ಏಪ್ರಿಲ್ 24ರಿಂದ ಕೊಡವ ಜಮ್ಮಾ ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿ

ಏಪ್ರಿಲ್ 24ರಿಂದ ಕೊಡವ ಜಮ್ಮಾ ಮುಸ್ಲಿಂ ಕ್ರಿಕೆಟ್ ಪಂದ್ಯಾವಳಿ

ಮಡಿಕೇರಿ: ಕೊಡವ ಜಮ್ಮಾ ಮುಸ್ಲಿಂ ಸಮಾಜಬಾಂದವರಿಗಾಗಿ ಪುಡಿಯಂಡ ದೇವಣಗೇರಿ-ಕೊಂಡಂಗೇರಿ ಕುಟುಂಬದ ವತಿಯಿಂದ ಕೊಡವ ಜಮ್ಮಾ ಮುಸ್ಲಿಂ ಸ್ಫೋರ್ಟ್ಸ್ ಮತ್ತು ಕಲ್ಚರಲ್ ಅಸೋಷಿಯೇಷನ್ ಆಶ್ರಯದಲ್ಲಿ ೩ನೇ ವರ್ಷದ ಕ್ರಿಕೆಟ್ ಪಂದ್ಯಾಟವನ್ನು ಏ.೨೪ರಿಂದ ಎಸ್.ಎಂ.ಎಸ್ ಶಾಲಾ ಮೈದಾನದಲ್ಲಿ ನಡೆಯಲಿದೆ ಎಂದು ಪುಡಿಯಂಡ ಕುಟುಂಬದ ಅಧ್ಯಕ್ಷ ಉಸ್ಮಾನ್ ತಿಳಿಸಿದ್ದಾರೆ.

ಕ್ರಿಕೆಟ್ ಪಂದ್ಯಾಟವು ಕುಟುಂಬದಲ್ಲಿರುವ ಯುವಕರ ಪ್ರತಿಭೆ ಪ್ರದರ್ಶಿಸಲು ಅವಕಾಶಕಲ್ಪಿಸುತ್ತಿದೆ. ಇದರೊಂದಿಗೆ ಶಿಕ್ಷಣಕ್ಕೆ ಒತ್ತು ನೀಡುವುದು ಪ್ರಮುಖ ಧೈಯವಾಗಿದೆ. ಪ್ರಥಮ ವರ್ಷ ಕುವಲೆರ ಚಾಮಿಯಾಲ ಕುಟುಂಬ, ದ್ವಿತೀಯ ವರ್ಷ ಆಲಿರ ಕುಟುಂಬಸ್ಥರು ಕ್ರಿಕೆಟ್ ಕ್ರೀಡಾಕೂಟವನ್ನು ಆಯೋಜಿಸಿದ್ದರು. ೨೦೨೬ರಲ್ಲಿ ಪುಡಿಯಂಡ ದೇವಣಗೇರಿ-ಕೊಂಡಂಗೇರಿ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ ಎಂದು ತಿಳಿಸಿದರು.

 ಅಂದು ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಸಂಸದರು, ವಿಧಾನ ಪರಿಷತ್ ಸದಸ್ಯರು, ಶಾಸಕರುಗಳು ಎಲ್ಲಾ ರಾಜಕೀಯ ಪಕ್ಷದ ಮುಖಂಡರುಗಳು, ಕೊಡವ ಜಮ್ಮಾ ಮುಸ್ಲಿಂ ಸಂಘಟನೆ ಆಡಳಿತ ಮಂಡಳಿ, ಕೆ.ಎಂ.ಎ ಆಡಳಿತ ಮಂಡಳಿ, ಕುಟುಂಬದ ಎಲ್ಲಾ ತಕ್ಕ ಮುಖ್ಯಸ್ಥರುಗಳು, ಹಾಗೂ ಎಲ್ಲಾ ಜನಾಂಗದ ಮುಖ್ಯಸ್ಥರುಗಳು ಭಾಗವಹಿಸಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಕುಟುಂಬದ ಕಾರ್ಯದರ್ಶಿ ಅಬ್ದುಲ್ ರಹೀಂ, ಕುಟುಂಬಸ್ಥರಾದ ಶಾದಲಿ, ಸಮದ್, ಅಯಮದ್, ಮೊಯ್ದು ಇದ್ದರು.