ಸುಂಟ್ಟಿಕೊಪ್ಪ:ನಾಳೆಯಿಂದ ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿ: ಜಿಲ್ಲಾಧ್ಯಕ್ಷ ಜಾನ್ಸನ್ ಪಿಂಟೋ ಮಾಹಿತಿ
ಸುಂಟ್ಟಿಕೊಪ್ಪ: ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್, ಸುಂಟಿಕೊಪ್ಪ ಸಂತ ಅಂತೋಣಿಯವರ ದೇವಾಲಯದಿಂದ ಸುಂಟಿಕೊಪ್ಪದ ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢಶಾಲಾ ಮೈದಾನದಲ್ಲಿ ಮೇ 9ರಿಂದ 11ರವರೆಗೆ ಟೆನಿಸ್ ಬಾಲ್ ಕ್ರಿಕೆಟ್ ಟೂರ್ನಿ, ವಿವಿಧ ಕ್ರೀಡಾಕೂಟ ಹಾಗೂ ಸಾಧಕರಿಗೆ ಅಭಿನಂದನಾ ಸಮಾರಂಭ ನಡೆಯಲಿದೆ.
9ರಂದು ಬೆಳಿಗ್ಗೆ 10.30ಕ್ಕೆ ಶಾಸಕ ಡಾ.ಮಂತರ್‌ಗೌಡ ಸಭಾ ಕಾರ್ಯಕ್ರಮ ಉದ್ಘಾಟಿಸಲಿದ್ದು, ಮೈಸೂರು ಧರ್ಮಪ್ರಾಂತ್ಯದ ಆಡಳಿತಾಧಿಕಾರಿ ಬರ್ನಾಡ್ ಮೋರಾಸ್ ಆರ್ಶೀವಚನ ನೀಡಲಿದ್ದಾರೆ. ಧ್ವಜಾರೋಹಣವನ್ನು ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಧರ್ಮಗುರು ವಿಜಯ್ ಕುಮಾರ್ ನೆರವೇರಿಸಲಿದ್ದು, ದಾನಿ ನಾಪಂಡ ಮುತ್ತಪ್ಪ ಉದ್ಘಾಟಿಸಲಿದ್ದಾರೆ ಎಂದು ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಅಧ್ಯಕ್ಷ ಜಾನ್ಸ್‌ನ್ ಪಿಂಟೋ ತಿಳಿಸಿದ್ದಾರೆ.
ಮಡಿಕೇರಿ ವಲಯ ಶ್ರೇಷ್ಠ ಗುರು ಜಾರ್ಜ್ ದೀಪಕ್, ಹಟ್ಟಿಹೊಳೆ ನಿರ್ಮಲ ಮಾತೆ ದೇವಾಲಯದ ಧರ್ಮ ಗುರು ಗಿಲ್ಬರ್ಟ್ ಡಿಸಿಲ್ವಾ, ವಿರಾಜಪೇಟೆ ಸಂತ ಅನ್ನಮ್ಮ ವಿದ್ಯಾ ಸಂಸ್ಥೆಯ ಪ್ರಾಂಶುಪಾಲರು ಹಾಗೂ ವ್ಯವಸ್ಥಾಪಕ ಮೊದಲೈ ಮುತ್ತು, ಕೂಡಿಗೆ ಪವಿತ್ರ ಕುಟುಂಬ ದೇವಾಲಯದ ಧರ್ಮ ಗುರು ಚಾರ್ಲ್ಸ್ ನೊರೋನ, ಕುಶಾಲನಗರ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮ ಗುರು ಎಂ.ಮಾರ್ಟಿನ್, ಸೋಮವಾರಪೇಟೆ ಇ.ಎಲ್.ವಿ.ಚರ್ಚ್ ಧರ್ಮ ಗುರು ಅವಿನಾಶ್, ಹೊಸಕೋಟೆ ಸಂತ ಸೆಬಾಸ್ಟಿಯನ್ ದೇವಾಲಯದ ಧರ್ಮ ಗುರು ಸೆಬಾಸ್ಟಿಯನ್ ಪಾಲ್ಗೊಳ್ಳಲಿದ್ದಾರೆ ಎಂದರು.
