ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರ ಪದಗ್ರಹಣ: ನೂತನ ಜಿಲ್ಲಾಧ್ಯಕ್ಷೆಯಾಗಿ ದೀಪಿಕಾ ಕರುಣ

ಕುಶಾಲನಗರ : ಅಖಿಲ ಭಾರತ ವೀರಶೈವ ಮಹಾಸಭಾದ ಕೊಡಗು ಜಿಲ್ಲೆಯ ಮಹಿಳಾ ಘಟಕದ ನೂತನ ಅಧ್ಯಕ್ಷರಾಗಿ ಕುಶಾಲನಗರದ ದೀಪಿಕಾ ಕರುಣ ನೇತೃತ್ವದ ತಂಡ ಭಾನುವಾರ ಸೇವಾದೀಕ್ಷೆ ಸ್ವೀಕರಿಸಿತು. ರಾಜ್ಯ ಮಹಿಳಾ ಘಟಕದ ನಿರ್ದೇಶಕಿ ಸುಮಾ ಸುದೀಪ್ ಪ್ರಮಾಣ ವಚನ ಬೋಧಿಸಿದರು.
ಬಳಿಕ ಮಾತನಾಡಿದ ಅವರು ಕೊಡಗು ಜಿಲ್ಲೆಯಲ್ಲಿ ವೀರಶೈವ ಸಮಾಜದ ಸಂಘಟನೆ ಬಲಗೊಳ್ಳಲು ಮಹಿಳೆಯರು ಸಂಘಟಿತರಾಗಬೇಕು. ಎಲ್ಲೆಡೆ ಸತ್ಸಂಗಗಳ ಮೂಲಕ ಮಕ್ಕಳಲ್ಲಿ ವೀರಶೈವ ಪರಂಪರೆಯ ಸಂಸ್ಕಾರಗಳನ್ನು ಕಲಿಸಿ ಅವರಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಬೇಕೆಂದು ಕರೆಕೊಟ್ಟರು. ನೂತನ ಜಿಲ್ಲಾಧ್ಯಕ್ಷೆ ದೀಪಿಕಾ ಕರುಣ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ವೀರಶೈವ ಸಮಾಜದ ಸಂಘಟನೆಯನ್ನು ಸದೃಢಗೊಳಿಸಲು ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಮಹಿಳಾ ಘಟಕ ರಚಿಸಲಾಗುವುದು. ಈಗಾಗಲೇ ಜಿಲ್ಲೆಯ ವಿವಿಧೆಡೆಗಳಿಂದ ಆಯ್ಕೆ ಮಾಡಿರುವ 31 ಮಹಿಳಾ ನಿರ್ದೇಶಕರು ಸಕ್ರಿಯರಾಗುವಂತೆ ಕರೆಕೊಟ್ಟರು. ಕೊಡ್ಲಿಪೇಟೆಯ ಕಿರಿ ಕೊಡ್ಲಿ ಮಠದ ಪೀಠಾಧಿಪತಿ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ತೊರೆನೂರು ವಿರಕ್ತ ಮಠದ ಶ್ರೀ ಮಲ್ಲೇಶ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವೀರಶೈವ ಸಮಾಜದ ರಾಜ್ಯ ಘಟಕದ ನಿರ್ದೇಶಕಿ ರಾಜೇಶ್ವರಿ ನಾಗರಾಜ್ ಸಮಾಜದ ಸಂಘಟನೆಯಲ್ಲಿ ಮಹಿಳೆಯರ ಜವಬ್ದಾರಿ ಹಾಗೂ ಕಾರ್ಯನಿರ್ವಹಣೆ ಕುರಿತು ಮಾತನಾಡಿದರು.
ರಾಜ್ಯ ವೀರಶೈವ ಮಹಾಸಭಾದ ನಿರ್ದೇಶಕಿ ಅನುಚಂದ್ರಶೇಖರ್, ಕುಶಾಲನಗರ ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ ಪ್ರಧಾನ ಭಾಷಣ ಮಾಡಿದರು. ವೀರಶೈವ ಸಮಾಜದ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಪ್ರಧಾನ ಕಾರ್ಯದರ್ಶಿ ಶಾಂಬಶಿವಮೂರ್ತಿ, ಖಜಾಂಚಿ ಉದಯಕುಮಾರ್, ಉಪಾಧ್ಯಕ್ಷ ಎಸ್.ಎಸ್.ಸುರೇಶ್, ವಿರಾಜಪೇಟೆ ತಾಲ್ಲೂಕು ಘಟಕದ ಅಧ್ಯಕ್ಷ ರಾಜೇಶ್, ಕೊಡಗು ವೀರಶೈವ ಮಹಿಳಾ ಘಟಕದ ಪ್ರಧಾನ ಕಾರ್ಯದರ್ಶಿ ಲೇಖನಾ ಧರ್ಮೇಂದ್ರ, ಕೋಶಾಧಿಕಾರಿ ಮಮತಾ ರವೀಶ್, ಸಹಕಾರ್ಯದರ್ಶಿ ಲಾವಣ್ಯ ರವಿ, ಉಪಾಧ್ಯಕ್ಷರಾಗಿ ವಿರಾಜಪೇಟೆಯ ಚಂಪಾ ಉಮೇಶ್, ಸೋಮವಾರಪೇಟೆಯ ಶಶಿಕಲಾ ಜಗದೀಶ್, ವಿದ್ಯಾಹಿರಣ್ಣಯ್ಯ, ಮಡಿಕೇರಿಯ ರಮ್ಯಾ ಯೋಗೇಶ್ ಇದ್ದರು. ಕಾರ್ಯಕ್ರಮದಲ್ಲಿ ವೀರಶೈವ ಸಮಾಜದ ಮಕ್ಕಳಿಗೆ ವಚನ ಗಾಯನ ಸ್ಪರ್ಧೆ, ಶರಣ ಶರಣೆಯರ ಛದ್ಮವೇಶ ಸ್ಪರ್ಧೆ ಹಾಗೂ ಭರತ ನಾಟ್ಯ ನೋಡುಗರ ಗಮನ ಸೆಳೆಯಿತು. ಶಿಕ್ಷಕಿ ನಿರ್ಮಲಾ ಶಿವಲಿಂಗ ನಿರೂಪಿಸಿದರು. ಚೈತ್ರಾ ರಾಜೇಶ್ ಸ್ವಾಗತಿಸಿದರು. ಚಂಪಾ ಉಮೇಶ್ ವಂದಿಸಿದರು.