ಜನಪರ ಕ್ರಿಕೆಟ್ ಪ್ರೀಮಿಯರ್ ಲೀಗ್: ಫ್ರೀಡಮ್ ಬಾಯ್ಸ್ ಹುಂಡಿ ಚಾಂಪಿಯನ್
ಸಿದ್ದಾಪುರ:ಮಾಲ್ದಾರೆ ಜನಪರ ಪ್ರೀಮಿಯರ್ ಲೀಗ್ ಮೂರನೇ ಆವೃತ್ತಿಯ ಕ್ರಿಕೆಟ್ ಪಂದ್ಯಾವಳಿಯಲ್ಲಿ ಫ್ರೀಡಂ ಬಾಯ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ.ಫ್ರೆಂಡ್ಸ್ ಕ್ರಿಕೆಟರ್ಸ್ ಮಾರ್ಗೊಳ್ಳಿ ತಂಡ ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.ಮಾಲ್ದಾರೆಯ ಜನಪರ ಕ್ರೀಡಾ ಮತ್ತು ಕಲಾ ಯುವಜನ ಸಂಘ(ರಿ ) ಇವರ ಆಶ್ರಯದಲ್ಲಿ ಮಾಲ್ದಾರೆ ಸರಕಾರಿ ಶಾಲೆ ಮೈದಾನದಲ್ಲಿ ಸೋಮವಾರ ಹಾಗೂ ಮಂಗಳವಾರ ಪಂದ್ಯಾಟವನ್ನು ಆಯೋಜಿಸಲಾಗಿತ್ತು. ಮಾಲ್ದಾರೆ, ಚೆನ್ನಯ್ಯನ ಕೋಟೆ, ಪಾಲಿಬೆಟ್ಟ, ಗ್ರಾಮದ 100ಕ್ಕೂ ಹೆಚ್ಚು ಕ್ರಿಕೆಟಿಗರು ಹಾಗೂ ಹತ್ತು ತಂಡಗಳು ಈ ಪಂದ್ಯಾಟದಲ್ಲಿ ಭಾಗವಹಿಸಿತ್ತು.
ತೃತೀಯ ಸ್ಥಾನವನ್ನು ಟೀ ಪ್ಲೇ ಬಾಯ್ಸ್, 4ನೇ ಸ್ಥಾನವನ್ನು ಚಾಲೆಂಜರ್ಸ್ ಚೆನ್ನಯ್ಯನ ಕೋಟೆ ತಂಡ ಪಡೆದು ಕೊಂಡಿತ್ತು. ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಫ್ರೆಂಡ್ಸ್ ಕ್ರಿಕೆಟರ್ಸ್ ಮಾರ್ಗೊಳ್ಳಿ ತಂಡದ ಬಿಪಿನ್,ಉತ್ತಮ ಬ್ಯಾಟ್ಸ್‌ಮನ್ ಟೀ ಪ್ಲೇ ಬಾಯ್ಸ್ ತಂಡ ದ ಅಲೋಕ್,ಉತ್ತಮ ಬೌಲರ್ ಪ್ರಶಸ್ತಿಯನ್ನು ಫ್ರೀಡಂ ಬಾಯ್ಸ್ ತಂಡ ರಿಯಾಜ್ ಪಡೆದುಕೊಂಡರು.
ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾಲ್ದಾರೆ ಗ್ರಾಮ ಪಂ.ಅಧ್ಯಕ್ಷೆ, ಮಾಲತಿ ಮಾತನಾಡಿ ಈ ಭಾಗದಲ್ಲಿ ಮಹಿಳಾ ಕ್ರಿಕೆಟ್ ತಂಡ ಹಾಗೂ ಸುತ್ತ ಮುತ್ತ ಗ್ರಾಮಗಳಲ್ಲಿ ಅನೇಕ ಉತ್ತಮ ಕ್ರೀಡಾಪಟುಗಳಿದ್ದಾರೆ. ಆದರೆ ಗ್ರಾಮದಲ್ಲಿ ಸುಸಜ್ಜಿತ ಆಟದ ಮೈದಾನ ಕೊರತೆ ಇದೆ.ಇತ್ತೀಚಿಗೆ ಶಾಸಕರಿಗೆ ಮನವಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಬಗೆಹರಿಸುವ ವಿಶ್ವಾಸವಿದೆ ಎಂದರು.
ಪತ್ರಕರ್ತ ಇಸ್ಮಾಯಿಲ್ ಕಂಡರೆ ಮಾತನಾಡಿ ಈ ಭಾಗದಲ್ಲಿ ಚುನಾವಣೆ ಸಂದರ್ಭ ಯುವಕರು ಮೈದಾನಕ್ಕೆ ಬೇಡಿಕೆ ಇಟ್ಟು ಚುನಾವಣೆ ಬಹಿಷ್ಕಾರ ಮಾಡಲು ಮುಂದಾಗಿ ಅದು ಅಲ್ಲಿಗೆ ಸೀಮಿತವಾಗುತ್ತದೆ.ಇಲ್ಲಿನ ಎಲ್ಲಾ ಯುವಕರು ರಾಜಕೀಯ ರಹಿತವಾಗಿ, ಜಾತಿ, ಬೇಧ ಬಿಟ್ಟು ಹೋರಾಟ ಮಾಡಬೇಕಾಗಿದೆ. ಈ ಭಾಗದಲ್ಲಿ ಹೆಚ್ಚು ಪೈಸಾರಿ ಜಾಗವಿದ್ದು ಅದನ್ನು ಬಿಡಿಸಿ ಮೈದಾನ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಈ ಭಾಗದ ಯುವಕರು ಕೆಲಸ ಮಾಡಬೇಕು ಎಂದರು.
ಇದೇ ವೇಳೆ ಸಂಘಟನೆ ವತಿಯಿಂದ ಪತ್ರಿಕಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಯುವ ಪತ್ರಕರ್ತ ಇಸ್ಮಾಯಿಲ್ ಕಂಡರೆ, ಖ್ಯಾತ ತೀರ್ಪುಗಾರ ಸ್ವರೂಪ್ ಗೌಡ ತೀರ್ಥಳ್ಳಿ, ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
What's Your Reaction?






