ಕೊಡಗು ಜಿಲ್ಲಾ ಮಹಿಳಾ ಬ್ಯಾಂಕ್ ಗೆ 9.45 ಲಕ್ಷ ರೂ ನಿವ್ವಳ ಲಾಭ

ಮಡಿಕೇರಿ: ನಗರದ ಕೊಡಗು ಜಿಲ್ಲಾ ಮಹಿಳಾ ಬ್ಯಾಂಕ್ 2024-25ನೇ ಸಾಲಿನಲ್ಲಿ 9.45 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಎಂದು ಬ್ಯಾಂಕಿನ ಅಧ್ಯಕ್ಷೆ ಅರವಿಂದ ಅಣ್ಣಪ್ಪ ತಿಳಿಸಿದರು. 1997ರಲ್ಲಿ ಜಿಲ್ಲೆಯ ಹಿರಿಯ ಮಹಿಳೆ ಗಂಗಮ್ಮ ಬೋಪಯ್ಯ ಮತ್ತು ಪ್ರೇಮ ಸೋಮಯ್ಯ ಅವರು ಮಹಿಳೆಯರಿಗಾಗಿ ಬ್ಯಾಂಕ್ ಸ್ಥಾಪನೆ ಮಾಡಿದರು. ಜಿಲ್ಲೆಯ ಏಕೈಕ ಮಹಿಳಾ ಬ್ಯಾಂಕ್ ಇದಾಗಿದೆ. ಇಂದು ಬ್ಯಾಂಕಿನಲ್ಲಿ ಒಟ್ಟು 2376 ಸದಸ್ಯರಿದ್ದಾರೆ. ಪಾಲುಬಂಡವಾಳ 44.06 ಲಕ್ಷ ರೂ ಇದ್ದು, ಒಟ್ಟು ಠೇವಣಿ 10.07 ಕೋಟಿ ರೂ. ಆಗಿದೆ ಎಂದು ಮಾಹಿತಿ ನೀಡಿದರು.
ಮಹಾಸಭೆ: ನಗರದ ಕೊಡವ ಸಮಾಜದಲ್ಲಿ ಸೆ.18ರಂದು ವಾರ್ಷಿಕ ಮಹಾಸಭೆಯ ನಡೆಯಲಿದೆ. ಮಹಾಸಭೆಗೆ ಸಂಘದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು. ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನಿಂದ ನೀಡಲಾಗುವ ಅತ್ಯುತ್ತಮ ಪಟ್ಟಣ ಬ್ಯಾಂಕ್ ಪ್ರಶಸ್ತಿಯನ್ನು ನಮ್ಮ ಬ್ಯಾಂಕ್ 3 ಬಾರಿ ಪಡೆದ ಹೆಮ್ಮೆಗೆ ಪಾತ್ರವಾಗಿದೆ. ವಿವಿಧ ರೀತಿಯ ಸಾಲ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಪಿ.ಶೈಲಿ, ನಿರ್ದೇಶಕರಾದ ಎಂ.ಎಂ.ಶ್ಯಾಮಲ ದಿನೇಶ್, ಪಿ.ಪ್ರೇಮ ಕರುಂಬಯ್ಯ, ಸಿ.ಲೀಲಾ ಮೇದಪ್ಪ, ಆಶಾ ಚಿಣ್ಣಪ್ಪ ಉಪಸ್ಥಿತರಿದ್ದರು.