ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ, ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಸಿ.ಪಿ.ಐ.ಎಂ ಬೆಂಬಲ

ವಿರಾಜಪೇಟೆ: ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳನ್ನು ವಿರೋಧಿಸಿ ಮುಷ್ಕರಕ್ಕೆ ಕರೆ ನೀಡಿರುವ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ಮುಷ್ಕರಕ್ಕೆ ಸಿ.ಪಿ.ಐ.ಎಂ ಪಕ್ಷ ಕೊಡಗು ಜಿಲ್ಲೆ ಬೆಂಬಲ ಸೂಚಿಸಿದೆ.
ಸಿ.ಪಿ.ಐ.ಎಂ ಕೊಡಗು ಜಿಲ್ಲಾ ಘಟಕ ವತಿಯಿಂದ ವಿರಾಜಪೇಟೆ ನಗರದ ದೊಡ್ಡಟ್ಟಿ ಚೌಕಿಯ ಕಛೇರಿಯಲ್ಲಿ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯು ತಾ.09 ರಂದು ಮುಷ್ಕರಕ್ಕೆ ಕರೆ ನೀಡಿರುವ ಹಿನ್ನಲೆಯಲ್ಲಿ ಜಿಲ್ಲಾ ಘಟಕದ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ, ಮಾತನಾಡಿದ ಸಿ.ಪಿ.ಐ.ಎಂ.ನ ಜಿಲ್ಲಾ ಕಾರ್ಯದರ್ಶಿ ರಮೇಶ್ ಹೆಚ್.ಬಿ ದೇಶದಲ್ಲಿ ಅತೀ ಹೆಚ್ಚು ಅಸಂಘಟಿತ ಕಾರ್ಮಿಕರು ದುಡಿಯುತಿದ್ದಾರೆ. ಅಭಿವೃದ್ದಿಯ ಹೆಸರಿನಲ್ಲಿ ಕೇಂದ್ರ ಸರ್ಕಾರವು ಕಾರ್ಪೋರೇಟ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಉದ್ದೇಶದಿಂದ, 08 ಗಂಟೆ ದುಡಿಯುವ ಸಮಯದಿಂದ 12 ಗಂಟೆವರೆಗೆ ದುಡಿಯುವ ಸಮಯ ನಿಗದಗೊಳಿಸಿರುವುದು ಕಾರ್ಮಿಕರಿಗೆ ಭಾರೀ ಹೊಡೆತಬಿದ್ದಿದೆ. ಕಾರ್ಮಿಕರ ಸಾಮಾಜಿಕ ಭದ್ರತಾ ಸಂಹಿತೆಯಲ್ಲಿ ಒಟ್ಟು 29 ಕಾನೂನುಗಳನ್ನು ಮಾರ್ಪಟುಮಾಡಿ ನಾಲ್ಕು ಭಾಗಗಳಾಗಿ ವಿಂಗಡಿಸಲು ಮುಂದಾಗಿದೆ. ಸಾರ್ವಜನಿಕ ಉದ್ದಿಮೆ,ನಿಗಮ, ಮತ್ತು ಇಲಾಖೆಗಳನ್ನು ಖಾಸಗೀಕರಿಸುವ ರಾಷ್ಟ್ರೀಯ ನಗದೀಕರಣ ಪೈಪ್ ಲೈನ್ ಯೋಜನೆಯನು ರದ್ದುಪಡಿಸಬೇಕು, ಹಾಗೂ ಕಾರ್ಮಿಕರ ಒಳಿತಿಗಾಗಿ ವಿವಿದ ಬೇಡಿಕೆಗಳನ್ನು ಮುಂದಿಟ್ಟು ದೇಶದಲ್ಲೆಡೆ ಒಂದು ದಿನದ ಕೆಲಸ ಕಾರ್ಯಗಳನ್ನು ಸ್ಥಗಿತಗೊಳಿಸಿ ಮುಷ್ಕರವನ್ನು ತಾ.09 ರಂದು ಹಮ್ಮಿಕೊಳ್ಳಲಾಗಿದ್ದು,ಮುಷ್ಕರಕ್ಕೆ ಜಿಲ್ಲಾ ಸಿ.ಪಿ.ಐ.ಎಂ ಪಕ್ಷವು ಸಂಪೂರ್ಣ ಬೆಂಬೆಲ ನೀಡಲಿದೆ.ಕೊಡಗು ಜಿಲ್ಲೆಯ ಕುಶಾಲನಗರ ಮತ್ತು ವಿರಾಜಪೇಟೆ ನಗರದಲ್ಲಿ ನಡೆಯಲಿರುವ ಕಾರ್ಮಿಕರ ಮುಷ್ಕರಕ್ಕೆ ವಿವಿಧ ಸ್ಥರದಲ್ಲಿ ದುಡಿಯುವ ಕಾರ್ಮಿಕರು ಮುಷ್ಕರದಲ್ಲಿ ಭಾಗಿಗಳಾಗುವಂತೆ ಮನವಿ ಮಾಡಿದರು.
