ಬೆಳಗ್ಗೆ ಬಂದ ಸುಸ್ತಾಗುತ್ತಿದೆ ನೀರು ಕೊಡಿ ಎಂದ! ಪುನಃ ಮಧ್ಯಾಹ್ನ ಬಂದ ಸುಸ್ತಾಗುತ್ತಿದೆ ಬಾಗಿಲು ತೆರೆಯಿರಿ ಎಂದು ಮಹಿಳೆಯರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣವನ್ನು ಕದ್ದು ಗ್ರಾಮಸ್ಥರಿಂದ ಧರ್ಮದೇಟು ತಿಂದ!

ಮಡಿಕೇರಿ:ಕೊಂಡಂಗೇರಿ ಪರಂಬು ಗ್ರಾಮದಲ್ಲಿ ಹಾಡಹಗಲೇ ಮಹಿಳೆಯರ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣವನ್ನು ಕದ್ದು ಪರಾರಿಯಾಗಿದ್ದ ಪಾಲಿಬೆಟ್ಟ ಮೂಲದ ಯುವಕನನ್ನು ಕೊಂಡಂಗೇರಿ ಗ್ರಾಮಸ್ಥರು ಪತ್ತೆಹಚ್ಚಿ ಧರ್ಮದೇಟು ನೀಡಿದ ಘಟನೆ ಇಡೀ ಜಿಲ್ಲೆ ಬೆಚ್ಚಿಬೀಳಿಸುವಂತಿದೆ.
ಇಂದು(ಸೋಮವಾರ)ಬೆಳಗ್ಗೆ 09 ಗಂಟೆಗೆ ಯುವಕನೊಬ್ಬ ಕೊಂಡಂಗೇರಿ ಪರಂಬು ಗ್ರಾಮದ ಮನೆಯೊಂದರಲ್ಲಿದ್ದ ಅತ್ತೆ ಹಾಗೂ ಸೊಸೆ ಬಳಿ ನನಗೆ ಸುಸ್ತಾಗುತ್ತಿದೆ ನೀರು ಕೊಡಿ ಎಂದು ನೀರು ಕುಡಿದು ಹೋಗಿದ್ದು.ಮತ್ತೆ ಮಧ್ಯಾಹ್ನ 1.30 ಗಂಟೆಗೆ ಅದೇ ಯುವಕ ನನಗೆ ಸುಸ್ತಾಗುತ್ತಿದೆ ಬಾಗಿಲು ತೆರೆಯಿರಿ ಎಂದು ಮನೆಯಲ್ಲಿದ್ದ ಸಾರಮ್ಮ ಹಾಗೂ ಸಫಾನ ಅವರೊಂದಿಗೆ ಕೇಳಿಕೊಂಡಿದ್ದಾರೆ. ಯುವಕನ ಮಾತುಕೇಳಿ ಬಾಗಿಲು ಸಾರಮ್ಮ ಅವರ ಮೇಲೆ ಯುವಕನು ಕತ್ತಿಯಿಂದ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ.ಸಾರಮ್ಮ ಅವರ ಸೊಸೆ ಸಫಾನ ಅವರ ಮೇಲೆ ಕೂಡ ಹಲ್ಲೆ ನಡೆಸಿ ಸಾರಮ್ಮ ಅವರ ಚಿನ್ನದ ಸರವನ್ನು ಕದ್ದು ಪರಾರಿಯಾಗಿದ್ದನು. ಘಟನೆ ನಡೆಯುತ್ತಿದ್ದಂತೆ ಇಡೀ ಕೊಂಡಂಗೇರಿ ಜನತೆ ಅಲರ್ಟ್ ಆಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದ ಯುವಕನಿಗಾಗಿ ಹುಡುಕಾಟ ನಡೆಸಿ ಹಾಲುಗುಂದ ಗ್ರಾಮದಲ್ಲಿ ಯುವಕ ಸಿಕ್ಕಿಬಿದ್ದಿದ್ದನು.ಗ್ರಾಮಸ್ಥರು ಯುವಕನಿಗೆ ಧರ್ಮದೇಟು ನೀಡಿದ್ದರು.ಗ್ರಾಮಸ್ಥರು ಯುವಕನಿಗೆ ಹೊಡೆಯುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಹಲ್ಲೆ ನಡೆಸಿದ ಪಾಲಿಬೆಟ್ಟ ಮೂಲದ ಯುವಕನನ್ನು ಹಿಡಿದು ಕೊಂಡಂಗೇರಿ ಗ್ರಾಮಸ್ಥರು ಪೊಲೀಸರಿಗೆ ಒಪ್ಪಿಸಿದ್ದರು. ಹಲ್ಲೆಗೊಳಗಾದ ಅತ್ತೆ ಸಾರಮ್ಮ ಹಾಗೂ ಸೊಸೆ ಸಫಾನ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮಸ್ಥರಿಂದ ಧರ್ಮದೇಟು ತಿಂದ ಪಾಲಿಬೆಟ್ಟದ ಯುವಕನನ್ನು ಕೂಡ ಚಿಕಿತ್ಸೆಗಾಗಿ ಮಡಿಕೇರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಕೊಂಡಂಗೇರಿಯಲ್ಲಿ ಮಹಿಳೆಯ ಮೇಲೆ ಹಲ್ಲೆಯಾಗಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸ್ ಇಲಾಖೆ ಅಲರ್ಟ್ ಆಗಿ ಎಲ್ಲಾ ಚೆಕ್ ಪೋಸ್ಟ್ ಗಳಿಗೆ ಮಾಹಿತಿ ನೀಡಿದ್ದೇವೆ. ಮಹಿಳೆಯ ಮೇಲೆ ಹಲ್ಲೆ ನಡೆಸಿ ಪ್ರಕರಣವು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದೆಂದು ಎಸ್.ಪಿ ಕೆ.ರಾಮರಾಜನ್ ಹಲ್ಲೆಗೊಳಗಾದ ಮಹಿಳೆಯರನ್ನು ಭೇಟಿ ಮಾಧ್ಯಮದವರೊಂದಿಗೆ ಮಾಹಿತಿ ಹಂಚಿಕೊಂಡರು.