ಗೌಡ ಫುಟ್ಬಾಲ್ ಪಂದ್ಯವಾಳಿ: ಕಡ್ಯದ, ಕೊಂಪುಳಿರ, ಪೊಕ್ಕೂಳಂಡ್ರ, ಪಡಿಕಲ್ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ

ಮರಗೋಡು: ಗೌಡ ಫುಟ್ಬಾಲ್ ಅಕಾಡೆಮಿ ಕೊಡಗು ವತಿಯಿಂದ ಮರಗೋಡು ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಎಂಟನೇ ವರ್ಷದ ಗೌಡ ಫುಟ್ಬಾಲ್ ಪಂದ್ಯಾವಳಿಯಲ್ಲಿ ಕಡ್ಯದ, ಕೊಂಪುಳಿರ, ಪೊಕ್ಕೂಳಂಡ್ರ, ಪಡಿಕಲ್ ತಂಡಗಳು ಕ್ವಾರ್ಟರ್ ಫೈನಲ್ ಹಂತಕ್ಕೆ ಪ್ರವೇಶ ಪಡೆಯಿತು.
ಶುಕ್ರವಾರ ಬೈಲೇ ಹಾಗೂ ಪೊನ್ನಚ್ಚನ ತಂಡಗಳ ನಡುವಿನ ಪಂದ್ಯದಲ್ಲಿ ಪೊನ್ನಚ್ಚನ ತಂಡ ೨ ಗೋಲ್‌ಗಳಿಸಿ ಜಯಗಳಿಸಿತು. ಬೊಳ್ಳೂರು ಹಾಗೂ ಚೆಟ್ಟಿಮಾಡ ತಂಡಗಳ ನಡುವಿನ ಪಂದ್ಯದಲ್ಲಿ ಬೊಳ್ಳೂರು ತಂಡ 2 ಗೋಲ್‌ಗಳಿಸಿ ಜಯಗಳಿಸಿತು. ಪೊಕ್ಕುಳಂಡ್ರ ಹಾಗೂ ನೇಯ್ಯಣಿ ತಂಡಗಳ ನಡುವಿನ ಪಂದ್ಯದಲ್ಲಿ ಪೊಕ್ಕುಳಂಡ್ರ ತಂಡ 5 ಗೋಲ್ಗಳಿಂದ ಜಯಗಳಿಸಿತು.
ಪೊನ್ನಚ್ಚನ ಹಾಗೂ ಕಟ್ಟೆಮನೆ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ಯಾವುದೇ ಗೋಲ್ ಗಳಿಸದ ಕಾರಣ ಟ್ರೈ ಬ್ರೇಕರ್‌ನಲ್ಲಿ ಕಟ್ಟೆಮನೆ ತಂಡ ಜಯಗಳಿಸಿತು. ಪಡಿಕಲ್ ಹಾಗೂ ಕುಯ್ಯಮುಡಿ ತಂಡಗಳ ನಡುವಿನ ಪಂದ್ಯದಲ್ಲಿ ಪಡಿಕಲ್ ತಂಡ 2 ಗೋಲ್ಗಳಿಂದ ಜಯಗಳಿಸಿತು. ಕಡ್ಯದ ಹಾಗೂ ಪೋರೆಕುಂಜಿಲನ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ 1 ಗೋಲ್ಗಳಿಸಿ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಕಡ್ಯದ ತಂಡ ಜಯಗಳಿಸಿತು.
ಕೊಂಪುಳಿರ ಹಾಗೂ ಬಿಳಿಯಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲಾ 1 ಗೋಲ್‌ಗಳಿಸಿ ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಕೊಂಪುಳಿರ ತಂಡ ಗೆದ್ದು ಮುಂದಿನ ಹಂತಕ್ಕೆ ಪ್ರವೇಶ ಪಡೆಯಿತು. ಬೊಳ್ಳೂರು ಹಾಗೂ ಪೊಕ್ಕುಳಂಡ್ರ ತಂಡಗಳ ನಡುವಿನ ಪಂದ್ಯದಲ್ಲಿ ಎರಡು ತಂಡಗಳು ತಲ 1 ಗೋಲ್ ಗಳಿಸಿಕೊಂಡು ಸಮಬಲ ಸಾಧಿಸಿತು. ಟ್ರೈ ಬ್ರೇಕರ್‌ನಲ್ಲಿ ಪೊಕ್ಕುಳಂಡ್ರ ತಂಡ ಜಯಗಳಿಸಿತು.ಕಟ್ಟೆಮನೆ ಹಾಗೂ ಪಡಿಕಲ್ ತಂಡಗಳ ನಡುವಿನ ಪಂದ್ಯದಲ್ಲಿ ಕಟ್ಟೆಮನೆ ತಂಡ 1ಗೋಲ್ ಪಡಿಕಲ್ ತಂಡ 1 ಗೋಲ್ಗಳಿಸಿ ಕ್ವಾರ್ಟರ್ ಹಂತಕ್ಕೆ ಪ್ರವೇಶ ಪಡೆಯಿತು.
What's Your Reaction?






