ದಸರಾ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಾಳೆ ಕರೆಂಟ್ ಇರಲ್ಲ!

ಮಡಿಕೇರಿ:66/11ಕೆ.ವಿ ಮಡಿಕೇರಿ ವಿದ್ಯುತ್ ಉಪಕೇಂದ್ರದಿಂದ ಹೊರಹೊಮ್ಮುವ F1ಕೋಟೆ ಫೀಡರ್ನಲ್ಲಿ ಹಾಗೂ 15 ಜಿ.ಟಿ ರಸ್ತೆ ಫೀಡರ್‌ನಲ್ಲಿ ದಿನಾಂಕ 17.09.2025 ರಂದು ಬೆಳಿಗ್ಗೆ 10.00 ರಿಂದ ಸಂಜೆ 5.00ಗಂಟೆಯವರೆಗೆ ದಸರಾ ಪ್ರಯುಕ್ತ ಫೀಡರ್ ನಿರ್ವಹಣಾ ಕಾಮಗಾರಿ ನಡೆಸಬೇಕಾಗಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಾಯ ಉಂಟಾಗಲಿದೆ.
ಆದ್ದರಿಂದ ಕಾಲೇಜು ರಸ್ತೆ, ಪ್ರಕೃತಿ ಬಡಾವಣೆ, ಗೌಳಿ ಬೀದಿ, ಪೆನ್ಸನ್ ಲೈನ್, ಅಪ್ಪಚ್ಚಕವಿ ರಸ್ತೆ, ಇಂಡಸ್ಟ್ರಿಯಲ್ ಏರಿಯಾ, ಕೆ.ಎಸ್.ಆರ್.ಟಿ.ಸಿ ಬಸ್ ಸ್ಟಾಂಡ್, ಹಳೆ ಖಾಸಗಿ ಬಸ್ ಸ್ಟಾಂಡ್, ಜಯನಗರ, ಮಂಗಳದೇವಿನಗರ, ಪುಟಾಣಿನಗರ, ಜಲಾಶಯ ಬಡಾವಣೆ, ಅರಣ್ಯಭವನ, ಚೈನ್‌ಗೇಟ್, ದೇಚೂರು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಈ ಮೇಲೆ ತಿಳಿಸಿರುವ ಸಮಯದಲ್ಲಿ ಹಾಗೂ ಸ್ಥಳದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.