ಮಗನಿಗೆ ಬೈಕ್ ಚಾಲನೆ ಮಾಡಲು‌ ಕೊಟ್ಟ ತಂದೆಗೆ ಬಿತ್ತು 25ಸಾವಿರ ದಂಡ

ಮಗನಿಗೆ ಬೈಕ್ ಚಾಲನೆ ಮಾಡಲು‌ ಕೊಟ್ಟ ತಂದೆಗೆ ಬಿತ್ತು 25ಸಾವಿರ ದಂಡ

ಸೋಮವಾರಪೇಟೆ:ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಪ್ಪಿಗೆ ತಂದೆ ರೂ. 20 ಸಾವಿರ ದಂಡ ತೆತ್ತಿದ್ದಾರೆ. ಸೋಮವಾರಪೇಟೆಯ ಸಿ.ಆರ್. ಕುಮಾರಸ್ವಾಮಿ ಎಂಬುವವರು ತನ್ನ ಅಪ್ರಾಪ್ತ ವಯಸ್ಸಿನ ಮಗನಿಗೆ ಬೈಕ್ ಅನ್ನು ಚಾಲನೆ ಮಾಡಲು ಕೊಟ್ಟಿದ್ದು, ಪೊಲೀಸರ ತಪಾಸಾಣೆ ವೇಳೆಯಲ್ಲಿ ಬಯಲಾಗಿತ್ತು. ಪೊಲೀಸ್ ವೃತ್ತ ನಿರೀಕ್ಷಕ ಮುದ್ದು ಮಾದೇವ ಅವರು ಕುಮಾರಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿ ಸೋಮವಾರಪೇಟೆ ಸಿವಿಲ್ ಜಡ್ಜ್ & JMFC ನ್ಯಾಯಾಲಯದಲ್ಲಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರು ಕುಮಾರಸ್ವಾಮಿಗೆ ರೂ. 20ಸಾವಿರ ದಂಡ ವಿಧಿಸಿ ತೀರ್ಪು‌ ನೀಡಿದ್ದಾರೆ.