ಸಚಿವ ಸಂಪುಟ ವಿಸ್ತರಣೆ ಸಂದರ್ಭ ಜಿಲ್ಲೆಯ ಶಾಸಕರಿಗೆ ಆದ್ಯತೆ ನೀಡುವಂತೆ ಕೊಡಗು ಗೌಡ ಹಿತ ರಕ್ಷಣಾ ವೇದಿಕೆ ಒತ್ತಾಯ
ಮಡಿಕೇರಿ: ಜಿಲ್ಲೆಗೆ ಮುಂದಿನ ಸಚಿವ ಸಂಪುಟ ವಿಸ್ತರಣೆ ಸಂದರ್ಭ ಜಿಲ್ಲೆಯ ಶಾಸಕರಿಗೆ ಆದ್ಯತೆ ನೀಡುವಂತೆ ಕೊಡಗು ಗೌಡ ಹಿತ ರಕ್ಷಣಾ ವೇದಿಕೆ ಪ್ರಮುಖರು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಗೌರವ ಸಂಚಾಲಕ ಪಿ.ಎಲ್.ಸುರೇಶ್, ಎಸ್.ಎಂ.ಕೃಷ್ಣ ಸರ್ಕಾರದಲ್ಲಿ ಜಿಲ್ಲೆಯ ಮೂವರನ್ನು ಸಚಿವ ಸಂಪುಟ ಸೇರ್ಪಡೆಯಾಗಿರುವುದು ಜಿಲ್ಲೆಗೆ ಹೆಗ್ಗಳಿಕೆ ಆಗಿದೆ. ಆ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ಅಪ್ಪಚ್ಚು ರಂಜನ್‌ರವರಿಗೆ ಸಚಿವ ಸ್ಥಾನ ನೀಡಿದ್ದು, ಜಿಲ್ಲೆಯ ಉಸ್ತುವಾರಿ ಸಚಿವರು ನೀಡಿದು ಸಮಾಧಾನವಷ್ಟೇ. ಆನಂತರ ಬಂದಿರುವ ಯಾವುದೇ ಸರ್ಕಾರದಲ್ಲಿ ಕೊಡಗು ಜಿಲ್ಲೆಯ ಯಾವುದೇ ಶಾಸಕರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿರವೇ ಇರುವುದು ಕೊಡಗು ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗಿದೆ ಎಂದರು.
ಈ ಬಾರಿ ಕೊಡಗಿನ ಪ್ರತಿಭಾವಂತ ಶಾಸಕರು ಮತ್ತು ಕಾನೂನು ತಜ್ಞರಾದ ಎ.ಎಸ್.ಪೊನ್ನಣ್ಣ, ಕೊಡಗು ಜಿಲ್ಲೆಯ ಎಲ್ಲಾ ಸಮಸ್ಯೆಗಳನ್ನು ಹತ್ತಿರದಿಂದ ಬಲ್ಲವರಾಗಿದ್ದಾರೆ. ಕ್ಷೇತ್ರದಲ್ಲಿ ಅತ್ಯುತ್ತಮ ಹಲವಾರು ಜನಪರ ಕಾರ್ಯಕ್ರಮ ಮಾಡುತ್ತಿದ್ದು, ಜಾತಿ ಧರ್ಮಕ್ಕೆ ಮಾನ್ಯತೆ ಕೊಡದೆ ಎಲ್ಲಾ ಜಾತಿ ವರ್ಗದವರಿಗೆ ಸಮಾನವಾಗಿ ಕಂಡು ಎಲ್ಲರ ಅಚ್ಚುಮೆಚ್ಚಿನ ಜನಪ್ರಿಯ ಶಾಸಕರಾಗಿದ್ದಾರೆ. ಇವರಿಗೆ ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸಚಿವ ಸ್ಥಾನ ಕೊಟ್ಟು ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಿಸಬೇಕು.
ಅದೇ ರೀತಿ ಜನಪರ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡಿರುವ ಶಾಸಕ ಮಂತರ್‌ಗೌಡ ಅವರನ್ನು ಸಚಿವ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಕೊಡಗು ಗೌಡ ಹಿತ ರಕ್ಷಣಾ ವೇದಿಕೆಯ ಪ್ರಧಾನ ಸಂಚಾಲಕ ಪರಮಲೆ ಗಣೇಶ್, ಸಂಚಾಲಕ ಪಟ್ಟಡ ದೀಪಕ್, ಪ್ರಮುಖರಾದ ಕಳೇರಮ್ಮನ ಕುಮಾರ್, ಪ್ರತಾಪ್ ಕುಮಾರ್, ಪೂಜಾರಿರ ಪ್ರದೀಪ್ ಕುಮಾರ್ ಇದ್ದರು.
