ಬದ್ರಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ

ಬದ್ರಿಯಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡಕುಟುಂಬಕ್ಕೆ ಮನೆ ಹಸ್ತಾಂತರ

ಸಿದ್ದಾಪುರ: ತ್ಯಾಗತ್ತೂರಿನ ಬೀವಿ ಅವರ ಕುಟುಂಬಕ್ಕೆ ಬದ್ರಿಯಾ ಚಾರಿಟೆಬಲ್ ಟ್ರಸ್ಟ್ ವತಿಯಿಂದ ದಾನಿಗಳ ನೆರವಿನ‌ ಮೂಲಕ ನಿರ್ಮಿಸಿ‌ ಕೊಡಲಾಗಿದ್ದ ಮನೆಯನ್ನು ಮೊಹಮ್ಮದ್ ಮುಸ್ತಫಾ (ಸ. ಅ) ರವರ 1500ನೇ ಜನ್ಮ ದಿನದಂದು ಸಯ್ಯದ್ ಇಲ್ಯಾಸ್ ತಂಂಙಳ್ ರವರು ಬೀವಿ ಅವರ ಮಗ ಬಶೀರ್ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಮಸೀದಿ ಅಧ್ಯಕ್ಷರಾದ ಎ.ಎಂ ಹನೀಫ, ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿ.ಎಂ ಸಲಾಂ,ಮಹಲ್ ಖತೀಬರಾದ ರಿಯಾಸ್ ಫಾಳಿಲಿ, ಮಹಲ್ ಕಾರ್ಯದರ್ಶಿ ಹನೀಫ ಕೆ.ಎ, ಚಾರಿಟೇಬಲ್ ಪ್ರಧಾನ ಕಾರ್ಯದರ್ಶಿ ಸಲೀಂ ಹಾಗೂ ಸದಸ್ಯರು ಇದ್ದರು.