ಸಿದ್ದಾಪುರ: ನಾಳೆಯಿಂದ ಟರ್ಫ್ ಸೂಪರ್ ಲೀಗ್ ಕ್ರಿಕೆಟ್ ಪಂದ್ಯಾಟ: 22 ತಂಡಗಳ ನಡುವೆ ಟರ್ಫ್ ಸೂಪರ್ ಲೀಗ್ ಪ್ರಶಸ್ತಿಗಾಗಿ ಕಾದಾಟ!

ಸಿದ್ದಾಪುರ: ಸಿಟಿ ಬಾಯ್ಸ್ ಯುವಕ ಸಂಘದ ವತಿಯಿಂದ ಮೇ 18 ರಿಂದ ಸಿದ್ದಾಪುರದ ಸ್ಟ್ರೈಕರ್ಸ್ ಎಡ್ಜ್ ಟರ್ಫ್ ಮೈದಾನದಲ್ಲಿ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ ನಡೆಯಲಿದೆ ಎಂದು ಸಿಟಿ ಬಾಯ್ಸ್ ಸಂಘದ ಅಧ್ಯಕ್ಷ ಎ.ಎಸ್ ಮುಸ್ತಫ ತಿಳಿಸಿದ್ದಾರೆ. ಸಿದ್ದಾಪುರ ಗ್ರಾಮ ಪಂಚಾಯಿತ ಮಟ್ಟದ ಒಟ್ಟು 22 ತಂಡಗಳು ಭಾಗವಹಿಸಲಿದ್ದು, ಲೀಗ್ ಮಾದರಿಯ ಪಂದ್ಯಾವಳಿ ಮೇ18 ರ ಸಂಜೆ 7 ಗಂಟೆಯಿಂದ ಮೇ21 ರ ವರೆಗೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಟರ್ಫ್ ಸೂಪರ್ ಲೀಗ್ ಪಂದ್ಯಾವಳಿಯು ಹೊನಲು ಬೆಳಕಿನಲ್ಲಿ ಮಾತ್ರ ನಡೆಯಲಿದೆ ಎಂದರು ಮಾಹಿತಿ ನೀಡಿದ್ದಾರೆ.
What's Your Reaction?






