ಮಡಿಕೇರಿ: ನಿನಗೆ ಬೇಕಾದ ಸುಖ ಕೊಡುತ್ತೇನೆ ಬಾ... ಸೇರೋಣ ಎಂದವಳು ಹನಿಟ್ರ್ಯಾಪ್ ಮಾಡಿಸಿದಳು! : ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆಯಿಟ್ಟ ತಾಯಿ,ಮಗಳ ಬಂಧನ

ಮಡಿಕೇರಿ: ನಿನಗೆ ಬೇಕಾದ ಸುಖ ಕೊಡುತ್ತೇನೆ ಬಾ... ಸೇರೋಣ ಎಂದವಳು ಹನಿಟ್ರ್ಯಾಪ್ ಮಾಡಿಸಿದಳು! :  ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ 50 ಲಕ್ಷಕ್ಕೆ ಬೇಡಿಕೆಯಿಟ್ಟ ತಾಯಿ,ಮಗಳ ಬಂಧನ
ತಾಯಿ&ಮಗಳು

ಮಡಿಕೇರಿ, ಡಿ.13: ಫೇಸ್‌ಬುಕ್‌ನಲ್ಲಿ ಪರಿಚಯವಾದ ಮಹಿಳೆಯ ಭೇಟಿಗೆಂದು ಮಂಡ್ಯ ಜಿಲ್ಲೆಯಿಂದ ಮಡಿಕೇರಿಗೆ ಬಂದಿದ್ದ ಯುವಕನನ್ನು ಮನೆಯೊಂದರಲ್ಲಿ ಕೂಡಿ ಹಾಕಿ, ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆ ಇಟ್ಟ ಘಟನೆ ನಗರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಹನಿಟ್ರ್ಯಾಪ್‌ಗೆ ಸಂಬಂಧಿಸಿದೆ ಎಂಬ ಶಂಕೆಯೊಂದಿಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ

ಮಂಡ್ಯ ಜಿಲ್ಲೆಯ ಮದ್ದೂರು ಮೂಲದ ಮಹದೇವ್‌ ಶುಕ್ರವಾರ ಸಂಜೆ ಮಡಿಕೇರಿಗೆ ಆಗಮಿಸಿದ್ದರು. ಫೇಸ್‌ಬುಕ್‌ನಲ್ಲಿ ಪರಿಚಯವಾದ ರಚನಾ ಎಂಬ ಮಹಿಳೆಯ ಆಹ್ವಾನದ ಮೇರೆಗೆ ಅವರು ಬಂದಿದ್ದು, ರಾತ್ರಿ ಸುಮಾರು 10.30ರ ವೇಳೆಗೆ ಮಡಿಕೇರಿ ನಗರದ ಮಂಗಳಾದೇವಿ ಪ್ರದೇಶದ ಮನೆಯೊಂದಕ್ಕೆ ಕರೆದೊಯ್ಯಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ದೂರುದಾರರ ಪ್ರಕಾರ, ರಚನಾ ಫೇಸ್ಬುಕ್ ಮೂಲಕ ಪರಿಚಯವಾಗಿದ್ದಳು. ಎರಡು ಬಾರಿ 5000 ರೂಪಾಯಿ ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡಿದ್ದಳು. ಕೇಳಿದರೆ ಮೈಸೂರು ಅಥವಾ ಕುಶಾಲನಗರಕ್ಕೆ ಬಾ... ರೂಮು ಮಾಡೋಣ. ನಿನಗೆ ಬೇಕಾದ ಸುಖ ಕೊಡುತ್ತೇನೆ... ಸೇರೋಣಾ ಎಂದಿದ್ದಳು. ಅದರಂತೆ ಶುಕ್ರವಾರ ಮಹದೇವ್ ಬಂದಿದ್ದರು. 

ರಾತ್ರಿ 11.45ರ ಸುಮಾರಿಗೆ ರಚನಾಳ ತಾಯಿ ಮಾಲತಿ ಹಾಗೂ ದಿನೇಶ್‌ ಎಂಬಾತ ಮನೆಗೆ ಬಂದಿದ್ದಾರೆ. ಬಳಿಕ ರಚನಾ ಮತ್ತು ಆಕೆಯ ತಾಯಿಯನ್ನು ಹೊರಗೆ ಕಳುಹಿಸಿ, ದಿನೇಶ್‌ ಸುಜೀತ್‌ ಮತ್ತು ದರ್ಶನ್‌ ಎಂಬುವರನ್ನು ಕರೆಸಿಕೊಂಡಿದ್ದಾನೆ. ನಂತರ ಮೂವರು ಸೇರಿಕೊಂಡು ಮಹದೇವ್‌ ಮೇಲೆ ಕೈ, ದೊಣೆ ಹಾಗೂ ಕತ್ತಿಯ ಹಿಡಿಯಿಂದ ಹಲ್ಲೆ ನಡೆಸಿ, ಕೋಣೆಯೊಂದರಲ್ಲಿ ಕೂಡಿ ಹಾಕಿ ಹಣ ನೀಡುವಂತೆ ಒತ್ತಾಯಿಸಿದ್ದಾರೆ ಎನ್ನಲಾಗಿದೆ. ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ವೈರಲ್ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಬೆಳಿಗ್ಗಿನವರೆಗೆ ಬಂಧನದಲ್ಲಿದ್ದ ಮಹದೇವ್‌ ಬಾತ್‌ರೂಮಿಗೆ ಹೋಗುವ ನೆಪದಲ್ಲಿ ಅರೆನಗ್ನಾವಸ್ಥೆಯಲ್ಲಿ ತಪ್ಪಿಸಿಕೊಂಡು ಹೊರಬಂದಿದ್ದಾರೆ. ಬಳಿಕ ಆರೋಪಿಗಳು ಆಟೋದಲ್ಲಿ ಅಪಹರಿಸಲು ಯತ್ನಿಸಿದ್ದು, ಆ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿವೆ.

ಘಟನೆಯ ನಂತರ ಮಹದೇವ್‌ ಮಡಿಕೇರಿ ನಗರ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ತೆರಳುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಹಲ್ಲೆಗೆ ಬಳಸಲಾಗಿದೆ ಎನ್ನಲಾದ ಕೆಲವು ಮಾರಕಾಸ್ತ್ರಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪೊಲೀಸ್‌ ಮೂಲಗಳ ಪ್ರಕಾರ, ರಚನಾ ಮಡಿಕೇರಿ ನಗರದ ಆಶೋಕಪುರ ನಿವಾಸಿಯಾಗಿದ್ದು, ಹಿಂದೆಯೇ ಪೊಲೀಸ್‌ ಕಾನ್ಸ್ಟೇಬಲ್ ಜೊತೆ ವಿವಾಹವಾಗಿದ್ದಳು. ವೈಯಕ್ತಿಕ ಕಾರಣಗಳಿಂದಾಗಿ ವಿಚ್ಛೇದನವಾಗಿದೆ ಎನ್ನಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಚನಾ, ಆಕೆಯ ತಾಯಿ ಮಾಲತಿ, ದಿನೇಶ್‌, ಸುಜೀತ್‌, ದರ್ಶನ್‌ ಹಾಗೂ ಆಟೋ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾಯಿ ಮತ್ತು ಮಗಳನ್ನು ಪೊಲೀಸರು ಬಂಧಿಸಿದ್ದಾರೆ. ಉಳಿದ ಆರೋಪಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.