ಚೆರಿಯಪರಂಬುವಿನಲ್ಲಿ ಸಂಭ್ರಮದಿಂದ ಜರುಗಿದ "ಬ್ರೀಝ್ ಆಫ್ ಮದೀನಾ"ಈದ್ ಮಿಲಾದ್ ಕಾರ್ಯಕ್ರಮ: ಪ್ರವಾದಿ ಸಮಾಜಕ್ಕೆ ನೀಡಿದ ಆದರ್ಶಗುಣ ಶಾಂತಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ: ಪಿಎಸ್ಐ ರಾಘವೇಂದ್ರ

ಚೆರಿಯಪರಂಬುವಿನಲ್ಲಿ ಸಂಭ್ರಮದಿಂದ ಜರುಗಿದ "ಬ್ರೀಝ್ ಆಫ್ ಮದೀನಾ"ಈದ್ ಮಿಲಾದ್ ಕಾರ್ಯಕ್ರಮ: ಪ್ರವಾದಿ ಸಮಾಜಕ್ಕೆ ನೀಡಿದ ಆದರ್ಶಗುಣ ಶಾಂತಿ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ: ಪಿಎಸ್ಐ ರಾಘವೇಂದ್ರ

ವರದಿ:ಝಕರಿಯ ನಾಪೋಕ್ಲು

ನಾಪೋಕ್ಲು : ವಿಶ್ವ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500ನೇ ಜನ್ಮದಿನಾಚರಣೆಯ ಅಂಗವಾಗಿ ನಾಪೋಕ್ಲು ಬಳಿಯ ಚೆರಿಯಪರಂಬುವಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ಆಯೋಜಿಸಲಾದ"ಬ್ರೀಝ್ ಆಫ್ ಮದೀನಾ" ಈದ್ ಮಿಲಾದ್ ಕಾರ್ಯಕ್ರಮ ಸಂಭ್ರಮದಿಂದ ನಡೆಯಿತು. ಶುಕ್ರವಾರ ಫಜರ್ ನಮಾಜಿನ ಬಳಿಕ ಜುಮಾ ಮಸೀದಿಯ ಖತೀಬರಾದ ಮುಹಮ್ಮದ್ ಶಫೀಕ್ ಸಿರಾಜಿ ನೇತೃತ್ವದಲ್ಲಿ ಮೌಲೂದ್ ಪಾರಾಯಣ ಹಾಗೂ ಚೆರಿಯಪರಂಬು ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ನಡೆಯಿತು.

