ಅಥ್ಲೆಟಿಕ್ಸ್: ಸೆಂಟ್ ಥೋಮಸ್ ಶಾಲಾ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ
ವಿರಾಜಪೇಟೆ: ತಾಲೂಕು ಮಟ್ಟದ ಬಾಲಕ ಮತ್ತು ಬಾಲಕಿಯರ ಅಥ್ಲೆಟಿಕ್ಸ್ ಸ್ಪರ್ಧೆಯಲ್ಲಿ ಗೋಣಿಕೊಪ್ಪಲಿನ ಸೆಂಟ್ ಥೋಮಸ್ ಶಾಲೆಯ ವಿಧ್ಯಾರ್ಥಿಗಳು ಅದ್ವಿತೀಯ ಸಾಧನೆಗೈದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತಾಲೂಕು ಮಟ್ಟದ ಶಾಲಾ ವಿದ್ಯಾರ್ಥಿಗಳ 14 ಮತ್ತು 17 ವಯೋಮಿತಿಯ ಅಥ್ಲೆಟಿಕ್ ಕ್ರೀಡಾಕೂಟ ವಿರಾಜಪೇಟೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆಯಿತು.
ವಿವಿಧ ಗೋಣಿಕೊಪ್ಪಲು ಶಾಲೆಯ 17 ವರ್ಷ ವಯೋಮಿತಿ ಬಾಲಕರ ವಿಭಾಗದಲ್ಲಿ ಜವಲಿನ್ ಥ್ರೋ ವಿಭಾಗದಲ್ಲಿ ದ್ವೀತಿಯ,ಟ್ರಿಪಲ್ ಜಂಪ್ ವಿಭಾಗದಲ್ಲಿ ಪ್ರಥಮ,3000 ಮೀಟರ್ ಓಟದ ಸ್ಪರ್ಧೆಯಲ್ಲಿ ಪ್ರಥಮ,1500 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವೀತಿಯ,5 ಕಿ.ಮೀ. ನಡಿಗೆ ಸ್ಪರ್ಧೆ ಯಲ್ಲಿ ಪ್ರಥಮ,ಲಾಂಗ್ ಜಂಪ್ ತೃತೀಯ, ಸ್ಥಾನ ಪಡೆದುಕೊಂಡಿದ್ದಾರೆ. ಬಾಲಕಿಯರ ವಿಭಾಗದಲ್ಲಿ ಹೈಜಂಪ್ ಸ್ಪರ್ಧೆ ಯಲ್ಲಿ ದ್ವೀತಿಯ ಸ್ಥಾನ ಪಡೆದು ಕೊಂಡಿದ್ದಾರೆ. 14 ವರ್ಷ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ಲಾಂಗ್ ಜಂಪ್ ಪ್ರಥಮ,ಹೈ ಜಂಪ್ ಪ್ರಥಮ,ಡಿಸ್ಕಸ್ಸ್ ಥ್ರೋ ದ್ವೀತಿಯ ಸ್ಥಾನಗಳನ್ನು ಪಡೆದುಕೊಂಡರೆ ಬಾಲಕರ ವಿಭಾಗದಲ್ಲಿ ರಿಲೇ 4*100 ಮೀಟರ್ ಸ್ಪರ್ಧೆ ಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟದಲ್ಲಿ ನಡೆಯುವ ಸ್ಪರ್ಧೆಗಳಿಗೆ ಅಯ್ಕೆಗೊಂಡಿದ್ದಾರೆ.
ಸಂತ ತೋಮಸ್ ಗೋಣಿಕೊಪ್ಪಲು ಶಾಲೆಯ ದೈಹಿಕ ಶಿಕ್ಷಕರಾದ ಸಂತೋಷ್ ಅವರು ವಿಧ್ಯಾರ್ಥಿಗಳಿಗೆ ತರಬೇತಿ ನೀಡಿರುತ್ತಾರೆ. ವಿಧ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ ಮತ್ತು ಸಾರ್ವಜನಿಕ ವಲಯವು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ವರದಿ:ಕಿಶೋರ್ ಕುಮಾರ್ ಶೆಟ್ಟಿ
