ಮಾರ್ಚ್ 08ರಂದು ಬಿಟ್ಟಂಗಾಲದಲ್ಲಿ‌ ಆರೋಗ್ಯ ‌ತಪಾಸಣಾ ಶಿಬಿರ

Mar 7, 2026 - 00:42
 0  147
ಮಾರ್ಚ್ 08ರಂದು ಬಿಟ್ಟಂಗಾಲದಲ್ಲಿ‌ ಆರೋಗ್ಯ ‌ತಪಾಸಣಾ ಶಿಬಿರ

ವಿರಾಜಪೇಟೆ: ನ್ಯಾಷನಲ್ ಮೆಡಿಕೋಸ್ ಅರ್ಗನೈಸೇಶನ್, ಸೇವಾ ಭಾರತಿ ಕೊಡಗು ಇವರ ಸಂಯುಕ್ತ ಆಶ್ರಯದಲ್ಲಿ ಮಾ. 8ರಂದು ಬಿಟ್ಟಂಗಾಲದ ವಿಜಯಾ ಬ್ಯಾಂಕ್ ಕಟ್ಟಡದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಆಯೋಜಕರಾದ ಬಿಟ್ಟಂಗಾಲ ಮಂಡಲದ ಹಿಂದೂ ಸಂಗಮ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದೆ.

ಶಿಬಿರವು ಬೆಳಿಗ್ಗೆ 10 ಗಂಟೆಯಿಂದ ಮದ್ಯಾಹ್ನ 2 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ರಕ್ತದೊತ್ತಡ ತಪಾಸಣೆ, ಮಧುಮೇಹ ತಪಾಸಣೆ, ಬಿಎಂಐ ಮೌಲ್ಯಮಾಪನ, ಉಚಿತ ಔಷಧಿಗಳ ವಿತರಣೆ, ಸೇರಿದಂತೆ ಆಯುಷ್ಮಾನ್ ಕಾರ್ಡ್ ಮಾಡಿ ಕೊಡಲಾಗುತ್ತದೆ. ಶಿಬಿರಕ್ಕೆ ಬರುವಾಗ ಆಧಾರ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಲಿಂಕ್ ಆಗಿರುವ ಮೊಬೈಲ್ ತರುವಂತೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

What's Your Reaction?

Like Like 0
Dislike Dislike 0
Love Love 0
Funny Funny 0
Angry Angry 0
Sad Sad 0
Wow Wow 0