Shoes ಚಾಲೆಂಜ್ ಗಾಗಿ ನದಿಗೆ ಹಾರಿ ಕೇಸ್ ಹಾಕಿಸಿಕೊಂಡ ಯುವಕ!

Shoes ಚಾಲೆಂಜ್ ಗಾಗಿ ನದಿಗೆ ಹಾರಿ ಕೇಸ್ ಹಾಕಿಸಿಕೊಂಡ ಯುವಕ!

ಮಡಿಕೇರಿ:05 ಸಾವಿರ ರೂ ಮೌಲ್ಯದ ಶೂಗಾಗಿ ಸ್ನೇಹಿತನಿಗೆ ಸವಾಲು ಹಾಕಿ ನದಿಗೆ ಹಾರಿದ ಯುವಕನ ವಿರುದ್ಧ ಇದೀಗ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ್ದಾರೆ. ದುಸ್ಸಾಹಸ ಮಾಡಿದ ಕುಂಜಿಲ ಗ್ರಾಮದ ಎಂ.ಎನ್. ಸಲ್ಮಾನ್ (ಚೆಲ್ಲು-24) ವಿರುದ್ಧ ಬಿಎನ್‌ಎಸ್ 2025 ಸೆಕ್ಷನ್ 125 ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಯಾವುದೇ ಮುನ್ನೆಚ್ಚರಿಕೆ ಕೈಗೊಳ್ಳದೆ ಕಕ್ಕಬ್ಬೆ ಸೇತುವೆ ಮೇಲಿನಿಂದ ನದಿಗೆ ಸಲ್ಮಾನ್ ಹಾರಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಈ ಹಿನ್ನೆಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.