ಕಟ್ಟೆಮಾಡು ಗ್ರಾಮದಲ್ಲಿ ಕಾಫಿ,ಕರಿಮೆಣಸು ಕಳವು ಪ್ರಕರಣ:ಇಬ್ಬರ ಬಂಧನ

ಮಡಿಕೇರಿ:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಟ್ಟೆಮಾಡು ಗ್ರಾಮದ ನಿವಾಸಿಯಾದ ಬೊಟ್ಟೋಳಂಡ ಉತ್ತಮ್ ಮುತ್ತಪ್ಪ ರವರ ದಾಸ್ತಾನು ಕೊಠಡಿಯಲ್ಲಿ ಇಟ್ಟಿದ್ದ ಅಂದಾಜು 10 ಚೀಲ ಒಣಗಿದ ಕರಿಮೆಣಸು ಅಂದಾಜು 01 ಚೀಲ ಕಾಫಿಯನ್ನು 09-06-2025 ರಂದು ಕಳ್ಳತನವಾಗಿರುವ ಕುರಿತು ದೂರು ಸ್ವೀಕರಿಸಿದ್ದು, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 306 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಅಧಿಕಾರಿ & ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷಾಧಾರಗಳನ್ನು ಕಲೆ ಹಾಕಿ ತನಿಖೆ ಕೈಗೊಂಡಿದ್ದರುಮ ಸದರಿ ಪ್ರಕರಣಗಳ ಆರೋಪಿಗಳ ಪತ್ತೆಗಾಗಿ ಶ್ರೀ ಸೂರಜ್ ಪಿ.ಎ, ಡಿಎಸ್ಪಿ ಮಡಿಕೇರಿ ಉಪ ವಿಭಾಗ, ಶ್ರೀ ಚಂದ್ರಶೇಖರ್.ಹೆಚ್.ವಿ, ಪಿಐ, ಮಡಿಕೇರಿ ಗ್ರಾಮಾಂತರ ಪೊ.ಠಾ, ಶ್ರೀ ವೆಂಕಟ್.ಹೆಚ್.ಈ, ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೊ.ತಾ ಮತ್ತು ಠಾಣೆಯ ಅಪರಾಧ ಪತ್ತೆ ಸಿಬ್ಬಂದಿಗಳು ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿನಾಂಕ: 01-08-2025 ರಂದು 02ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಬಿ.ಇ.ಪ್ರಕಾಶ್ ಪೂಜಾರಿ, (40 ವರ್ಷ)7 ನೇ ಹೊಸಕೋಟೆ ಹಾಗೂ ಎಂ.ಎ.ಶೇಖರ್, (54 ವರ್ಷ,)ಚೆಟ್ಟಿಮಾನಿ ಗ್ರಾಮ ಬಂಧಿತ ಆರೋಪಿಗಳು.