ತಿತಿಮತಿಯ ಶ್ವೇತಾ ಸುಬ್ರಮಣಿ ಅವರಿಗೆ ಅಂತಾರಾಷ್ಟ್ರೀಯ ಬಹುಮುಖ ಪ್ರತಿಭೆ ಪುರಸ್ಕಾರ

ತಿತಿಮತಿಯ ಶ್ವೇತಾ ಸುಬ್ರಮಣಿ ಅವರಿಗೆ ಅಂತಾರಾಷ್ಟ್ರೀಯ ಬಹುಮುಖ ಪ್ರತಿಭೆ ಪುರಸ್ಕಾರ

ಮಡಿಕೇರಿ: ಆಗಸ್ಟ್ 31ರಂದು ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಪ್ರೆಸ್ ಕ್ಲಬ್ ವೆಲ್ಫೇರ್ ವರ್ಲ್ಡ್ ವೈಡ್ ಫೌಂಡೇಶನ್ ಅವರು ಆಯೋಜಿಸಿದ ಇಂಟರ್ನ್ಯಾಷನಲ್ ಸೋಶಿಯಲ್ ಅವಾರ್ಡ್ ನಲ್ಲಿ ತಿತಿಮತಿ ನಿವಾಸಿಯಾದ ಶ್ವೇತಾ ಸುಬ್ರಮಣಿ ಅವರಿಗೆ ಅಂತಾರಾಷ್ಟ್ರೀಯ ಬಹುಮುಖ ಪ್ರತಿಭೆ ಎಂಬ ಬಿರುದು ನೀಡಿ ಸನ್ಮಾನಿಸಲಾಯಿತು. ಇವರು ತಿತಿಮತಿ ನಿವಾಸಿಯಾದ ಹಾಗೂ ಆರಕ್ಷಕ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಬ್ರಮಣಿ ಅವರ ಪತ್ನಿಯಾಗಿದ್ದು, ಬಿಳುಗುಂದ ನಿವಾಸಿಯಾದ ಕಾಂತರಾಜ್ ಹಾಗೂ ಹೇಮಾವತಿ ದಂಪತಿಯ ಪುತ್ರಿಯಾಗಿದ್ದಾರೆ. ಮತ್ತು ತಿತಿಮತಿಯ ಯಾಹವಿ ಡಾನ್ಸ್ ಅಕಾಡೆಮಿಯ ನಿರ್ದೇಶಕರಾಗಿದ್ದಾರೆ.