ಕಡಂಗ ಬದ್ರಿಯಾ ಮಸೀದಿ ವತಿಯಿಂದ ಈದ್ ಮಿಲಾದ್ ಸಂದೇಶ ಜಾಥಾ

ಕಡಂಗ ಬದ್ರಿಯಾ ಮಸೀದಿ ವತಿಯಿಂದ ಈದ್ ಮಿಲಾದ್ ಸಂದೇಶ ಜಾಥಾ

ಕಡಂಗ:ತಾಜುಲ್ ಉಲಮಾ ಬದ್ರಿಯಾ ಜುಮಾ ಮಸೀದಿ ವತಿಯಿಂದ ಈದ್ ಮಿಲಾದ್ ಅಂಗವಾಗಿ ಸಂದೇಶ ಜಾಥಾವನ್ನು ಗುರುವಾರ ಬೆಳಗ್ಗೆ ಬದ್ರಿಯಾ ಮಸೀದಿಯಿಂದ ಕಡಂಗ ಪಟ್ಟಣದ ಮೂಲಕ ಕೊಕ್ಕಂಡ ಬಾಣೆ ದರ್ಗಾದವರೆಗೆ ಎರಡು ಕುದುರೆಗಳ ಸಮ್ಮುಖದಲ್ಲಿ ಸಂದೇಶ ಜಾಥಾವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಮೊದಲು ಮಸೀದಿ ಆವರಣದಲ್ಲಿ ಜಮಾಹತ್ ಅಧ್ಯಕ್ಷರಾದ ಉಸ್ಮಾನ್ ಕೆ.ಇ ಮತ್ತು ಹಿರಿಯರ ಸಮ್ಮುಖದಲ್ಲಿ ಧ್ವಜರೋಹಣ ಮಾಡುವ ಮುಖಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಾರ್ಥನೆಯನ್ನು ಮದರಸ ಪ್ರಾಂಶುಪಾಲರಾದ ಹುಸೈನ್ ಸಹದಿ ನೆರವೇರಿಸಿದರು. ಸಂದೇಶ ಜಾಥಾದಲ್ಲಿ 2 ಕುದುರೆಗಳ ಸವಾರಿ ಹಾಗೂ ವಿದ್ಯಾರ್ಥಿಗಳ ಆಕರ್ಷಕ ದಫ್ ಮತ್ತು ಸ್ಕೌಟ್ ನೋಡುಗರ ಗಮನಸೆಳೆಯಿತು. ಮುಖ್ಯ ರಸ್ತೆಯಲ್ಲಿ ಮುಹ್ಯದ್ದೀನ್ ಮಸೀದಿ ವತಿಯಿಂದ ಹಾಗೂ ಊರಿನ ಮಹಿಳೆಯರಿಂದ ಪಾನಿಯವನ್ನು ನೀಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಜಮಾಹತ್ ಕಾರ್ಯದರ್ಶಿ ರಾಶೀದ್ ಯು.ಇ ನಿರ್ವಹಿಸಿದರು. ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್ ನಲ್ಲಿ ಕಾರ್ಯಕ್ರಮ ನಡೆಯಿತು.

 ವರದಿ:ನೌಫಲ್