ಭಾರತಕ್ಕೆ 93 ವರ್ಷದ ಟೆಸ್ಟ್ ಇತಿಹಾಸದಲ್ಲೇ ಹೀನಾಯ ಮುಖಭಂಗ

ಭಾರತಕ್ಕೆ 93 ವರ್ಷದ ಟೆಸ್ಟ್ ಇತಿಹಾಸದಲ್ಲೇ ಹೀನಾಯ ಮುಖಭಂಗ
Photo credit: ICC Instagram (ಫೋಟೋ: ಸೌತ್ ಆಫ್ರಿಕಾ ತಂಡದ‌ ಸಂಭ್ರಮ)

ಕೊಲ್ಕತ್ತಾ: ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಟೀಮ್ ಇಂಡಿಯಾಗೆ 93 ವರ್ಷದ ಟೆಸ್ಟ್ ಇತಿಹಾಸದಲ್ಲೇ ಹೀನಾಯವಾಗಿ ಸೋತಿದೆ. ಕೇವಲ 124 ರನ್‌ಗಳ ಸರಳ ಗುರಿಯನ್ನು ಬೆನ್ನತ್ತುವಾಗ ಭಾರತ 93 ರನ್‌ಗಳಿಗೆ ಆಲೌಟ್ ಆಗಿ 30 ರನ್‌ಗಳಿಂದ ಸೋತಿದೆ.

ಮೊದಲು ಬ್ಯಾಟ್ ಮಾಡಿದ ಆಫ್ರಿಕಾ 159 ರನ್‌ ಗಳಿಗೆ ಆಲೌಟ್‌ ಆಗಿದ್ದು, ಭಾರತ 189 ರನ್‌ಗಳನ್ನು ಕಲೆಹಾಕಿ 30 ರನ್‌ಗಳ ಮುನ್ನಡೆ ಸಾಧಿಸಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಫ್ರಿಕಾ 153 ರನ್‌ಗಳನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಭಾರತಕ್ಕೆ ಗೆಲುವಿನ ದಾರಿಯಲ್ಲಿ ದೊಡ್ಡ ಅಡೆತಡೆ ಯಾವುದೂ ಕಾಣಲಿಲ್ಲ.

ಆದಾಗ್ಯೂ ಭಾರತೀಯ ಟಾಪ್‌ಆರ್ಡರ್‌ನಿಂದ ಟೇಲ್‌ಎಂಡರ್‌ವರೆಗೆ ಎಲ್ಲರೂ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ ಪರಿಣಾಮ ಕೇವಲ 93 ರನ್‌ಗಳ ಸಣ್ಣ ಮೊತ್ತಕ್ಕೆ ತಂಡ ಆಲೌಟ್‌ ಆಗಿ ಸೋಲು ಒಪ್ಪಿಕೊಳ್ಳಬೇಕಾಯಿತು.

ತವರಿನಲ್ಲಿ 130 ರನ್‌ಗಿಂತ ಕಡಿಮೆ ಗುರಿ ಬೆನ್ನತ್ತಲಾಗದೇ ಭಾರತ ಸೋತಿರುವುದು ಇದೇ ಮೊದಲು ಎನ್ನುವ ದಾಖಲೆ ಈ ಪಂದ್ಯದಿಂದ ನಿರ್ಮಾಣವಾಗಿದೆ. 2024ರಲ್ಲಿ ಮುಂಬೈನ ವಾಂಖೆಡೆ ಮೈದಾನದಲ್ಲಿ ನ್ಯೂಝಿಲೆಂಡ್ ವಿರುದ್ಧ 147 ರನ್‌ಗಳ ಗುರಿ ಬೆನ್ನತ್ತುವಾಗ ಉಂಟಾದ ಸೋಲು ಆವರೆಗಿನ ಹೀನಾಯಕ ದಾಖಲೆ. ಆದರೆ ಈಡನ್ ಗಾರ್ಡನ್ಸ್‌ನಲ್ಲಿ ಕಂಡ ಕುಸಿತ ಅದಕ್ಕೂ ಮೀರಿದಂತಾಗಿದೆ.