ಪ್ರವಾದಿ ಅವರ ಜನ್ಮದಿನಾಚರಣೆಯ ಅಂಗವಾಗಿ ಚೆರಿಯಪರಂಬು ಗ್ರಾಮದ ಮುಖ್ಯಬೀದಿಗಳಲ್ಲಿ ವಿಶ್ವಪ್ರವಾದಿಯವರ ಸೌಹಾರ್ದತೆಯ ಸಂದೇಶದ ಘೋಷಣೆಗಳನ್ನು ಸಾರುವ ಜಾಥಾನಡೆಯಿತು. ಜಾಥಾದಲ್ಲಿ ವಿದ್ಯಾರ್ಥಿಗಳ ಸ್ಕೌಟ್ಸ್ ಯುವಕರ ಹಾಗೂ ಹಿರಿಯರ ದಫ್ ಪ್ರದರ್ಶನ ನೋಡುಗರ ಗಮನ ಸೆಳೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಗಾಯನ ಸ್ಪರ್ಧೆ, ಭಾಷಣ, ಖವಾಲಿ, ಬುರ್ದಾ ಆಲಾಪನೆ ಸೇರಿದಂತೆ ಪ್ರವಾದಿಯವರ ಸಂದೇಶ ಸಾರುವ ಹಲವಾರು ಕಾರ್ಯಕ್ರಮಗಳು ನಡೆಯಿತು. ಕಾರ್ಯಕ್ರಮದಲ್ಲಿ ಮದರಸ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಹಾಗೂ ಸ್ಪರ್ಧೆಯಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಗಣ್ಯರು ಪ್ರಶಸ್ತಿ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಯಿತು. ಚೆರಿಯಪರಂಬು ಜಮಾಅತ್ ಅಧ್ಯಕ್ಷರಾದ ಪಿ.ಎ.ಅಹಮದ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಎ.ಹಂಝ, ಸಮಾಜ ಸೇವಕರಾದ ಖಲೀಲ್ ಕ್ರಿಯೇಟಿವ್, ಮಾಹಿತಿ ಹಕ್ಕು ಕಾರ್ಯಕರ್ತ ಹಾರಿಸ್, ಮಾಜಿ ಪಂಚಾಯತ್ ಸದಸ್ಯಟಿ.ಎ. ಮಹಮ್ಮದ್ ಹನೀಫ್,ಕಾಂಗ್ರೆಸ್ ಕಾರ್ಮಿಕ ಘಟಕದ ಉಪಾಧ್ಯಕ್ಷ ಪರವಂಡ ಮಿರ್ಷಾದ್,ಇಸ್ಮಾಯಿಲ್, ಅಬ್ದುಲ್ ರಾಹ್ಮಾನ್,ಸೇವ್ ದ ಡ್ರೀಮ್ಸ್ ಚಾರಿಟಿಯ ಪದಾಧಿಕಾರಿಗಳನ್ನು, ಜಮಾಅತ್ ಪದಾಧಿಕಾರಿಗಳನ್ನು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರಮುಖರನ್ನು ಸನ್ಮಾನಿಸಿ ಗೌರವಿಸಲಾಯಿತು.

 ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ ನಾಪೋಕ್ಲು ಠಾಣಾಧಿಕಾರಿ ರಾಘವೇಂದ್ರ ಅವರು ಮಾತನಾಡಿ ಪ್ರವಾದಿ ಮಹಮ್ಮದ್ ಪೈಗಂಬರ್ ರವರ ಜನ್ಮದಿನಾಚರಣೆಯನ್ನು ದೇಶದಲ್ಲೆಡೆ ಸಂಭ್ರಮದಿಂದ ಆಚರಿಸುತ್ತಾರೆ. ಅದರಂತೆ ಇಲ್ಲಿಯೂ ಕೂಡ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ. ಹಬ್ಬಾಚಾರಣೆಗಳು ಬರಿ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ಪ್ರವಾದಿಯವರು ಜೀವನದಲ್ಲಿ ಅಳವಡಿಸಿದ ಆದರ್ಶ ಗುಣಗಳನ್ನು ಸಮಾಜಕ್ಕೆ ನೀಡಿದ ಶಾಂತಿಯ ಸಂದೇಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕೆಂದು ಸಲಹೆ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

 ಈ ಸಂದರ್ಭ ಚೆರಿಯಪರಂಬು ಜಮಾಅತ್ ಪ್ರಧಾನ ಕಾರ್ಯದರ್ಶಿ ಪರವಂಡ ಸಿರಾಜ್, ಉಪಾಧ್ಯಕ್ಷರಾದ ಪಿ.ಎಂ. ಇಬ್ರಾಹಿಂ, ಸಹ ಕಾರ್ಯದರ್ಶಿ, ಪಿ.ಎಂ. ಆಲಿ, ಕೋಶಾಧಿಕಾರಿ ಪಿ. ಎಚ್.ಬಶೀರ್, ಸಮಿತಿ ಸದಸ್ಯರಾದ ಪಿ.ಎಂ. ಅಶ್ರಫ್,ಪಿ. ಎ. ಆಸಿಮ್, ಪಿ. ಎಂ.ಮೊಯ್ದು ಕುಂಞಿ, ಜಮಾಅತ್ ಮಾಜಿ ಅಧ್ಯಕ್ಷರುಗಳು, ಆಡಳಿತ ಮಂಡಳಿ ಪದಾಧಿಕಾರಿಗಳು ಮದರಸ ಅಧ್ಯಾಪಕರು, ಪೋಷಕರು, ವಿದ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.