ಯಡವನಾಡು ಆಶ್ರಮ ಶಾಲೆಯ 185ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿದ ಮಾಜಿ ಶಾಸಕ ಅಪ್ಪಚ್ಚು ರಂಜನ್

ಸೋಮವಾರಪೇಟೆ:ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಶ್ರದ್ಧೆ ಇದ್ದರೆ ಗುರಿ ಸಾಧಿಸಬಹುದೆಂದು ಮಾಜಿ ಕ್ರೀಡಾಸಚಿವ ಎಂ.ಪಿ. ಅಪ್ಪಚುರಂಜನ್ ತಿಳಿಸಿದರು.ಇಲ್ಲಿಗೆ ಸಮೀಪದ ಯಡವನಾಡು ಆಶ್ರಮ ಶಾಲೆಯ ವಿದ್ಯಾರ್ಥಿಗಳಿಗೆ ಸ್ವೆಟರ್ ವಿತರಿಸಿ ಮಾತನಾಡಿದರು.ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣ ಬಹಳ ಮುಖ್ಯ ಶಿಕ್ಷಣವಿಲ್ಲದೆ ಬದುಕು ಕಷ್ಟಕರವೆಂದರು.ಜೀವನದಲ್ಲಿ ಶಿಸ್ತು ಮತ್ತು ಶ್ರದ್ಧೆಯನ್ನು ಮೈಗೂಡಿಸಿಕೊಂಡರೆ ಎಂತಹ ಕಠಿಣ ಶಿಕ್ಷಣವಾದರೂ ಪಡೆದುಕೊಳ್ಳಬಹುದೆಂದರು.ಈ ಸಂದರ್ಭ ಶಾಲೆಯ 185ವಿದ್ಯಾರ್ಥಿಗಳಿಗೂ ರಂಜನ್ ಸ್ವೆಟರ್ ವಿತರಿಸಿದರು.
ಐಗೂರು ಗ್ರಾಮ ಪಂಚಾಯ್ತಿ ಉಪಾಧ್ಯಕ್ಷೆ ಗೌರಮ್ಮ,ಸದಸ್ಯರುಗಳಾದ ಜಯಪ್ಪ ,ಪ್ರಮೋದ್ ಪ್ರಮುಖರುಗಳಾದ ರಮೇಶ್,ವರದರಾಜ ಅರಸ್,ಮಲ್ಲಪ್ಪ,ಶಾಲೆಯ ಮುಖ್ಯ ಶಿಕ್ಷಕ ರಜನಿಕಾಂತ್ ಹಾಗೂ ಶಿಕ್ಷರು,ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.
What's Your Reaction?






