ಸೆ.21ರಂದು ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 158ನೇ ಜನ್ಮದಿನಾಚರಣೆ

ಸೆ.21ರಂದು ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ 158ನೇ ಜನ್ಮದಿನಾಚರಣೆ

ಮಡಿಕೇರಿ: ಸೆ 21ರಂದು ಅಲ್ಲಾರಂಡ ರಂಗಚಾವಡಿ ಮತ್ತು ಕೊಡವ ಸಮಾಜ ಮಡಿಕೇರಿ ಸಹಯೋಗದಲ್ಲಿ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿಯ ೧೫೮ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ನಗರದ ಕೊಡವ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ರಂಗಚಾವಡಿಯ ಅಧ್ಯಕ್ಷ ಅಲ್ಲಾರಂಡ ವಿಠಲ ನಂಜಪ್ಪ ತಿಳಿಸಿದರು.

 ಸೆ.೨೧ರಂದು ೧೦.೩೦ ಗಂಟೆಗೆ ಅಲ್ಲಾರಂಡ ವಿಠಲ ನಂಜಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಅಪ್ಪಚ್ಚಕವಿ ಕಲಾಭವನ ನಿರ್ಮಾಣ ಸಮಿತಿ ಅಧ್ಯಕ್ಷ ಅಪ್ಪನೆರವಂಡ ಮನೋಜ್ ಮಂದಪ್ಪ ಉದ್ಘಾಟಿಸಲಿದ್ದಾರೆ ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಅಪ್ಪಚ್ಚಕವಿಯ ಬದುಕುಬವಣೆ ಸಂಬಂಧಿತ ೩೦ ನಿಮಿಷಗಳ ಸಾಕ್ಷಚಿತ್ರ ಪ್ರದರ್ಶನ ನಡೆಯಲಿದೆ.

ನಂತರ ತೇನೆತ್ತಕಾರ, ನೆಲಂಜಪ್ಪೆ, ಕೊಡಗ್‌ರ ಗೌರಮ್ಮಂಡ ಕಥೆಮೊತ್ತೆ ಪುಸ್ತಕಗಳ ಕುರಿತು ಮಾತುಕತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಗೋಷ್ಠಿಯಲ್ಲಿ ರಂಗಚಾವಡಿಯ ಸದಸ್ಯೆ ಬೊಟ್ಟೋಳಂಡ ನಿವ್ಯ ದೇವಯ್ಯ, ಪ್ರಮುಖರಾದ ಐಲಪಂಡ ಸುಬ್ಬಯ್ಯ ದೇವಯ್ಯ ಇದ್ದರು.