ಸೂರಿಲ್ಲದ ಬಡಕುಟಂಬಕ್ಕೆ ನೆರವಾದ ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಲತೀಫ್: ಸ್ವಂತ ಖರ್ಚಿನಲ್ಲಿ ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ಬೈರಿ ಕುಟುಂಬಕ್ಕೆ ಮನೆ

ಸೂರಿಲ್ಲದ ಬಡಕುಟಂಬಕ್ಕೆ ನೆರವಾದ ಮಾಜಿ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಬ್ದುಲ್ ಲತೀಫ್:  ಸ್ವಂತ ಖರ್ಚಿನಲ್ಲಿ ಗರಗಂದೂರು ಮಲ್ಲಿಕಾರ್ಜುನ ಕಾಲೋನಿಯ ಬೈರಿ ಕುಟುಂಬಕ್ಕೆ ಮನೆ

(ಕೆ.ಎಂ ಇಸ್ಮಾಯಿಲ್ ಕಂಡಕರೆ)

 ಮಡಿಕೇರಿ: ಸೋಮವಾರಪೇಟೆ ತಾಲ್ಲೂಕಿನ ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಗುಡಿಸಲು ಕಟ್ಟಿಕೊಂಡು ತನ್ನ ಮಗನೊಂದಿಗೆ ವಾಸ ಮಾಡುತ್ತಿದ್ದ ವಯೋವೃದ್ಧೆ ಬೈರಿ ಅವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.ತಾಲ್ಲೂಕು ಆಡಳಿತ ಎಚ್ಚೆತ್ತುಕೊಂಡು ಬೈರಿ ಅವರಿಗೆ ತಾತ್ಕಾಲಿಕ ಶೆಡ್ ನಿರ್ಧಾರ ಕೈಗೊಂಡಿದೆ.ಶನಿವಾರ ಶಾಸಕ ಡಾ.ಮಂತರ್ ಗೌಡ ಅವರ ಕೂಡ ಭೇಟಿ ನೀಡಿ ಕುಟಂಬದ ಸಮಸ್ಯೆಯನ್ನು ಆಲಿಸಿ,ವೈಯುಕ್ತಿಕ ಪರಿಹಾರ ನೀಡಿ,ಮನೆ ನಿರ್ಮಿಸಿಕೊಡುವ ಬಗ್ಗೆ ಗ್ರಾಮ ಪಂಚಾಯಿತಿ ಪಿಡಿಓ ಅವರಿಗೆ ಸೂಚನೆ ಕೊಟ್ಟಿದ್ದಾರೆ.

 ಇದೀಗ ಹರದೂರು ಗ್ರಾಮ ಪಂಚಾಯಿತಿಯ ಮಲ್ಲಿಕಾರ್ಜುನ ಕಾಲೋನಿಯಲ್ಲಿ ಗುಡಿಸಲು ಕಟ್ಟಿಕೊಂಡು ಜೀವನ ನಡೆಸುತ್ತಿರುವ ಬಡಕುಟುಂಬ ಬೈರಿ ಅವರಿಗೆ ಮಾಜಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮತ್ತು ಸಮಾಜ ಸೇವಕ ಪಿ.ಎಂ.ಲತೀಫ್ ಅವರು ಮಡಿಕೇರಿ ಶಾಸಕರಾದ ಡಾ.ಮಂತರ್ ಗೌಡ ಅವರ ನೆರವಿನೊಂದಿಗೆ ಸ್ವಂತ ಖರ್ಚಿನಲ್ಲಿ ಮನೆ ನಿರ್ಮಿಸಿ ಕೊಡಲು ನಿರ್ಧರಿಸಿದ್ದಾರೆ. ಬಡಕುಟಂಬಕ್ಕೆ ಸ್ವಂತ ಖರ್ಚಿನಲ್ಲಿ ಸೂರು ಒದಗಿಸಲು ಮುಂದೆ ಬಂದಿರುವ ಅಬ್ದುಲ್ ಲತೀಫ್ ಅವರು, ಮುಂದಿನ ವಾರದಿಂದಲೇ ಮನೆಯ ಕಾಮಗಾರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ. ಅಬ್ದುಲ್ ಲತೀಫ್ ಅವರು ಸೂರಿದಲ್ಲದ ಬಡಕುಟಂಬಕ್ಕೆ ಮನೆ ನಿರ್ಮಿಸಿಕೊಡಲು ಮುಂದೆ ಬಂದಿರುವ ಬಗ್ಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗಿದೆ.

ಗರಗಂದೂರುವಿನ ಮಲ್ಲಿಕಾರ್ಜುನ ಕಾಲೋನಿಯ ಬೈರಿ ಅವರ ಕುಟುಂಬಕ್ಕೆ ಶಾಸಕರಾದ ಮಂತರ್ ಗೌಡ ಅವರ ನೆರವಿನ ಮೂಲಕ ಮನೆ ನಿರ್ಮಿಸಿಕೊಡಲು ನಿರ್ಧರಿಸಿದ್ದೇನೆ.ಈಗಾಗಲೇ ನಮ್ಮ ಶಾಸಕರಾದ ಮಂತರ್ ಗೌಡ ಅವರು ಮಲ್ಲಿಕಾರ್ಜುನ ಕಾಲೋನಿಗೆ ಭೇಟಿ ನೀಡಿ,ಬೈರಿ ಅವರ ಕುಟುಂಬದ ಸಮಸ್ಯೆಯನ್ನು ಆಲಿಸಿ ತಕ್ಷಣ ಸ್ಪಂದಿಸಿದ್ದಾರೆ. ನಾನೀಗ ಕಾರ್ಯನಿಮಿತ್ತ ಮಧುರೈನಲ್ಲಿದ್ದು,ಮುಂದಿನವಾರ ಊರಿಗೆ ಮರಳಿದ ತಕ್ಷಣ ಬೈರಿ ಅವರ ಕುಟುಂಬವನ್ನು ಭೇಟಿ ಮಾಡುತ್ತೇನೆ.ಮುಂದಿನ ವಾರದಿಂದಲೇ ಮನೆಯ ಕಾಮಗಾರಿಯನ್ನು ಆರಂಭಿಸುತ್ತೇನೆ.

 ಪಿ.ಎಂ‌ ಅಬ್ದುಲ್ ಲತೀಫ್,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