ಮೇ 11ರಂದು ಸಂಜೆ 4.30ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿರಾಜಪೇಟೆ ವಲಯ ಶ್ರೇಷ್ಠ ಗುರು ಜೇಮ್ಸ್ ಡಾಮಿನಿಕ್ ದಿವ್ಯ ಭಾಗವಹಿಸುವರು. ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರ ಎ.ಎಸ್.ಪೊನ್ನಣ್ಣ ಹಾಗೂ ಶಾಸಕ ಡಾ.ಮಂತರ್‌ಗೌಡ ಫೈನಲ್ ಪಂದ್ಯ ಉದ್ಘಾಟಿಸಿ ಬಹುಮಾನ ವಿತರಣೆ ಮಾಡಲಿದ್ದಾರೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳ ಪದಕ ಪುರುಸ್ಕೃತರಾದ ಪೊಲೀಸ್ ಇಲಾಖೆಯ ರಾಜೇಶ್, ಎಂ.ಎಸ್.ಸಿ (ಸಿ.ಎಸ್) ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಶೈನಿ ಡಿಸೋಜ, ಪ್ರಗತಿಪರ ಕೃಷಿಕ ಎಸ್.ಎಂ.ಡಿಸಿಲ್ವ, ಎಂ.ಬಿ.ಬಿ.ಎಸ್‌ನಲ್ಲಿ ಉನ್ನತ ಅಂಕ ಪಡೆದ ಡಾ.ಆನ್ ಲಿಷಾ, ಸಮಗ್ರ ಕೃಷಿಕ ಪಿ.ಎಂ.ಬಿಜು, ಪಿ.ಎಚ್.ಡಿ ಪಡೆದ ನಿಲನ ಜೇಮ್ಸ್, ಟೆರೆಶಿಯನ್ ಪ್ರೆಸ್ ಮಾಲೀಕ ಪೌಲ್ ಕ್ಸೇವಿಯರ್, ನಾಟಿ ವೈದ್ಯ ಜಾನ್ ಲೋಬೋ, ಉರಗ ತಜ್ಞ ಪಿಯೂಸ್ ಪೆರೆರಾ ಅವರನ್ನು ಗೌರವಿಸಲಾಗುವುದು ಎಂದರು.
ಅಸೋಸಿಯೇಷನ್‌ನ ಕಾರ್ಯಧ್ಯಕ್ಷ ವಿ.ಎ.ಲಾರೆನ್ಸ್ ಮಾತನಾಡಿ, ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ಜಿಲ್ಲೆಯ 5 ತಾಲ್ಲೂಕುಗಳಲ್ಲಿಯೂ ಘಟಕಗಳನ್ನು ಸ್ಥಾಪಿಸಿ, ತಮ್ಮದೇ ಆದ ಛಾಪನ್ನು ಮೂಡಿಸುತ್ತಿದೆ. ಕೇವಲ ಕ್ರೀಡೆ ಮಾತ್ರವಲ್ಲದೆ ಸಮುದಾಯದ ಏಳಿಗಾಗಿ ವಿವಿಧ ಸಾಮಾಜಿಕ ಕಳಕಳಿಯನ್ನು ಹೊಂದಿದೆ ಎಂದರು.ಕ್ರೀಡಾ ಕೂಟ ಆಚರಣಾ ಸಮಿತಿ ಸಂಚಾಲಕ ಪಿ.ಎಫ್.ಸೆಬಾಸ್ಟಿಯನ್ ಮಾತನಾಡಿ, ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಈಗಾಗಲೇ 26 ತಂಡಗಳು ನೋಂದಾಯಿಸಿಕೊಂಡಿದೆ. ಕಾರ್ಯಕ್ರಮದಲ್ಲಿ ಸುಮಾರು 3 ಸಾವಿರ ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಎಲ್ಲಾ ಸಮುದಾಯ ಬಾಂಧವರಿಂದಲೂ ಸಂಪೂರ್ಣ ಸಹಕಾರ ದೊರೆತಿದೆ’ ಎಂದರು.ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಜೋಕಿಮ್ ವಾಸ್, ಮಹಿಳಾ ಘಟಕದ ಉಪಾಧ್ಯಕ್ಷೆ ಗ್ರೇಸಿ ಡೇವಿಡ್, ಕಾರ್ಯಕಾರಿ ಮಂಡಳಿ ಸದಸ್ಯ ಪಿ.ಎಂ.ಬಿಜು ಇದ್ದರು.
What's Your Reaction?






