ಕೊಟ್ಟಮುಡಿ ಗ್ರಾಮದಲ್ಲಿ ಬಸ್ಸ್ ತಂಗುದಾಣ ಹಾಗೂ ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಿಸುವಂತೆ ಶಾಸಕರಿಗೆ ಮನವಿ

ಕೊಟ್ಟಮುಡಿ ಗ್ರಾಮದಲ್ಲಿ ಬಸ್ಸ್ ತಂಗುದಾಣ ಹಾಗೂ ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಿಸುವಂತೆ ಶಾಸಕರಿಗೆ ಮನವಿ

ವರದಿ:ಝಕರಿಯ ನಾಪೋಕ್ಲು

 ನಾಪೋಕ್ಲು:ಕೊಟ್ಟಮುಡಿ ಗ್ರಾಮದಲ್ಲಿ ಪ್ರಯಾಣಿಕರ ತಂಗುದಾಣ ಹಾಗೂ ಸ್ಪೋರ್ಟ್ಸ್ ಕ್ಲಬ್ ಕಟ್ಟಡ ನಿರ್ಮಿಸಿ ಕೊಡುವಂತೆ ಮಡಿಕೇರಿ ಕ್ಷೇತ್ರದ ಶಾಸಕರಾದ ಡಾ. ಮಂತರ್ ಗೌಡ ಅವರಿಗೆ ಕೊಟ್ಟಮುಡಿ ಜೀನತ್ ಯೂತ್ ಕ್ಲಬ್ ನ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಸ ಅವರ ನೇತೃತ್ವದಲ್ಲಿ ಮಡಿಕೇರಿ ಶಾಸಕ ಡಾ.ಮಂತರ್ ಗೌಡ ಅವರನ್ನು ಭೇಟಿ ಮಾಡಿದ ಜೀನತ್ ಯೂತ್ ಕ್ಲಬ್ ನ ಪದಾಧಿಕಾರಿಗಳು ಕೊಟ್ಟಮುಡಿ ಗ್ರಾಮದಲ್ಲಿ ಸರ್ಕಾರಿ ಶಾಲೆ, ಮರ್ಕಜ್ ವಿದ್ಯಾಸಂಸ್ಥೆವಿದ್ದು ಗ್ರಾಮದಲ್ಲಿ ಬಸ್ಸಿಗಾಗಿ ಕಾಯುವ ಪ್ರಯಾಣಿಕರಿಗೆ ತಂಗುದಾಣವಿಲ್ಲದೆ ಶಿಕ್ಷಕರು,ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಮಳೆ ಗಾಳಿಗೆ ರಸ್ತೆಯ ಬದಿಯಲ್ಲಿ ನಿಂತು ಬಸ್ಸಿಗಾಗಿ ಕಾಯುವ ಪರಿಸ್ಥಿತಿ ಇದೆ.ಈ ಸಮಸ್ಯೆಯನ್ನು ನೀಗಿಸಲು ಗ್ರಾಮದಲ್ಲಿ ಪ್ರಯಾಣಿಕರ ಅನುಕೂಲಕ್ಕಾಗಿ ತಂಗುದಾಣ ನಿರ್ಮಾಣಮಾಡಿಕೊಡಬೇಕು. ಅದರಂತೆ ಗ್ರಾಮದಲ್ಲಿ ವಿವಿಧ ಕ್ರೀಡೆಗಳನ್ನಾಡುವ ಹಲವಾರು ಕ್ರೀಡಾ ಪ್ರತಿಭೆಗಳಿದ್ದು ಇವರನ್ನು ಪ್ರೋತ್ಸಾಹಿಸಲು ಸ್ಪೋರ್ಟ್ಸ್ ಕ್ಲಬ್ ಕಟ್ಟಡವನ್ನು ನಿರ್ಮಿಸಿ ಕೊಡುವಂತೆ ಶಾಸಕ ಡಾ.ಮಂತರ್ ಗೌಡ ಅವರಿಗೆ ಕೊಟ್ಟಮುಡಿಯ ಜೀನತ್ ಯೂತ್ ಕ್ಲಬ್ ನ ಪದಾಧಿಕಾರಿಗಳು ಮನವಿ ಸಲ್ಲಿಸಿದರು.

ಮನವಿಗೆ ಸ್ವೀಕರಿಸಿದ ಶಾಸಕ ಡಾ.ಮಂತರ್ ಗೌಡ ಅವರು ಶೀಘ್ರದಲ್ಲಿ ಪ್ರಯಾಣಿಕರ ತಂಗುದಾಣ ಹಾಗೂ ಸ್ಪೋರ್ಟ್ಸ್ ಕ್ಲಬ್ ಕಟ್ಟಡ ಒದಗಿಸಿ ಕೊಡುವ ಭರವಸೆ ನೀಡಿದ್ದಾರೆಂದು ಜೀನತ್ ಯೂತ್ ಕ್ಲಬ್ ನ ಪದಾಧಿಕಾರಿಗಳು ತಿಳಿಸಿದ್ದಾರೆ. ಈ ಸಂದರ್ಭ ಕೊಟ್ಟಮುಡಿ ಜೀನತ್ ಯೂತ್ ಕ್ಲಬ್ ಅಧ್ಯಕ್ಷ ಶೌಕತ್ ಅಲಿ ಹಾಗೂ ಕ್ಲಬ್ ನ ಸದಸ್ಯರು ಹಾಜರಿದ್ದರು.