ಚೆಟ್ಟಳ್ಳಿ ಕೆನರಾ ಬ್ಯಾಂಕ್ ATM ನಲ್ಲಿ ದರೋಡೆ ಆಯಿತೇ!! ಬೆಂಗಳೂರು ಪೊಲೀಸ್ ಕಂಟ್ರೋಲ್ ರೂಂನಿಂದ ಬಂದ ಸಂದೇಶವೇನು ಗೊತ್ತೇ!

ವರದಿ:ಪುತ್ತರಿರ ಕರುಣ್ ಕಾಳಯ್ಯ
ಚೆಟ್ಟಳ್ಳಿ:ಬೆಳ್ಳಂಬೆಳಿಗ್ಗೆ ಬೆಂಗಳೂರು ಪೋಲಿಸ್ ಕಂಟ್ರೋಲ್ ರೂಂ ನಿಂದ ಚೆಟ್ಟಳ್ಳಿ ಕೆನರಾ ಬ್ಯಾಂಕ್ ಎಂಟಿಎಂಗೆ ಅದೆನೋ, ತೊಂದರೆಯಾಗಿದೆ ಚೆಟ್ಟಳ್ಳಿ ಪೋಲೀಸ್ ಉಪಠಾಣೆಗೆ ಮಾಹಿತಿ ರವಾನೆಯಾದಂತೆ ತಕ್ಷಣವೇ ಕಾರ್ಯಪ್ರವತ್ತರಾದ ಎಎಸ್ ಐ ದಿನೇಶ್ ಮತ್ತು ಸಿಬ್ಬಂದಿಗಳು ಬೆಳಗಿನ ಜಾವ 2 ಗಂಟೆಗೆ ಏಟಿಎಂ ಪರಿಶೀಲಿಸಿದ್ದಾಗ ಯಾವುದೇ ತೊಂದರೆಗಳು ಆಗಿರುವುದಿಲ್ಲ.
ಬಾಗಿಲ ಕೆಳ ಬದಿಯಲ್ಲಿ ರಂದ್ರ ಕಂಡು ಪರಿಶೀಲಿದ್ದಾಗ ದೊಡ್ಡ ಗಾತ್ರದ ಕಪ್ಪಗಿನ ಹುಳು ಒಂದು ಎಟಿಎಂ ಬಾಗಿಲ ಕೆಳಗೆ ರಂದ್ರ ಮಾಡಿ ಒಳನುಗ್ಗುತಿರುವುದು ಕಂಡು ಬಂತು. ನಿಟ್ಟುಸಿರು ಬಿಟ್ಟ ಪೋಲೀಸರು ಹುಳುವನ್ನು ಹೊರ ತೆಗೆದರು. ಚೆಟ್ಟಳ್ಳಿಯ ಕೆನರಾ ಬ್ಯಾಂಕ್ ಕಾರ್ಯನಿರ್ವಹಿಸದೇ ಸುಮಾರು ಆರು ತಿಂಗಳುಗಳೇ ಕಳೆದಿತು. ಕಳೆದ ವಾರದ ಹಿಂದೆಯಷ್ಟೇ ನೂತನ ಎಟಿಯಂ ಯಂತ್ರವನ್ನು ಅಳವಡಿಸಿದ್ದರು. ಅದರೆ ವಿದ್ಯುತ್ ವ್ಯತ್ಯಯದಿಂದ ಎಂಟಿಎಂ ರಿಪೇರಿಗೊಂಡಿತ್ತು. ಎರಡು ದಿನಗಳ ಹಿಂದೆ ದುರಸ್ಥಿಗೊಂಡು ಈಗ ಮತ್ತೊಮ್ಮೆ ಸುದ್ದಿಯಾಗಿದೆ.