ಸೋಮವಾರಪೇಟೆಯ ಮವಿ೯ನ್ ಫನಾ೯ಂಡಿಸ್ ಗೆ ಕೆಮಿಸ್ಟ್ ರತ್ನ ಪ್ರಶಸ್ತಿ

ಮಡಿಕೇರಿ: ಕರ್ನಾಟಕ ರಾಜ್ಯ ಔಷಧಿ ಮಾರಾಟಗಾರರ ಸಂಘದ ವತಿಯಿಂದ ನೀಡಲಾಗುವ " ಕರ್ನಾಟಕ ಕೆಮಿಸ್ಟ್ ರತ್ನ " ಪ್ರಶಸ್ತಿಯನ್ನು ಸೋಮವಾರಪೇಟೆಯ ಮವಿ೯ನ್ ಫನಾ೯ಂಡೆಸ್ ಅವರಿಗೆ ಪ್ರಧಾನ ಮಾಡಲಾಗಿದೆ. ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ರಾಜ್ಯ ಔಷಧಿ ವ್ಯಾಪಾರಿಗಳ ಸಂಘದ ಸರ್ವ ಸದಸ್ಯರ 67 ನೇ ವಾಷಿ೯ಕ ಮಹಾಸಭೆಯಲ್ಲಿ ಸೋಮವಾರಪೇಟೆಯ ಮೆಡಿಕಲ್ ಎಂಪೋರಿಯಂ ಮಾಲೀಕ ಮರ್ವಿನ್ ಫರ್ನಾಂಡೆಸ್ ಅವರಿಗೆ ಕನಾ೯ಟಕ ಕೆಮಿಸ್ಟ್ ರತ್ನ್ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮೆವಿ೯ನ್ ಫೆನಾ೯ಂಡೀಸ್ 40 ವರ್ಷಗಳಿಂದ ಸೋಮವಾರಪೇಟೆಯಲ್ಲಿ ಆರೋಗ್ಯ ಸೇವೆಯನ್ನು ನೀಡುತ್ತಿದ್ದಾರೆ.