ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳ ದಲಿತರ ಭೂ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ದ ಸೆ. 22 ರಂದು ಕೊಡ್ಲಿಪೇಟೆಯಲ್ಲಿ ಬೃಹತ್ ಪ್ರತಿಭಟನೆ

ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳ ದಲಿತರ ಭೂ ಸಮಸ್ಯೆ ಬಗೆಹರಿಸದ ಅಧಿಕಾರಿಗಳ ವಿರುದ್ದ ಸೆ. 22 ರಂದು ಕೊಡ್ಲಿಪೇಟೆಯಲ್ಲಿ ಬೃಹತ್ ಪ್ರತಿಭಟನೆ

ಶನಿವಾರಸಂತೆ:-‘ದಲಿತರ ಭೂ ಸಮಸ್ಯೆಗಳನ್ನು ಬಗೆಹರಿಸದ ಅಧಿಕಾರಿಗಳನ್ನು ಕೂಡಲೆ ಅಮಾನತ್ತುಗೊಳಿಸುವಂತೆ ಒತ್ತಾಯಿಸಿ ಸೆ೨೨ ರಂದು ಕೊಡ್ಲಿಪೇಟೆ ನಾಡ ಕಛೇರಿ ಮುಂಭಾಗದಲ್ಲಿ ಧರಣಿ ನಡೆಸಲಾಗುವುದೆಂದು ಡಿಎಸ್‌ಎಸ್ ಜಿಲ್ಲಾ ಸಂಯೋಜಕ ಎಂ.ಎನ್.ರಾಜಪ್ಪ ಹೇಳಿದರು.

 ಶನಿವಾರಸಂತೆಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಕೊಡ್ಲಿಪೇಟೆ ಹೋಬಳಿಯಲ್ಲಿ ದಲಿತರ ಭೂಮಿಗೆ ಸಂಬಂಧಪಟ್ಟಂತೆ ಮತ್ತು ಪಿಟಿಸಿಎಲ್ ಖಾಯಿದೆಗೆ ಸಂಬಂಧಿಸಿದಂತೆ ಹಾಗೂ ನಂ ೫೭ನೇ ಅರ್ಜಿ ವಿಚಾರಕ್ಕೆ ಸಂಬಂಧ ಪಟ್ಟಂತೆ ಮತ್ತು ಈ ಹಿಂದೆ ಏರ್‌ಟೆಲ್ ಟವರ್ ವಿಚಾರಕ್ಕೆ ಕೊಡ್ಲಿಪೇಟೆಯ ನಂದಿಪುರ ಗ್ರಾಮದ ಸ.ನಂ.೮೮/೧ ರ ಪೈಸಾರಿ ಭೂಮಿಯನ್ನು ಕೆ.ಕೆ.ಲೋಕೇಶ್ ಎಂಬುವರು ಏರ್‌ಟೆಲ್ ಟವರ್ ನಿರ್ಮಾಣಕ್ಕೆ ಕಾನೂನು ಬಾಹಿರವಾಗಿ ನೀಡಿದ್ದು ಮತ್ತು ಸಿವಿಲ್ ನ್ಯಾಯಾಲಯದ ಆದೇಶದ ಪ್ರಕಾರ ಇವರಿಂದ ತೆರವುಗೊಳಿಸಿ ಕಂದಾಯ ಇಲಾಖೆ ಹಾಗೂ ಸದರಿ ಗ್ರಾ.ಪಂ. ಮಧ್ಯಪ್ರವೇಶಿಸಿ ಆದೇಶ ನೀಡಿರುತ್ತಾರೆ ಎಂದು ಹೇಳಿದ ರಾಜಪ್ಪ ಇನ್ನುಳಿದಂತೆ ಕೊಡ್ಲಿಪೇಟೆ ಹೋಬಳಿಯ ಹೆಬ್ಬುಲ್ಸೆ, ತಳಗೂರು, ಕೂಡ್ಲೂರು ಗ್ರಾಮಗಳಲ್ಲಿ ಭೂ ಸಮಸ್ಯೆ ಮತ್ತು ಶನಿವಾರಸಂತೆ ಹೋಬಳಿಯ ಹೆಮ್ಮನೆ, ಚನ್ನಾಪುರ, ಬೀಕನಹಳ್ಳಿ ಗ್ರಾಮಗಳಲ್ಲಿ ಭೂ ಸಮಸ್ಯೆ ಇದು ಎಲ್ಲಾವೂ ಒಳಗೊಂಡಂತೆ ದಲಿತರ ಭೂ ಸಮಸ್ಯೆಗಯಾಗಿದೆ ಮತ್ತು ಸಮಸ್ಯೆಗಳು ನೆನೆಗುದಿಗೆ ಬಿದ್ದಿದ್ದು ಯಾವ ಸಮಸ್ಯೆಯನ್ನು ಇದುವರೆಗೂ ಬಗೆಹರಿಸಿಲ್ಲ ಎಂದು ಆರೋಪಿಸಿದ ರಾಜಪ್ಪ,

