಚ್. ಜಿ. ಭವಿನ್, ರಂಜನ್. ವಿ. ಎಂ, ತಿತಿಮತಿ ಒಕ್ಕಲಿಗ ಸಂಘದ ಅಧ್ಯಕ್ಷ ಕಿರಣ್, ಕಾಫಿಬೆಳೆಗಾರ ರಾದ ವಿ. ಜಿ. ಮಧುಸೂದನ್, ಮಂಜುನಾಥ್. ವಿ. ಎನ್, ಒಕ್ಕಲಿಗ ಯುವ ವೇದಿಕೆ ಗೌರವ ಅಧ್ಯಕ್ಷ ಲೋಹಿತ್ ಗೌಡ, ಉಪಾಧ್ಯಕ್ಷ ಕೆ. ಪಿ. ಅಜಿತ್, ಕಾರ್ಯದರ್ಶಿ ವಿ. ಟಿ. ಶ್ರೇಯಸ್, ಖಜಾಂಚಿ ವಿ. ಎಸ್. ಕಿರಣ್, ಕ್ರೀಡಾ ಸಂಚಾಲಕ ವಿ. ಎಸ್. ಜಗದೀಶ್, ಸಹ ಕ್ರೀಡಾ ಸಂಚಾಲಕ ಡಿ. ಜಿ. ನಿಖಿಲ್, ಪವನ್ ಕುಮಾರ್ ಹಾಗೂ ಚಂದನ ಮಂಜುನಾಥ್, ಇನ್ನಿತರರು ಇದ್ದರು. ಒಕ್ಕಲಿಗ ಪರ್ವ ಕ್ರೀಡಾಕೂಟದ ಅಂಗವಾಗಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಗಮನ ಸೆಳೆಯಿತು.
What's Your Reaction?






