ಮುಕ್ತ ವಿವಿ ಪ್ರವೇಶಕ್ಕೆ ಅರ್ಜಿ ಆಹ್ವಾನ: ಆಗಸ್ಟ್ 30 ಕೊನೆಯ ದಿನ

ಮುಕ್ತ ವಿವಿ ಪ್ರವೇಶಕ್ಕೆ ಅರ್ಜಿ ಆಹ್ವಾನ: ಆಗಸ್ಟ್ 30 ಕೊನೆಯ ದಿನ

ಮಡಿಕೇರಿ:-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ 2025-26 ನೇ ಜುಲೈ ಆವೃತ್ತಿಗೆ ಶೈಕ್ಷಣಿಕ ಕಾರ್ಯಕ್ರಮಗಳ ಪ್ರವೇಶಾತಿಗೆ ಈಗಾಗಲೇ ಆನ್‍ಲೈನ್ ಮುಖಾಂತರ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಮುಕ್ತ ವಿಶ್ವವಿದ್ಯಾಲಯವು “ನಿಮ್ಮ ಮನೆಯೇ ನಿರಂತರ ಪಾಠಶಾಲೆ” ಎಂಬ ಧ್ಯೇಯವಾಕ್ಯದೊಂದಿಗೆ ಯು.ಜಿ.ಸಿ ಅನುಮೋದಿತ ಶಿಕ್ಷಣ ಕ್ರಮಗಳ ಅಧ್ಯಯನದ ಅವಕಾಶವನ್ನು ವಿದ್ಯಾರ್ಥಿಗಳಿಗೆ ಈಗಾಗಲೇ ಹಲವು ವರ್ಷಗಳಿಂದ ನೀಡುತ್ತಾ ಬಂದಿದೆ, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ರಾಜ್ಯದಲ್ಲಿ ಮುಕ್ತ ಶಿಕ್ಷಣ ನೀಡುವ ಏಕೈಕ ವಿದ್ಯಾಲಯವಾಗಿದೆ.

ಸ್ನಾತಕ ಶಿಕ್ಷಣ ಕಾರ್ಯಕ್ರಮಗಳ ಅಡಿಯಲ್ಲಿ ಬರುವ ಬಿ.ಎ, ಬಿ.ಕಾಂ, ಬಿ.ಲಿಬ್ ಐಎಸ್ಸಿ, ಬಿ.ಬಿ.ಎ, ಬಿ.ಸಿ.ಎ, ಬಿ.ಎಸ್ಸಿ, ಬಿ.ಎಸ್.ಡಬ್ಲ್ಯೂ ಹಾಗು ಸ್ನಾತಕೋತ್ತರ ಪಿ.ಜಿ.ಪದವಿ ಎಂ.ಎ, ಎಂ.ಎ-ಪತ್ರಿಕೋದ್ಯಮ, ಎಂ.ಕಾಂ, ಎಂ.ಬಿ.ಎ, ಎಂ.ಲಿಬ್‍ಐ.ಎಸ್ಸಿ, ಎಂ.ಎಸ್ಸಿ, ಎಂ.ಸಿ.ಎ, ಎಂ.ಎಸ್.ಡಬ್ಲೂ (ಪಿ.ಜಿ. ಡಿಪ್ಲೋಮಾ ಪ್ರೋಗ್ರಾಮ್ಸ್ ಸರ್ಟಿಫಿಕೇಟ್ ಪ್ರೋಗ್ರಾಮ್ಸ್) 2025-26 ರ ಶೈಕ್ಷಣಿಕ ಸಾಲಿನ ಜುಲೈ ಆವೃತ್ತಿಯಿಂದ ಹೊಸದಾಗಿ ಪ್ರಾರಂಭಿಸಿರುವ ಜ್ಯೋತಿರ್ ವಿಜ್ಞಾನ (ಪಲ ಜ್ಯೋತಿಷ್ಯ, ಮೇಧಿನಿ ಜ್ಯೋತಿಷ್ಯ ವಾಸ್ತು ಜ್ಯೋತಿಷ್ಯ) ಮತ್ತು ಲಿಂಗ್ವಿಸ್ಟಿಕ್ಸ್ ಕೋರ್ಸ್‍ಗಳಿಗೆ ಪ್ರವೇಶಾತಿ ಪ್ರಾರಂಭವಾಗಿರುತ್ತದೆ.

