ಕೃಷಿ ಮಾಹಿತಿ ತರಬೇತಿ ಕಾರ್ಯಕ್ರಮ

ಕೃಷಿ ಮಾಹಿತಿ ತರಬೇತಿ ಕಾರ್ಯಕ್ರಮ

ಮಡಿಕೇರಿ ಮಾ.06:-ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ (ಆರ್‍ಕೆವಿವೈ-ಆರ್‍ಎಎಪ್‍ಟಿಎಎಆರ್) ಪ್ರಾಯೋಜಿತ “ಕಾಳುಮೆಣಸು ಮತ್ತು ಏಲಕ್ಕಿಯ ವೈಜ್ಞಾನಿಕ ಕೃಷಿ ಪದ್ದತಿಗಳು” ಎಂಬ ವಿಷಯದ ಬಗ್ಗೆ ಒಂದು ದಿನದ ರೈತರ ತರಬೇತಿ ಕಾರ್ಯಕ್ರಮವು ಗುರುವಾರ ಅಪ್ಪಂಗಳದ ಪ್ರಾದೇಶಿಕ ಕೇಂದ್ರದ ಐ.ಸಿ.ಎ.ಆರ್ ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆಯಲ್ಲಿ ನಡೆಯಿತು

ತರಬೇತಿ ಕಾರ್ಯಕ್ರಮವನ್ನು ವಂದೇ ಮಾತರಂ ಮತ್ತು ಐ.ಸಿ.ಎ.ಆರ್. ಗೀತೆಯೊಂದಿಗೆ ಪ್ರಾರಂಭಿಸಲಾಯಿತು. ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‍ಆರ್ ಹಿರಿಯ ವಿಜ್ಞಾನಿ ಡಾ.ಹೊನ್ನಪ್ಪ ಆಸಂಗಿ ಅವರು ಸ್ವಾಗತಿಸಿದರು. 

ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಡಾ.ಬಿ.ಎಸ್.ಚಂದ್ರಶೇಖರ ಅವರು ಕಾರ್ಯಕ್ರಮ ಉದ್ಘಾಟಿಸಿ ಸಂಬಾರ ಬೆಳೆಗಳು ಹೆಚ್ಚಿನ ಮೌಲ್ಯದ ಮತ್ತು ಉತ್ತಮ ಆದಾಯ ನೀಡುವ ಬೆಳೆಗಳಾಗಿವೆ. ಉತ್ತಮ ಕೃಷಿ ಪದ್ದತಿಗಳನ್ನು ಅಳವಡಿಸಿಕೊಳ್ಳುವ ಅಗತ್ಯ ಮತ್ತು ಆಧುನಿಕ ತಂತ್ರಜ್ಞಾನಗಳ ಬಳಕೆಯ ಆದ್ಯತೆಯನ್ನು ತಿಳಿಸಿದರು. 

ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‍ಆರ್ ಪ್ರಧಾನ ವಿಜ್ಞಾನಿ ಡಾ.ಎಸ್.ಜೆ.ಅಂಕೆಗೌಡ ಅವರು ಮಾತನಾಡಿ ಐ.ಸಿ.ಎ.ಆರ್.-ಐ.ಐ.ಎಸ್.ಆರ್. ನಲ್ಲಿ ಸಂಬಾರ ಬೆಳೆಗಳ ಬಗ್ಗೆ ನಡೆಯುತ್ತಿರುವ ಸಂಶೋಧನೆಯ ಬಗ್ಗೆ ಮಾಹಿತಿ ನೀಡಿದರು. ಕರ್ನಾಟಕದಲ್ಲಿ ಕಾಳುಮೆಣಸು ಮತ್ತು ಏಲಕ್ಕಿ ಉತ್ಪಾದನೆಯ ಬಗ್ಗೆ ಮಾಹಿತಿ ನೀಡಿದರು. 

ಮರಗೋಡು ಪ್ರಗತಿಪರ ರೈತರಾದ ಪ್ರೇಮ ಗಣೇಶ್ ಅವರು ತಮ್ಮ ಕಾಳುಮೆಣಸಿನ ಕೃಷಿ ಅನುಭವವನ್ನು ಹಂಚಿಕೊಂಡರು. 

ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‍ಆರ್ ಹಿರಿಯ ವಿಜ್ಞಾನಿಗಳು ಮತ್ತು ಮುಖ್ಯಸ್ಥರಾದ ಡಾ.ಜಿ.ಎ.ರಾಜಣ್ಣ ಅವರು ಮಾತಾನಾಡಿ ಭಾರತದಿಂದ ಸಂಬಾರ ಬೆಳೆಗಳ ರಫ್ತಿನ ಬಗ್ಗೆ ಕಿರುಪರಿಚಯವನ್ನು ನೀಡಿದರು. 

ಕೀಟನಾಶಕಗಳ ಬಳಕೆಯನ್ನು ಕಡಿಮೆ ಮಾಡುವುದು, ಉತ್ತಮ ತಳಿಗಳ ಆಯ್ಕೆ, ಸಮಗ್ರ ಪೆÇೀಷಕಾಂಶ ನಿರ್ವಹಣೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.

ತರಬೇತಿ ಕಾರ್ಯಾಗಾರದಲ್ಲಿ ಕಾಳುಮೆಣಸು ಮತ್ತು ಏಲಕ್ಕಿಯ ತಳಿ ವೈವಿಧ್ಯತೆ, ಗುಣಮಟ್ಟದ ಸಸ್ಯಾಭಿವೃದ್ದಿ ವಿಧಾನಗಳು, ನೀರು ಮತ್ತು ಪೋಷಕಾಂಶಗಳ ನಿರ್ವಹಣೆ, ಅಂತರ ಬೆಳೆ ಹಾಗೂ ರೋಗ ಮತ್ತು ಕೀಟ ನಿರ್ವಹಣೆ ಬಗ್ಗೆ ಐ.ಸಿ.ಎ.ಆರ್.-ಐ.ಐ.ಎಸ್.ಆರ್, ಪ್ರಾದೇಶಿಕ ಕೇಂದ್ರದ ವಿಜ್ಞಾನಿಗಳು ಮಾಹಿತಿ ನೀಡಿದರು. 

ಅಪ್ಪಂಗಳ ಪ್ರಾದೇಶಿಕ ಕೇಂದ್ರದ ಐಸಿಎಆರ್-ಐಐಎಸ್‍ಆರ್ ಹಿರಿಯ ವಿಜ್ಞಾನಿ ಡಾ.ಅಕ್ಷಿತ ಎಚ್.ಜೆ. ಅವರು ವಂದಿಸಿದರು. ಈ ತರಬೇತಿಯಲ್ಲಿ ಕರ್ನಾಟಕ, ಕೇರಳ ಮತ್ತು ತಮಿಳು ನಾಡಿನ ವಿವಿಧ ಜಿಲ್ಲೆಗಳಿಂದ 110 ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.