ಸಿ.ಪಿ.ಐ.ಎಂ. ಪಕ್ಷದ ಜಿಲ್ಲಾ ಸಮಿತಿಯ ಸದಸ್ಯರಾದ ಪಿ.ಆರ್,ಭರತ್ ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಶ್ರೀಮಂತ ಬಂಡವಾಳಶಾಹಿಗಳ ಮತ್ತು ಕಾರ್ಪೋರೇಟ್ ಸಂಸ್ಥೆಗಳ ಪರವಾಗಿ ಯೋಜನೆಗಳನ್ನು ಅನುಸರಿಸಿಕೊಂಡು ಬರುತ್ತಿದೆ. ಸರ್ಕಾರಗಳು ಕಾರ್ಮಿಕರ ಪರವಾದ ಯೋಜನೆಗಳು ಮತ್ತು ಕಾನೂನುಗಳಿಗೆ ತಿದ್ದುಪಡಿ ಮಾಡಿಕೊಂಡು ಕಾರ್ಪೊರೇಟ್ ಸಂಸ್ಥೆಗಳಿಗೆ ಲಾಭ ಮಾಡುವ ಉದ್ದೇಶದಿಂದ ಕಾನೂನು ರೂಪಿಸುತ್ತಾ ಬಂದಿದೆ. ಕಾರ್ಮಿಕ ವಿರೋಧಿ ಕಾನೂನುಗಳನ್ನು ಸಂಘಟನೆಯು ಬಲವಾಗಿ ವಿರೋದಿಸಿ. ತಾ 09 ರಂದು ನಡೆಯುವ ದೇಶವ್ಯಾಪ್ತಿ ಮುಷ್ಕರಕ್ಕೆ ಬೆಂಬಲ ಸೂಚಿಸುತ್ತಾ,ವಿವಿಧ ಇಲಾಖೆಗಳು, ತೋಟಗಳು, ಕಟ್ಟಡ ಕಾರ್ಮಿಕರು ಸೇರಿದಂತೆ ಇತರ ಎಲ್ಲಾ ವರ್ಗದ ಕಾರ್ಮಿಕರು ಮುಷ್ಕರಲ್ಲಿ ಭಾಗಿಗಳಗುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಪಿ.ಐ.ಎಂ ಕೊಡಗು ಜಿಲ್ಲಾ ಸಮಿತಿಯ ಸದಸ್ಯರಾದ ಎ.ಸಿ. ಸಾಬು, ಎನ್.ಡಿ. ಕುಟ್ಟಪ್ಪ ಮತ್ತು ಪದ್ಮೀನಿ ಶ್ರೀಧರ್ ಉಪಸ್ಥಿತರಿದ್ದರು.
ವರದಿ: ಕಿಶೋರ್ ಕುಮಾರ್ ಶೆಟ್ಟಿ
What's Your Reaction?