 ದಲಿತರ ಭೂ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ್ಯತನ ತೋರಿರುವುದ್ದರಿಂದ ನೆನೆಗುದಿಗೆ ಬೀಳಲು ಕಾರಣವಾಗಿದೆ. ಈ ನಿಟ್ಟಿನಲ್ಲಿ ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳ ಕಂದಾಯ ಪರಿವೀಕ್ಷಕರು, ಗ್ರಾಮ ಲೆಕ್ಕಾಧಿಕಾರಿಗಳು ಕೂಡಲೆ ಈ ಎಲ್ಲಾ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು.

ಜಿಲ್ಲಾ ಸಂಘಟನಾ ಸಂಯೋಜಕ ಎನ್.ಆರ್.ದೇವರಾಜ್ ಮಾತನಾಡಿ,ಕೊಡ್ಲಿಪೇಟೆ ಮತ್ತು ಶನಿವಾರಸಂತೆ ಹೋಬಳಿಗಳಲ್ಲಿ ದಲಿತರ ಭೂ ಸಮಸ್ಯೆ ಸೇರದಂತೆ ದಲಿತರಿಗೆ ಅನ್ಯಾಯವಾಗುತ್ತಿದ್ದರೂ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಎಚ್ಚೆತ್ತು ಸರಿಪಡಿಸದಿದ್ದಲ್ಲಿ ಸಂಘಟನೆಯು ಜಿಲ್ಲಾಯಾದ್ಯಂತ ಹೋಬಳಿ ಮತ್ತು ತಾಲೂಕುಗಳ ಕಚೇರಿ ಮುಂಭಾಗದಲ್ಲಿ ಇನ್ನು ಬೃಹತ್ ಹೋರಾಟ ನಡೆಸಲಾಗುವುದೆಂದು ಎಂದು ಎಚ್ಚರಿಸಿದ ಅವರು,

ಈ ಕುರಿತಾಗಿ ಸೆ೨೨ ರಂದು ಸೋಮವಾರ ಕೊಡ್ಲಿಪೇಟೆ ಕಂದಾಯ ಇಲಾಖೆಯ ಕಚೇರಿ ಮುಂಭಾಗದಲ್ಲಿ ಜಿಲ್ಲಾ ದಸಂಸ ಶಾಖೆ ವತಿಯಿಂದ ಬೃಹತ್ ಪ್ರತಿಭಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾರ್ಯದರ್ಶಿ ಎಂ.ಇ.ಪೊನ್ನಪ್ಪ, ತಾಲೂಕು ಸಂಯೋಜಕ ಚಂದ್ರಶೇಖರ್, ಜಿಲ್ಲಾ ಸಮಿತಿ ಸದಸ್ಯ ಮಂಜುನಾಥ್ ಮತ್ತು ಧರ್ಮರಾಜ್ ಹಾಜರಿದ್ದರು.