ಸೋಮವಾರಪೇಟೆ;ಪತ್ನಿಯ ಹೆಸರಿಗೆ ಎಲ್.ಐ.ಸಿ ಪಾಲಿಸಿ ನೋಂದಣಿ ಮಾಡುವ ಬದಲು ಪತಿಯ ಹೆಸರಗೆ ನೋಂದಣಿ‌ ಮಾಡಿದ್ದ ಇನ್ಸೂರೆನ್ಸ್ ಕಂಪನಿ ;ಮುಂದೇನಾಯಿತು ಗೊತ್ತೇ!

ಸೋಮವಾರಪೇಟೆ;ಪತ್ನಿಯ ಹೆಸರಿಗೆ ಎಲ್.ಐ.ಸಿ ಪಾಲಿಸಿ ನೋಂದಣಿ ಮಾಡುವ ಬದಲು ಪತಿಯ ಹೆಸರಗೆ ನೋಂದಣಿ‌ ಮಾಡಿದ್ದ ಇನ್ಸೂರೆನ್ಸ್ ಕಂಪನಿ ;ಮುಂದೇನಾಯಿತು ಗೊತ್ತೇ!

ಸೋಮವಾರಪೇಟೆ;ತಾಲ್ಲೂಕಿನ ಹುಲಸೆ ಗ್ರಾಮದ ನಿವಾಸಿಯಾದ ಶ್ರೀಮತಿ ಶಿಲ್ಪ ರವರು ಮಹೀಂದ್ರ ಗೂಡ್ಸ್ ಕ್ಯಾರಿಯರ್ ವಾಹನವನ್ನು ಖರೀದಿಸಿದ್ದರ. ಸದರಿ ವಾಹನವು ಶಿಲ್ಪ ರವರ ಹೆಸರಿನಲ್ಲಿ ನೋಂದಣಿಯಾಗಿತ್ತು. ಹೆಚ್.ಡಿ.ಎಫ್.ಸಿ. ಲೈಫ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್, ಮುಂಬೈ ರವರಿಂದ ಎಲ್.ಐ.ಸಿ. ಪಾಲಿಸಿಯನ್ನು ಮಾಡಿಸಿದ್ದು, ಇದು ಇನ್ಸೂರೆನ್ಸ್ ಕಂಪನಿಯವರ ನಿರ್ಲಕ್ಷ್ಯತನದಿಂದ ಶಿಲ್ಪ ರವರ ಹೆಸರಿಗೆ ನೋಂದಣಿ ಮಾಡುವ ಬದಲು ಅವರ ಪತಿಯಾದ ಶಿವಕುಮಾರ್ ರವರ ಹೆಸರಿಗೆ ಪಾಲಿಸಿ ನೋಂದಣಿಯಾಗಿತ್ತು.

 2025ನೇ ಇಸವಿಯಲ್ಲಿ ಶ್ರೀಮತಿ ಶಿಲ್ಪ ರವರು ಮರಣ ಹೊಂದಿದ್ದರು. ಅವರ ಪತಿಯಾದ ಶಿವಕುಮಾರ್ ಒಬ್ಬರೇ ತನ್ನ ವಾರಸ್ಸುದಾರರಾಗಿರುತ್ತಾರೆ. ಪಾಲಿಸಿಯ ಹೆಸರನ್ನು ತನ್ನ ಹೆಸರಿಗೆ ಬದಲಾವಣೆ ಮಾಡಿಕೊಡಿ ಎಂದು ಹಲವು ಬಾರಿ ಕೇಳಿಕೊಂಡಾಗಲೂ ಇನ್ಸೂರೆನ್ಸ್ ಕಂಪನಿಯವರು ಹೆಸರು, ದಿನಾಂಕ, ಪೇಮೆಂಟ್ ಹಾಗೂ ಕೈಮಿನಲ್ಲಿ ವ್ಯತ್ಯಾಸ ಇದೆ ಎಂದು ಇಲ್ಲಸಲ್ಲದ ಕಾರಣಗಳನ್ನು ಹೇಳಿ ಕೈಮನ್ನು ತಿರಸ್ಕರಿಸಿದ್ದರು.