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಉಚಿತ ಪ್ರವೇಶಾತಿಗೆ ಅರ್ಜಿ ಆಹ್ವಾನ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಷರತ್ತು ಬದ್ದ ಶುಲ್ಕ ವಿನಾಯಿತಿ ಇರುತ್ತದೆ. ಹಾಗೂ ಅಲ್ಪಸಂಖ್ಯಾತ ಸಮುದಾಯಗಳಾದ (ಮುಸ್ಲಿಂ, ಕ್ರೈಸ್ತ, ಜೈನ, ಭೌದ್ಧ, ಸಿಖ್ಖ್, ಪಾರ್ಸಿ) (ಆದಾಯ ಪ್ರಮಾಣ ಪತ್ರವು 8 ಲಕ್ಷಗಳಿಗೆ ಮೀರಬಾರದು ಮತ್ತು ಆದಾಯ ಮತ್ತು ಜಾತಿ ದೃಢೀಕರಣ ಪತ್ರ ಕಡ್ಡಾಯವಾಗಿರುತ್ತದೆ.) ಅರ್ಜಿ ಸಲ್ಲಿಸುವ ವಿದ್ಯಾರ್ಥಿಯು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕೋರ್ಸ್ ಗಳಿಗೆ ಪ್ರವೇಶ ಪಡೆಯುವಾಗ ಬೇರೆ ಯಾವುದೇ ವಿಶ್ವವಿದ್ಯಾನಿಲಯ ಸಂಸ್ಥೆಯಲ್ಲಿ ಪೂರ್ಣಕಾಲಿಕ, ಅರೆಕಾಲಿಕ, ದೂರಶಿಕ್ಷಣ ಪದವಿ, ಸ್ನಾತ್ತಕೋತ್ತರ ಪದವಿ, ಇನ್ನಿತರ ಯಾವುದೇ ಕೋರ್ಸ್‍ಗಳಲ್ಲಿ ದಾಖಲಾತಿಯನ್ನು ಹೊಂದಿರಬಾರದು. ಈ ಸಮುದಾಯದವರಿಗೆ ಉಚಿತ ಪ್ರವೇಶಾತಿ ಇರುತ್ತದೆ. ಉಚಿತ ಪ್ರವೇಶಾತಿಗೆ ಆಗಸ್ಟ್, 10 ಕೊನೆಯ ದಿನವಾಗಿದೆ. ಈ ವಿದ್ಯಾರ್ಥಿಗಳಿಗೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳು ಕಡ್ಡಾಯವಾಗಿ ಸಲ್ಲಿಸಬೇಕು ಮತ್ತು ಆದಾಯ ರೂ. ಎಂಟು ಲಕ್ಷ ಮೀರಿರಬಾರದು. ಪ್ರವೇಶಾತಿಗೆ ಈ ದಾಖಲೆಗಳು ಕಡ್ಡಾಯವಾಗಿದೆ. ಎಸ್.ಎಸ್.ಎಲ್.ಸಿ ಅಂಕಪಟ್ಟಿ ಜೆರಾಕ್ಸ್. ಪಿ.ಯು.ಸಿ ಅಥವಾ ತತ್ಸಮಾನ ಅಂಕಪಟ್ಟಿ ಜೆರಾಕ್ಸ್. ಪದವಿ ಅಂಕಪಟ್ಟಿ ಜೆರಾಕ್ಸ್ (ಎಲ್ಲಾ ವರ್ಷಗಳ ಅಥವಾ ಎಲ್ಲಾ ಸೆಮಿಸ್ಟರ್ಗಳು), ಆಧಾರ್ ಕಾರ್ಡ್ ಜೆರಾಕ್ಸ್. ಬ್ಯಾಂಕ್ ಖಾತೆ ವಿವರಗಳು, ಬ್ಯಾಂಕ್ ಖಾತೆ ಸಂಖ್ಯೆ, ಬ್ಯಾಂಕ್ ಖಾತೆ ಹೋಲ್ಡರ್ ಹೆಸರು, ಬ್ಯಾಂಕ್ ಹೆಸರು, ಐಎಫ್‍ಎಸ್ಸಿ ಕೋಡ್. ನಾಲ್ಕು ಫೋಟೋಗಳು. ದೂರವಾಣಿ ಸಂಖ್ಯೆ, ವಿದ್ಯಾರ್ಥಿ ಇ-ಮೇಲ್ ಐಡಿ. ಬಿಪಿಎಲ್ ಕಾರ್ಡ್ (ಮಹಿಳೆಯರಿಗೆ ಮಾತ್ರ). ಎಟಿಎಂ ಕಾರ್ಡ್, ಫೋನ್ ಪೇ, ಗೂಗಲ್ ಪೇ, ನೆಟ್ ಬ್ಯಾಂಕಿಂಗ್-ಶುಲ್ಕ ಪಾವತಿಗಾಗಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ (ಉಚಿತ ಪ್ರವೇಶಾತಿ ಬಯಸುವವರಿಗೆ) ಹೆಚ್ಚಿನ ಮಾಹಿತಿಗೆ ಮಡಿಕೇರಿ ಜೂನಿಯರ್ ಕಾಲೇಜು ಆವರಣದ ಭವನದಲ್ಲಿರುವ ಪ್ರಾದೇಶಿಕ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ ಮತ್ತು ದೂ.ಸಂ. 8296215714, 9483570900, 9844395986 ಮುಖಾಂತರ ವಿವರ ಪಡೆಯಬಹುದು ಎಂದು ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಡಿಕೇರಿ ಪ್ರಾದೇಶಿಕ ಕೇಂದ್ರ ಕಚೇರಿಯಲ್ಲಿ 2025-26 ಜುಲೈ ಆವೃತ್ತಿಯ ಪ್ರವೇಶಾತಿಯನ್ನು ಎಲ್ಲಾ ಸರ್ಕಾರಿ ರಜೆ ದಿನದಂದು ಹಾಗೂ ಎಲ್ಲಾ ಶನಿವಾರ ಮತ್ತು ಭಾನುವಾರದಂದು ಪ್ರವೇಶಾತಿ ಮಾಡಲಾಗುವುದು. ಹಾಗೂ 2025-26 ಜುಲೈ ಆವೃತ್ತಿಯ ಪ್ರವೇಶಾತಿಗೆ ಆಗಸ್ಟ್, 30 ಕೊನೆಯ ದಿನವಾಗಿದೆ ಎಂದು ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಅವರು ತಿಳಿಸಿದ್ದಾರೆ.