ಅಯ್ಯಂಗೇರಿಯ ಮಹಿಳೆ ಬೆಳ್ಳಾರೆಯಲ್ಲಿ ಕಾಣೆ: ಮಾಹಿತಿ ನೀಡಲು ಮನವಿ

ಅಯ್ಯಂಗೇರಿಯ ಮಹಿಳೆ ಬೆಳ್ಳಾರೆಯಲ್ಲಿ ಕಾಣೆ: ಮಾಹಿತಿ ನೀಡಲು ಮನವಿ

ನಾಪೋಕ್ಲು :ಸುಳ್ಯತಾಲೂಕಿನ ಬೆಳ್ಳಾರೆಯಲ್ಲಿ ಅಯ್ಯಂಗೇರಿಯ ಮಹಿಳೆಯೋರ್ವರು ಕಾಣೆಯಾಗಿದ್ದು ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಅಯ್ಯಂಗೇರಿ ಗ್ರಾಮದ ನಿವಾಸಿ ಬಿ.ಕೆ.ಫಾತಿಮಾ (35 ) ಎಂಬವರು ಕಾಣೆಯಾಗಿದ್ದು ಈ ಬಗ್ಗೆ ತಾಯಿ ಮರಿಯಮ್ಮ ಎಂಬವರು ಬೆಳ್ಳಾರೆ ಠಾಣೆಯಲ್ಲಿ ದೂರು ನೀಡಿದ್ದಾರೆ. ದೂರಿನಲ್ಲಿ ನನ್ನ ದೊಡ್ಡ ಮಗಳು ಫಾತಿಮಾ ಎಂಬವರಿಗೆ ಒಟ್ಟು 4 ಮಕ್ಕಳ ಪೈಕಿ ಫಾತಿಹ್ ಅಬ್ದುಲ್ ರಹಿನಾನ್ ಎಂಬುವವರು ದಾರುಲ್ ಇರ್ಷಾದ್ ತಂಬಿನಮಕ್ಕಿ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾಭಸ ಬೆ ಪಡೆದುಕೊಂಡು,ಬೆಳ್ಳಾರೆ ಶಾಲೆಯಲ್ಲಿ ಶಾಲಾ ಶೈಕ್ಷಣಿಕ ಶಿಕ್ಷಣ ಪಡೆಯುತ್ತಿದ್ದಾರೆ.ಸಣ್ಣ ಮಕ್ಕಳಿಬ್ಬರು ನನ್ನ ಜೊತೆ ಮನೆಯಲ್ಲಿಯೇ ಇರುವುದಾಗಿದೆ.ದಿನಾಂಕ 26.7.2025 ರಂದು ದೊಡ್ಡ ಮಕ್ಕಳ ಶಾಲೆಯಲ್ಲಿ ಪೋಷಕರ ಸಭೆ ಇದ್ದುದರಿಂದ ಫಾತಿಮಾಳು ದಿನಾಂಕ 25.07-2025 ರಂದು ಸಂಜೆ 4.45 ಗಂಟೆಗೆ ಪೆರಾಜೆಯಲ್ಲಿರುವ ಮಹಮ್ಮದ್ ರವರ ಮನೆಗೆ ಹೋಗಿ ಅಲ್ಲಿಂದ ಮರುದಿನ ದಿನಾಂಕ : 26-07-2025 ರಂದು ಬೆಳಿಗ್ಗೆ ಫಾತಿಹ್ ಎಂಬಾತನು ವಿದ್ಯಾಭ್ಯಾಸ ಮಾಡುವ ಅಯ್ಯನಕಟ್ಟೆ ಶಾಲೆಯ ಪೋಷಕರ ಸಭೆಯಲ್ಲಿ ಭಾಗವಹಿಸಿ ಬಳಿಕ ಮನೆಗೆ ಬಾರದೆ ಕಾಣೆಯಾಗಿರುತ್ತಾರೆ ಎಂದು ಪೊಲೀಸ್ ದೂರು ನೀಡಿದ್ದಾರೆ. ಕಾಣೆಯಾದವರಿಗೆ ಕನ್ನಡ ,ಮಲಯಾಳ ಭಾಷೆ ಮಾತಾಡುವವರಾಗಿದ್ದು ಯಾರಾದರು ಇವರನ್ನು ಕಂಡರೆ ಸ್ಥಳೀಯ ಪೊಲೀಸ್ ಠಾಣೆಗೆ ಅಥವಾ ಕೆಳಗೆ ನೀಡಿರುವ ಸಂಬಂಧಿಕರ ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. Mob -9686530974 7019095570