ಕಡಂಗ: ಹತ್ತನೇ ವರ್ಷದ ಕೆಪಿಎಲ್ ಕ್ರೀಡಾಕೂಟಕ್ಕೆ ಚಾಲನೆ
ಕಡಂಗ: ಕಡಂಗ ಸುತ್ತಮುತ್ತಲಿನ ಗ್ರಾಮದ ಕ್ರೀಡಾಪಟುಗಳನ್ನೊಳಗೊಂಡ 8 ತಂಡಗಳ ನಡುವೆ ನಡೆಯುವ ಕಡಂಗ ಪ್ರೀಮಿಯರ್ ಲೀಗ್ ಕ್ರಿಕೆಟ್ 10 ನೇ ಆವೃತ್ತಿಯ ಕ್ರೀಡಾಕೂಟಕ್ಕೆ ಅದ್ಧೂರಿಯ ಚಾಲನೆ ಸಿಕ್ಕಿದೆ.
4 ದಿನಗಳ ಕಾಲ ಕ್ರೀಡಾಕೂಟ ನಡೆಯಲಿದ್ದು ಕ್ರೀಡಾಕೂಟದ ಉದ್ಘಾಟನೆಯನ್ನು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಬ್ಯಾಟಿಂಗ್ ಮಾಡುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಉದ್ಘಾಟನಾ ಸಮಾರಂಭಷ ಅಧ್ಯಕ್ಷತೆಯನ್ನು ಕೆಪಿಎಲ್ ಸ್ಥಾಪಕರಾದ ಕೆ.ಎಂ ಜುನೈದ್ ವಹಿಸಿ,ಮಾತನಾಡಿ ಹತ್ತು ವರ್ಷದಿಂದ ಈ ಕ್ರೀಡೆಯು ನಡೆಯುತ್ತಿದ್ದು ನಮ್ಮ ಕ್ರೀಡಾ ಸಂಘ ದಿಂದ ಹಲವು ಸಾಮಾಜಿಕ ಕಾರ್ಯಕ್ರಮವು ನಡೆದಿದ್ದು, ಈ ವರ್ಷ ಸ್ಥಳೀಯ ಸರಕಾರಿ ಶಾಲೆಗೆ ಸಿಸಿ ಕ್ಯಾಮರಾ ಅಳವಡಿಸಲಾಗುವುದೆಂದು ಹೇಳಿದರು.
ಕ್ರೀಡಾಕೂಟವನ್ನು ಉದ್ದೇಶಿಸಿ ಮಾತನಾಡಿದ ನೆಲ್ಲಚಂಡ ಕಿರಣ್ ಕಾರ್ಯಪ್ಪ ಇಂತಹ ಕ್ರೀಡೆಗಳಿಂದ ಯುವ ಪ್ರತಿಭೆಗಳು ಗುರುತಿಸುವಂತಾಗುತ್ತದೆ. ಹಾಗೂ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ದೇಶದ ಹದಿನಾಲ್ಕು ವರ್ಷದ ಯುವ ಕ್ರೀಡಾಪಟು ವೈಭವ್ ರವರ ಪ್ರದರ್ಶನ ಕೊಂಡಾಡಿದರು. ಗ್ರಾಮೀಣ ಭಾಗದ ಯುವ ಪ್ರತಿಭೆಗಳು ಮುಂದೆ ಬರಲು ಕ್ರೀಡಾಕೂಟುಗಳು ಸಹಕಾರಿಯಾಗುತ್ತದೆ ಹಾಗೂ ಕ್ರೀಡಾಪಟುಗಳು ಶಿಸ್ತಿನಿಂದ ಕ್ರೀಡಾಕೂಟದಲ್ಲಿ ಭಾಗವಹಿಸಿದರೆ ಮಾತ್ರ ಕ್ರೀಡಾಕೂಟವು ಯಶಸ್ವಿಯಾಗುತ್ತದೆ ಹೇಳಿದರು.
ಟೀಮ್ ಎ ಬಿ ಆರ್, ಕೊಡಗು ರಾಯಲ್,ಸ್ಟ್ರೀಟ್ ಫೈಟರ್ಸ್ ಮೊದಲ ಪಂದ್ಯದಲ್ಲಿ ವಿಜಯಶಾಲಿಗಳಾಗಿ ಮುಂದಿನ ಹಂತಕ್ಕೆ ಪ್ರವೇಶಿಸಿತು. ವೇದಿಕೆಯಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಸಂಜು ಕಾಳಯ್ಯ,ಜುಮಾ ಮಸೀದಿ ಅಧ್ಯಕ್ಷರಾದ ಅಬ್ದುಲ್ಲ, ಅಬ್ದುಲ್ ರೆಹಮಾನ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಪ್ರಕಾಶ್, ಸಮಾಜ ಸೇವಕರಾದ ವಿಠಲ, ರಹೀಂ ಟಿ ಎಂ, ಅಬೂಬಕರ್ ಸಿಟಿ ಗ್ರೂಪ್, ಆಯೋಜಕರಾದ,ಇಕ್ಬಾಲ್ ಸಮದ್ ಪುಂಗಿರಿ, ಶಮೀರ್,ಪಂದ್ಯಾಂಡ ತಮ್ಮಯ್ಯ ಪ್ರತ್ತು ಸುದೀ,ಇದ್ದರು. ಕಾರ್ಯಕ್ರಮದ ಸ್ವಾಗತ ಮತ್ತು ವಂದನೆಯನ್ನು ಪತ್ರಕರ್ತ ನೌಫಲ್ ರವರು ನೆರವೇರಿಸಿದರು, ಸ್ಕೋರರಾಗಿ ಬರ್ಗೂರ್ ತಂಡದ ಸತ್ತಾರ್ ಮತ್ತು ರಮೀಜ್ ಫ್ರೀಡಂ ಕಾರ್ಯ ನಿರ್ವಹಿಸಿದರು.ಕ್ರೀಡಾಕೋಟದಲ್ಲಿ ಮಧ್ಯಾಹ್ನದ ಭೋಜನದ ವ್ಯವಸ್ಥೆಯನ್ನು ಆಯೋಜಕರು ಏರ್ಪಡಿಸಲಾಗಿದೆ.
What's Your Reaction?






