ಕರ್ನಾಟಕ ಕಾನೂನು ವಿವಿ ಫಲಿತಾಂಶ: ವೀರಾಜಪೇಟೆ ವೆಂಕಟೇಶ ಕಾಮತ್ ಗೆ ರಾಜ್ಯಕ್ಕೆ 4ನೇ ಸ್ಥಾನ

ಗೋಣಿಕೊಪ್ಪಲು: ಮೂಲತಃ ವೀರಾಜಪೇಟೆ ನಿವಾಸಿ, ಬೆಂಗಳೂರು ಸಂತ ಜೋಸೆಫ್ ಲಾ ಕಾಲೇಜು ವಿದ್ಯಾರ್ಥಿ ಎನ್.ವೆಂಕಟೇಶ್ ಕಾಮತ್ ಇವರು ಕರ್ನಾಟಕ ರಾಜ್ಯ ಕಾನೂನು ವಿಶ್ವ ವಿದ್ಯಾಲಯದ 2023-24 ನೇ ಸಾಲಿನ ಫಲಿತಾಂಶದಲ್ಲಿ ರಾಜ್ಯಕ್ಕೆ 4 ನೇ ಸ್ಥಾನಗಳಿಸಿ ಸಾಧನೆ ಮಾಡಿದ್ದಾರೆ.
ಇವರು ಕೊಡಗಿನ ವೀರಾಜಪೇಟೆಯ ನಿವಾಸಿ ಸುಪ್ರೀಂ ಕೋರ್ಟ್ ಹಾಗೂ ಹೈಕೋರ್ಟ್ ಹಿರಿಯ ವಕೀಲ ಎನ್.ರವೀಂದ್ರನಾಥ್ ಕಾಮತ್ ಹಾಗೂ ವಿದ್ಯಾ ಕಾಮತ್ ದಂಪತಿಯ ಕಿರಿಯ ಪುತ್ರ.ಇದೀಗ ವೆಂಕಟೇಶ್ ಕಾಮತ್ ಅವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದು ಕೊಡಗಿನ ಪ್ರಸಿದ್ಧ ದಸ್ತಾವೇಜು ಬರಹಗಾರರಾಗಿದ್ದ ಎನ್.ವೆಂಕಟೇಶ್ ಕಾಮತ್ ಇವರ ಮೊಮ್ಮಗ.
What's Your Reaction?






