ಮಡಿಕೇರಿ ನಗರದ ಸಮಗ್ರ ಅಭಿವೃದ್ಧಿ ನಗರಸಭೆ ಬಿಜೆಪಿ ಬಿಜೆಪಿ ಆಡಳಿಯ ಮಂಡಳಿಯ ಗುರಿ:ನಗರಸಭೆ ಉಪಾಧ್ಯಕ್ಷ ಮಹೇಶ್ ಜೈನಿ
ಮಡಿಕೇರಿ: ನಗರದ ಸಮಗ್ರ ಅಭಿವೃದ್ಧಿ ನಗರಸಭೆ ಬಿಜೆಪಿ ಆಡಳಿತ ಮಂಡಳಿಯ ಗುರಿಯಾಗಿದೆ ಎಂದು ನಗರಸಭೆ ಉಪಾಧ್ಯಕ್ಷ ಮತ್ತು ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹೇಳಿದರು.
ನಗರದಲ್ಲಿ ಸುಮಾರು ೩.೭೦ ಕೋಟಿ ವೆಚ್ಚದಲ್ಲಿ ನಗರದ ೨೩ ವಾರ್ಡ್‌ಗಳಲ್ಲಿ ಅಭಿವೃದ್ಧಿ ಸೇರಿದಂತೆ ನಗರಸಭೆಯ ೧೦ ಲಕ್ಷ ಮತ್ತು ಎನ್‌ಡಿಆರ್‌ಎಫ್‌ನ ೩೮ ಲಕ್ಷದಲ್ಲಿ ವಿವಿಧ ಕಾಮಗಾರಿಗಳನ್ನು ಹಮಿಕೊಳ್ಳಲಾಗುತ್ತಿದೆ. ಅಲ್ಲದೇ, ೧೭ ಲಕ್ಷ ವೆಚ್ಚದಲ್ಲಿ ಮೀನು ಮಾರುಕಟ್ಟೆ ಮತ್ತು ೨೫ ಲಕ್ಷ ವೆಚ್ಚದಲ್ಲಿ ೨ ಪಾರ್ಕ್‌ಗಳ ನಿರ್ಮಾಣ ಮಾಡಲಾಗುತ್ತಿದೆ. ಆದರೆ, ನಗರಸಭೆಯ ಬಿಜೆಪಿ ಆಡಳಿತದ ವೇಗ ಸಹಿಸಲಾಗದೇ ಹತಾಶರಾಗಿ ನಗರಸಭೆಯ ಪ್ರಸ್ತುತ ಆಡಳಿತ ವ್ಯವಸ್ಥೆ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಮೂಡ ಅಧ್ಯಕ್ಷ ರಾಜೇಶ್ ಯಲ್ಲಪ್ಪ ಅವರು ಹೇಳಿಕೆ ನೀಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ಮಹಿಳಾ ಮೋರ್ಚ ಅಧ್ಯಕ್ಷೆ ಅನಿತಾ ಪೂವಯ್ಯ, ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ, ಬಿಜೆಪಿ ನಗರ ಮಂಡಳದ ಉಪಾಧ್ಯಕ್ಷ ಬಿ.ಪಿ.ಡಿಶು ಇದ್ದರು.
