ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ಮೇಲೆ FIR ದಾಖಲು

ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ಮೇಲೆ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯ ಸಂಪಾದಕಿ ಉಳಿಯಂಡ ಡಾಟಿ ಪೂವಯ್ಯ ಅವರು ನೀಡಿದ ದೂರಿನ್ವಯ ಭಾರತೀಯ ನ್ಯಾಯ ಸಂಹಿತೆ (BNS) U\S 75(1)(iv) ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಡಾಟಿ ಪೂವಯ್ಯ ಅವರ ದೂರಿನಲ್ಲೇನಿದೆ!
ದಿನಾಂಕ 18-07-2025ರಂದು ಪಿರ್ಯಾದಿಯವರು ಮಡಿಕೇರಿ ನಗರ ಮಹಿಳಾ ಠಾಣೆಗೆ ಹಾಜರಾಗಿ ನೀಡಿದ ಪುಕಾರಿನ ಸಾರಾಂಶವೇನೆಂದರೆ,ಪಿರ್ಯಾದಿಯವರ 38 ವರ್ಷಗಳಿಂದ ಬ್ರಹ್ಮಗಿರಿ ಕೊಡವ ವಾರ ಪತ್ರಿಕೆಯಲ್ಲಿ ಉಪಸಂಪಾದಕಿಯಾಗಿ ಕಾರ್ಯನಿರ್ವಹಿಸಿಕೊಂಡಿದ್ದು, ವೈಯಕ್ತಿಕ ದ್ವೇಷ ಎಂಬಂತೆ ಮಾನಹಾನಿ ಮಾಡುವ ಉದ್ದೇಶದಿಂದ ಪೂಮಾಲೆ ಪತ್ರಿಕೆಯ ಸಂಪಾದಕ ಮತ್ತು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಅಜ್ಜನಿಕಂಡ ಮಹೇಶ್ ನಾಚಯ್ಯ ಅವರ ವ್ಯಾಟ್ಸ್ ಅಪ್ ನಂಬರ್ ನಿಂದ ದಿನಾಂಕ 6-07-2025ರಂದು ಸಾಮಾಜಿಕ ಜಾಲತಾಣವಾದ ವ್ಯಾಟ್ಸ್ ಅಪ್ ಗುಂಪುಗಳಲ್ಲಿ ಹಾಗೂ ಬೇರೆಯವರ ವೈಯಕ್ತಿಕ ವ್ಯಾಟ್ಸ್ ಅಪ್ ನಂಬರ್ ಗಳಿಗೆ ಪಿರ್ಯಾದಿಯವರನ್ನು ಕೊಡವ ಭಾಷೆಯಲ್ಲಿ "ಎಲ್ಲಾ ಬೆತ್ತಲೆ ಆನವಡ ಕೊಣಿ ನೋಟಿಯಪ್ಪ(ಎಲ್ಲಾ ಬೆತ್ತಲಾದವಳ ಚೆಲ್ಲಾಟ ನೋಡ್ರಪ್ಪಾ) ಎಂಬುದಾಗಿ ತೀರಾ ಆಕ್ಷೇಪಕಾರಿಯಾಗಿಯೂ ಆಘಾತಕಾರಿಯಾಗಿಯೂ ಟಿಪ್ಪಣಿ ಬರೆದು ಸುಮಾರು20 ವರ್ಷಗಳ ಹಿಂದೆ ಆಗಿಹೋದ ಘಟನೆಯನ್ನೂ,ಅಂದೂ ನ್ಯಾಯಾಲಯ ನಿರಪರಾಧಿ ಎಂದು ಘೋಷಿಸಿರುವುದನ್ನು ಲೆಕ್ಕಿಸದೆ ವ್ಯಾಪಕ ಅಪಪ್ರಚಾರ ಮಾಡಿ ತೇಜೋವಧೆ ಮಾಡಿ ಪಿರ್ಯಾದಿಯವರಿಗೆ ಮಾನಸಿಕ ಹಿಂಸೆ ಅನುಭವಿಸುವಂತೆ ಮಾಡಿರುತ್ತಾರೆ.ತಪ್ಪಿತಸ್ಥೆ ಅಲ್ಲವೆಂದು ಘನವೆತ್ತ ಮಡಿಕೇರಿ ನ್ಯಾಯಾಲಯ ತೀರ್ಪು ಹೊರಡಿಸಿರುವುದನ್ನು ಮರೆಮಾಚಿ ಕುತಂತ್ರಿಗಳು ಪಿರ್ಯಾದಿಯವರ ಮೇಲೆ ಆರೋಪಿಸಿದ್ದ ಹಳೆ ವದಂತಿಗಳನ್ನು ಫೋಟೋ ಸಹಿತ ಪ್ರಕಟಿಸಿ ಎಲ್ಲಾ ಗ್ರೂಪ್ ಗಳಿಗೆ ಹರಡಿ ಆರೋಪ ,ಅಸಹ್ಯಕರ ಲೈಂಗಿಕ ಅರ್ಥ ಛಾಯೆ ಬರುವಂತೆ ಶಬ್ದ ಬಳಸಿ ಆಕ್ಷೇಪವಾದ ವಾಕ್ಯಗಳನ್ನು ದುರುದ್ದೇಶದಿಂದ ಬಳಸಿ ಲೈಂಗಿಕವಾಗಿ ಬಣ್ಣದ ಟೀಕೆಗಳ ಪದಗಳನ್ನು ಉಪಯೋಗಿಸಿ ಕಿರುಕುಳ ಕೊಟ್ಟದ್ದು ಪಿರ್ಯಾದಿಯವರನ್ನು ಕಳಂಕಿತ ಮಹಿಳೆ ಎಂಬಂತೆ ಬಿಂಬಿಸಿ ಮಾನಸಿ ಆಘಾತ ಉಂಟುಮಾಡಿರುತ್ತಾರೆ ಇದರಿಂದ ಮಾನಸಿಕವಾಗಿ ಬಹಳಷ್ಟು ನೊಂದಿರುವ ಪಿರ್ಯಾದಿ ತುಂಬಾ ಕುಗ್ಗಿ ಹೋಗಿರುತ್ತೇನೆ.ಆದ್ದರಿಂದ ಅಜ್ಜನಿಕಂಡ ಮಹೇಶ್ ನಾಚಯ್ಯವರ ಮೇಲೆ ಕಾನೂನು ಕ್ರಮಕೈಗೊಳ್ಳಬೇಕಾಗಿ ಕೊಟ್ಟ ಪುಕಾರಿಗೆ FIR ದಾಖಲಾಗಿದೆ.