ಇದರಿಂದ ದೂರುದಾರರಿಗೆ ತುಂಬಲಾರದ ನಷ್ಟ ಹಾಗೂ ಮಾನಸಿಕ ವೇದನೆ ಉಂಟಾಗಿತ್ತು. ಆದ್ದರಿಂದ ತನಗುಂಟಾದ ಸೇವಾ ನ್ಯೂನತೆಗೆ ಪರಿಹಾರವಾಗಿ ಸದರಿ ವಿಮಾ ಮೊತ್ತವನ್ನು ವಿಮಾ ಕಂಪನಿಯವರಿಂದ ಕೊಡಿಸಿಕೊಡಬೇಕೆಂದು ಕೋರಿ ಕೊಡಗು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರನ್ನು ಸಲ್ಲಿಸಿದ್ದರು.

ಪ್ರಕರಣವನ್ನು ಆಯೋಗವು ದಾಖಲು ಮಾಡಿಕೊಂಡು ಉಭಯ ಪಕ್ಷಗಾರರ ವಾದ ವಿವಾದಗಳನ್ನು ಕೇಳಿ, ದಾಖಲಾತಿಗಳನ್ನು ಪರಿಶೀಲಿಸಿದ ನಂತರ ಲೋನ್ ತೆಗೆದುಕೊಂಡ ವ್ಯಕ್ತಿ ಮರಣ ಹೊಂದಿದ್ದರೂ ಇನ್ಸೂರೆನ್ಸ್ ಮೊತ್ತವನ್ನು ಲೋನ್‌ಗೆ ವಜಾ ಮಾಡಿಕೊಳ್ಳುವುದೇ Fair Contract ಎಂದು ಪರಿಗಣಿಸಿದ ಜಿಲ್ಲಾ ಗ್ರಾಹಕರ ಆಯೋಗದ ಪ್ರಭಾರ ಅಧ್ಯಕ್ಷರಾದ ಶ್ರೀಮತಿ ಡಾ॥ ಸಿ.ರೇಣುಕಾಂಬ ಹಾಗೂ ಸದಸ್ಯರಾದ ಶ್ರೀಮತಿ ಗೌರಮ್ಮಣ್ಣಿ ರವರುಗಳು ಗಮನಿಸಿ ಸದರಿ ದೂರನ್ನು ಭಾಗಶ: ಪುರಸ್ಕರಿಸಿ, ದೂರುದಾರರು ಇಲ್ಲಿಯವರೆವಿಗೂ ಕಟ್ಟಿರುವ ಲೋನ್ ಮೊತ್ತವನ್ನು ಕಳೆದು ಬಾಕಿ ಇರುವ ಸಾಲವನ್ನು ಲೋನ್‌ಗೆ ವಜಾಗೊಳಿಸಿಕೊಳ್ಳಲು ಆದೇಶ ನೀಡಿರುತ್ತಾರೆ.

ನಂತರ ದೂರುದಾರರಿಗೆ ಉಂಟಾಗಿರುವ ಸೇವಾ ನ್ಯೂನತೆ ಹಾಗೂ ವ್ಯಾಜ್ಯದ ಖರ್ಚುವೆಚ್ಚಗಳಿಗೆ 60,000/- ರೂ.ಗಳನ್ನು ಎದುರುದಾರರು ದೂರುದಾರರಿಗೆ ಪಾವತಿಸಬೇಕೆಂದು ಆದೇಶ ನೀಡಿದ್ದಾರೆ ಎಂದು ಸಹಾಯಕ ಆಡಳಿತಾಧಿಕಾರಿಗಳು,ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತಿಳಿಸಿದ್ದಾರೆ.