ದುಬೈ ದಸರಾ ಫುಟ್ಬಾಲ್ ಕಪ್:ಕೂರ್ಗ್ ಯುನೈಟೆಡ್ ಎಫ್.ಸಿ ಚಾಂಪಿಯನ್
ದುಬೈ:ಇಲ್ಲಿನ ಹೆಮ್ಮೆಯ ದುಬೈ ಕನ್ನಡಿಗರ ಸಂಘದಿಂದ ಏಳನೇ ವರ್ಷದ,ಕನ್ನಡಿಗರಿಗಾಗಿ ನಡೆದ ದಸರಾ ಫುಟ್ಬಾಲ್ ಚಾಂಪಿಯನ್ ಪಂದ್ಯಾವಳಿಯಲ್ಲಿ ಕೂರ್ಗ್ ಯುನೈಟೆಡ್ ಎಫ್.ಸಿ ತಂಡವು ಚಾಂಪಿಯನ್ ಪ್ರಶಸ್ತಿ ಅಲಂಕರಿಸಿದೆ.ದ್ವಿತೀಯ ಸ್ಥಾನಕ್ಕೆ ಉಳ್ಳಾಲ ತಂಡವು ತೃಪ್ತಿಪಟ್ಟುಕೊಂಡಿತ್ತು. ದುಬೈನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಪ್ರತೀ ವರ್ಷ ದುಬೈ ಹೆಮ್ಮೆಯ ಕನ್ನಡಿಗರ ಸಂಘದವರು ದಸರಾ ಕ್ರೀಡಾಕೂಟ ಆಯೋಜಿಸುತ್ತಾ ಬಂದಿದೆ.