ಅಂಬಟ್ಟಿಯಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

ಅಂಬಟ್ಟಿಯಲ್ಲಿ ಸಂಭ್ರಮದ ಈದ್-ಮಿಲಾದ್ ಆಚರಣೆ

ವಿರಾಜಪೇಟೆ: ಪ್ರವಾದಿ ಮುಹಮ್ಮದ್ (ಸ.ಅ.ವ) ಅವರ 1500ನೇ ಜನ್ಮದಿನವನ್ನು ಜುಮಾ ಮಸೀದಿ ಹಾಗೂ ತನ್ವೀರುಲ್ ಇಸ್ಲಾಂ ಮದರಸ ವತಿಯಿಂದ ಅಂಬಟ್ಟಿಯಲ್ಲಿ ಶ್ರದ್ಧಾಭಕ್ತಿ ಹಾಗೂ ವಿಜೃಂಭಣೆಯಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಅದ್ಧೂರಿಯಾಗಿ ಈದ್ ಮಿಲಾದ್ ಸಂದೇಶ ನಡೆಯಿತು. ಹಸಿರು ಧ್ವಜಗಳೊಂದಿಗೆ ಮಕ್ಕಳು, ಯುವಕರು, ಹಿರಿಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ನಬಿಯವರ ಪ್ರೀತಿಯ ಘೋಷಣೆಗಳನ್ನು ಮೊಳಗಿಸಿದರು. ಊರಿನ ಬೀದಿಗಳಲ್ಲಿ ಮೆರವಣಿಗೆ ಸಾಗಿ, ಧಾರ್ಮಿಕ ಉತ್ಸಾಹದ ಜೊತೆಗೆ ಸೌಹಾರ್ದತೆಯ ಸಂದೇಶ ಹರಡಿತು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಎಲ್ಲರ ಮನ ಸೆಳೆಯಿತು. ವಿಶೇಷ ಆಕರ್ಷಣೆಯಾಗಿ ಸೀನಿಯರ್ ದಫ್ ಹಾಗೂ ಜೂನಿಯರ್ ದಫ್ ತಂಡಗಳು ತಮ್ಮ ಮನೋಹರವಾದ ಪ್ರದರ್ಶನ ಗಮನಸೆಳೆಯಿತು.